More

    ಕೃಷಿಗೆ ಮೊದಲ ಆದ್ಯತೆ ನೀಡಿ

    ಅಳವಂಡಿ: ವಿದ್ಯಾರ್ಥಿಗಳು ನಗರದ ಕಾಲೇಜಿಗಳಿಗೆ ತೆರಳುವ ಅವಶ್ಯಕತೆ ಇಲ್ಲ. ಗ್ರಾಮೀಣ ಕಾಲೇಜುಗಳಿಗೆ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

    ಇದನ್ನೂ ಓದಿ: 805 ಹೆಕ್ಟೇರ್‌ನಲ್ಲಿ ಕಲ್ಲಂಗಡಿ ಕೃಷಿ

    ಗ್ರಾಮದ ಶ್ರೀ ಶಿವಮೂರ್ತಿ ಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಐಕ್ಯೂಎಸಿ ಮತ್ತು ವಿವಿಧ ಘಟಕಗಳ ಉದ್ಘಾಟನೆ ಹಾಗೂ ಬಿ.ಎ, ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ವಿದ್ಯಾರ್ಥಿಗಳು ಉನ್ನತ ಮಟ್ಟದ ಗುರಿ ಹೊಂದಬೇಕು. ಅದನ್ನು ಸಾಧಿಸಲು ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮ ಅಗತ್ಯ. ಪರಂಪರೆ ಹಾಗೂ ಮೂಲಗಳನ್ನು ಕಡೆಗಣಿಸದೆ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಉದ್ಯೋಗ ಸೃಷ್ಟಿಸುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರು.

    ವಕೀಲರಾದ ಬಾಳಪ್ಪ ವೀರಾಪುರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕಲಿಯಲು ಎಲ್ಲ ವ್ಯವಸ್ಥೆ ಇದೆ. ಅದರ ಪ್ರಯೋಜನ ಪ್ರತಿಯೊಬ್ಬರೂ ಪಡೆದುಕೊಂಡು ಉನ್ನತ ಮಟ್ಟಕ್ಕೆ ಬೆಳೆದು ಗ್ರಾಮಕ್ಕೆ ಉತ್ತಮ ಹೆಸರು ತರಬೇಕು. ಅಲ್ಲದೇ, ಎಂತಹ ಕಷ್ಟದ ಸಮಯದಲ್ಲೂ ಶಿಕ್ಷಣ ಬಿಡಬಾರದು ಎಂದರು.

    ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗುರು ಬಸವರಾಜ ಹಳ್ಳಿಕೇರಿ, ರಂಗಪ್ಪ ಕರಡಿ, ಉಪನ್ಯಾಸಕರಾದ ಪ್ರೊ.ಜಗದೀಶ, ಪ್ರೋ.ಮಲ್ಲಿಕಾರ್ಜುನ, ಇಮಾಮ್ಸಾಬ, ನಾಗೇಂದ್ರಪ್ಪ, ಪ್ರದೀಪ ಪಲ್ಲೇದ, ವೆಂಕಟೇಶ, ವಿಜಯ ಕುಮಾರ ಕುಲಕರ್ಣಿ, ಇಬ್ರಾಹಿಂ ಸಾಬ, ಅನಿಲ, ವಿನಾಯಕ, ವೀರಯ್ಯ, ರಹಿಮಾನ್ ಸಾಬ, ರಾಘವೇಂದ್ರ, ಹನುಮೇಶ, ಸಿದ್ದಪ್ಪ, ಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts