More

    ಮತ್ತೆ ಜತೆಯಾಗ್ತಿದ್ದಾರೆ ಬಿಗ್​ ಬಿ, ಅಜಯ್​ …

    ಮುಂಬೈ: ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮತ್ತು ಅಜಯ್​ ದೇವಗನ್​ ಜತೆಯಾಗಿ ನಟಿಸುವುದು ಹೊಸ ವಿಷಯವೇನಲ್ಲ. ಈಗಾಗಲೇ ಅವರಿಬ್ಬರೂ ‘ಮೇಜರ್​ ಸಾಬ್​’, ‘ಖಾಕಿ’, ‘ಸತ್ಯಾಗ್ರಹ’ ಮುಂತಾದ ಚಿತ್ರಗಳಲ್ಲಿ ನಟಿಸದಿದ್ದಾರೆ.

    ಇದನ್ನೂ ಓದಿ: PHOTOS| ಪತಿ ಜತೆಗಿನ ಚುಂಬನದ ಫೋಟೋ ಶೇರ್ ಮಾಡಿಕೊಂಡ ಕಾಜಲ್​

    ‘ಸತ್ಯಾಗ್ರಹ’ ನಂತರ ಅವರಿಬ್ಬರೂ ಯಾವೊಂದು ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಈಗ ಕೆಲವು ವರ್ಷಗಳ ನಂತರ ಅವರಿಬ್ಬರೂ ‘ಮೇಡೇ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಈ ಚಿತ್ರವನ್ನು ಅಜಯ್​ ದೇವಗನ್​ ನಿರ್ದೇಶನ ಮಾಡುತ್ತಿರುವುದು ವಿಶೇಷ.

    ಲಾಕ್​ಡೌನ್​ ಸಮಯದಲ್ಲಿ ಅಜಯ್​ ದೇವಗನ್​ ಅವರು ‘ಮೇಡೇ’ ಚಿತ್ರದ ಸ್ಕ್ರಿಪ್ಟ್​ ಮಾಡುತ್ತಾ ಕೂತಿದ್ದರಂತೆ. ಈ ಸಂದರ್ಭದಲ್ಲಿ ಒಂದು ಪಾತ್ರದಲ್ಲಿ ಅಮಿತಾಭ್​ ಬಚ್ಚನ್​ ನಟಿಸಿದರೆ ಚೆನ್ನಾಗಿರುತ್ತದೆ ಎಂದನಿಸಿ, ಅವರನ್ನು ಕೇಳಿದ್ದಾರೆ ಅಜಯ್​. ಕಥೆ ಕೇಳಿದ ಅಮಿತಾಭ್​ ಬಚ್ಚನ್​ ಖುಷಿಯಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ಸಹ ನೀಡಿದ್ದಾರಂತೆ.

    ಈ ಚಿತ್ರ ಮುಂದಿನ ವರ್ಷ ಪ್ರಾರಂಭವಾಗುವುದಕ್ಕೆ ಸಜ್ಜಾಗಿದ್ದು, ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಈ ಚಿತ್ರದಲ್ಲಿ ಅಜಯ್​ ದೇವಗನ್​ ಅವರು ಪೈಲಟ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇದೆಯಾದರೂ, ಅಮಿತಾಭ್​ ಬಚ್ಚನ್​ ಅವರು ಯಾವ ಪಾತ್ರದಲ್ಲಿ ಇರುತ್ತಾರೆ ಎಂಬ ವಿಷಯವನ್ನು ಇನ್ನೂ ಬಹಿರಂಗಗಳಿಸಿಲ್ಲ.

    ಇದನ್ನೂ ಓದಿ: ರಾಜಕೀಯದಿಂದ ದೂರಾದರೆ ಅಪ್ಪ-ಮಗ? ವಿಜಯ್​ ಕುಟುಂಬದಲ್ಲಿ ಬಿರುಕು!

    ಈ ಚಿತ್ರವನ್ನು ಅಜಯ್​ ದೇವಗನ್​ ಅವರ ಅಜಯ್​ ದೇವಗನ್​ ಫಿಲ್ಮ್ಸ್​ ಸಂಸ್ಥೆಯೇ ನಿರ್ಮಿಸಲಿದ್ದು, ಡಿಸೆಂಬರ್​ನಲ್ಲಿ ಹೈದರಾಬಾದ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

    ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts