More

    ಜಿಯೋದಿಂದ ಭಾರತದಲ್ಲೇ ಅಗ್ಗದ 5ಜಿ ಫೋನ್: ಬೆಲೆ ಇಷ್ಟು ಕಡಿಮೆನಾ?

    ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಿಲಯನ್ಸ್ ನ ಜಿಯೋ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಬಾರಿ ಅಗ್ಗದ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದೆ.

    ಇದನ್ನೂ ಓದಿ: ‘ಅಂತಹ ವಿಷಯಗಳ ಕಡೆ ಗಮನ ಹರಿಸಲ್ಲ’: ಹೀಗಂದಿದ್ದೇಕೆ ಮಿಲ್ಕಿ ಬ್ಯೂಟಿ ತಮನ್ನಾ?

    ಈ ವರ್ಷದ ಅಂತ್ಯದ ವೇಳೆಗೆ ರಿಲಯನ್ಸ್ ಜಿಯೋ ಮತ್ತು ಕ್ವಾಲ್ಕಾಮ್ 8000ರೂ.ಗಿಂತ ಕಡಿಮೆ ಬೆಲೆಯ 5 ಜಿ ಫೋನ್ ಅನ್ನು ಪ್ರಾರಂಭಿಸಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. ಹೊಸ ಸಾಧನವು ಭಾರತದಲ್ಲಿ 250 ಮಿಲಿಯನ್ 2ಜಿ ಮತ್ತು 3ಜಿ ಬಳಕೆದಾರರು ಸುಲಭವಾಗಿ 4ಜಿ ಮತ್ತು 5ಜಿಗೆ ಶಿಫ್ಟ್ ಆಗಲು ನೆರವಾಗುತ್ತದೆ. ಕೇವಲ 9000 ರೂ.ಗೆ ಈ ಮೊಬೈಲ್ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

    ಜಿಯೋದ ಕೈಗೆಟುಕುವ 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಹಲವು ವಿಚಾರ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಜಿಯೋ 5ಜಿ ಫೋನ್‌ಗೆ ಸಂಬಂಧಿಸಿದ ಹಲವಾರು ವಿಷಯಗಳು ಕಾಣಿಸಿಕೊಂಡಿವೆ

    ಆದರೆ ಕ್ವಾಲ್ಕಾಮ್‌ನಲ್ಲಿ ಎಸ್​ವಿಪಿ ಮತ್ತು ಕ್ವಾಲ್ಕಾಮ್‌ನ ಹ್ಯಾಂಡ್‌ಸೆಟ್‌ಗಳ ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಅವರ ಮಾತಿನಂತೆ ಕಡಿಮೆ ಬೆಲೆಯ ಮೊಬೈಲ್ ಶೀಘ್ರ ಜನರ ಕೈಗೆ ಸಿಗಲಿವೆ ಎನ್ನುತ್ತಾರೆ.

    ‘ಹೊಸ ಚಿಪ್‌ಸೆಟ್‌ನೊಂದಿಗೆ, ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸಂಪೂರ್ಣ 5ಜಿ ಅನುಭವವನ್ನು ನೀಡಲು ನಾವು ಮುಂದಾಗಿದ್ದೇವೆ. 4ಜಿ ಮತ್ತು 5ಜಿ ನಡುವಿನ ಪರಿವರ್ತನೆಯ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ’ ಎಂದು ಕ್ರಿಸ್ ಹೇಳಿದರು.

    ಜಿಯೋ ಕೈಗೆಟುಕುವ ಫೋನ್‌ಗಾಗಿ ಜಾಗತಿಕ ಟೆಕ್ ದೈತ್ಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ.

    ದಿ ಇಂದ್ರಾಣಿ ಮುಖರ್ಜಿ ಸ್ಟೋರಿ ಸೀರಿಸ್ ತಡೆಗೆ ಬಾಂಬೆ ಹೈ ಕೋರ್ಟ್ ನಕಾರ: ಸಿಬಿಐ ಅರ್ಜಿ ವಜಾ, ಏನಿದು ಕೇಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts