More

    ಎಜಿಎಂ ಆಯೋಜನೆಗೆ 3 ತಿಂಗಳು ಕಾಲಾವಕಾಶ: ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರದ ಆದೇಶ

    ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಆರ್ಥಿಕ ಸಾಲಿನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಆಯೋಜಿಸಲು ಕಂಪನಿಗಳಿಗೆ 3 ತಿಂಗಳು ಕಾಲಾವಕಾಶ ವಿಸ್ತರಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

    ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಕಂಪನಿಗಳಿಗೆ 3 ತಿಂಗಳ ಕಾಲವಕಾಶ ವಿಸ್ತರಿಸಿರುವುದು, ಕೋವಿಡ್ ಸಂದರ್ಭದಲ್ಲಿ ವ್ಯಾಪಾರ-ಉದ್ಯಮಕ್ಕೆ ದೊಡ್ಡ ಪರಿಹಾರವಾಗಿದೆ. ಅದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕರ್ನಾಟಕ ಕಂಪನಿಗಳ ರಿಜಿಸ್ಟ್ರಾರ್​ಗೆ ಎಫ್​ಕೆಸಿಸಿಐ ಧನ್ಯವಾದ ತಿಳಿಸುತ್ತದೆ.
    -ಸಿ.ಎ ನಿತ್ಯಾನಂದ, ಅಧ್ಯಕ್ಷ, ಕಾರ್ಪೆರೇಟ್ ಕಾನೂನು ಸಮಿತಿ, ಎಫ್​ಕೆಸಿಸಿಐ

    ಕಳೆದ ಮಾ.31ರಂದು ಮುಕ್ತಾಯಗೊಂಡಿರುವ ಆರ್ಥಿಕ ವರ್ಷದ ಎಜಿಎಂ ಆಯೋಜಿಸಲು ಕರೊನಾ ಸೋಂಕಿನಿಂದಾಗಿ ತೊಂದರೆಯಾಗುತ್ತಿದ್ದು, ಸಭೆ ನಡೆಸಲು ಕಾಲಾವಕಾಶ ವಿಸ್ತರಿಸುವಂತೆ ಹಲವು ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ವೃತ್ತಿಪರ ಸಂಸ್ಥೆಗಳು ಕೋರಿದ್ದವು.

    ಇದನ್ನೂ ಓದಿ: ಐಪಿಎಲ್ ಶುರುವಾಗುವುದಕ್ಕೆ ಮುನ್ನವೇ ವಿಶೇಷ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

    ಆ ಮನವಿಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಆದೇಶಿಸಿದ್ದು, ಕಳೆದ ಸಾಲಿನಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಸಲಾಗದ ಸಂಸ್ಥೆಗಳು 2020ರ ಡಿ.31ರೊಳಗೆ ಎಜಿಎಂ ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು ಕಾಲಾವಕಾಶ ವಿಸ್ತರಣೆಗೆ ಕೋರಿ ಸಲ್ಲಿಕೆಯಾಗಿರುವ, ಇನ್ನೂ ಅನುಮೋದಿಸಬೇಕಿರುವ ಇತರ ಅರ್ಜಿಗಳಿಗೂ ಅನ್ವಯಿಸಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts