More

    ಭಾರತ ಗ್ರಾಮೀಣ ಪ್ರದೇಶಗಳಿಗೆ ಹೆಸರುವಾಸಿಯಾಗಿಲ್ಲ; ನಟಿ ಉರ್ಫಿ ಜಾವೇದ್​​ ಹೇಳಿಕೆಗೆ ವ್ಯಾಪಕ ಟೀಕೆ!

    ಮುಂಬೈ: ತನ್ನ ವಿಭಿನ್ನ ಉಡುಗೆ-ತೊಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿ ಸದ್ದು ಮಾಡುವ ಬಾಲಿವುಡ್​​ ನಟಿ ಉರ್ಫಿ ಜಾವೇದ್,​​ ಇದೀಗ ಮತ್ತೊಮ್ಮೆ ಟ್ರೋಲ್ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.

    ಇದನ್ನೂ ಓದಿ: ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ಬಿಜೆಪಿಗೆ ಆದ ಗತಿಯೇ ಕಾಂಗ್ರೆಸ್‌ಗೂ ಆಗಲಿದೆ: ಕೋಡಿಹಳ್ಳಿ ಎಚ್ಚರಿಕೆ

    ತಮ್ಮ ವೇಷಭೂಷಣಗಳಿಂದ ಮತ್ತು ವಿವಾದಾತ್ಮಕ ಹೇಳಿಕೆಯಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ಉರ್ಫಿ ಜಾವೇದ್​, ಇಂದು ಬಿಡುಗಡೆಗೊಂಡ ಮಹಿಳಾ ಪ್ರಧಾನ ಚಲನಚಿತ್ರ ‘ಪಂಚ ಕೃತಿಯ’ ಟ್ರೇಲರ್ ವೀಕ್ಷಿಸಿದ್ದಾರೆ. ತದನಂತರ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ತಾರೆ, “ಯಾರೂ ಈ ಚಿತ್ರವನ್ನು ನೋಡುವುದಿಲ್ಲ. ಭಾರತ ದೇಶವು ಗ್ರಾಮೀಣ ಪ್ರದೇಶಗಳಿಂದ ಗುರುತಿಸಲ್ಪಟ್ಟಿಲ್ಲ. ಬದಲಿಗೆ ತನ್ನ ನಗರ ಪ್ರದೇಶಗಳಿಂದಾಗಿ ಗುರುತಿಸಲ್ಪಟ್ಟಿದೆ” ಎಂದು ಟ್ವೀಟ್​ ಮೂಲಕ ಹೇಳಿದರು.

    ಉರ್ಫಿ ಜಾವೇದ್​ ಮಾಡಿದ ಟ್ವೀಟ್​​ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಟ್ವೀಟ್​​ಗೆ ವ್ಯಾಪಕ ಟೀಕೆ ಹರಿದುಬರುತ್ತಿದ್ದಂತೆ, “ಮುಂಚಿತವಾಗಿ ಪೋಸ್ಟ್​ ಮಾಡಿದ ಟ್ವೀಟ್​​ ಅನ್ನು ಹಾಕಿ, ಈ ಶೀರ್ಷಿಕೆಯನ್ನು ಚಿತ್ರ ನಿರ್ಮಾಪಕರೇ ನನಗೆ ಕಳುಹಿಸಿದ್ದಾರೆ” ಎಂದು ಟ್ವೀಟ್​ ಮಾಡಿದರು.

    ಇದನ್ನೂ ಓದಿ:  ಗಬ್ಬು ನಾರುತ್ತಿವೆ ಅಂಗನವಾಡಿಯಲ್ಲಿನ ಮೊಟ್ಟೆ; ಪೂರೈಕೆದಾರರ ವಿರುದ್ಧ ಮಹಿಳೆಯರ ಆಕ್ರೋಶ

    “ನಾನು ಯಾವುದರ ವಿರುದ್ಧವೂ ಇಲ್ಲ! ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನನ್ನೊಬ್ಬ ಸ್ನೇಹಿತರಿಗೆ ಸಹಾಯ ಮಾಡಲು ಹೀಗೆ ಮಾಡಿದೆ ಅಷ್ಟೇ. ಅಪ್‌ಲೋಡ್ ಮಾಡುವ ಮುನ್ನ ನಾನು ಶೀರ್ಷಿಕೆಯನ್ನು ಸರಿಯಾಗಿ ಪರಿಶೀಲಿಸಲಿಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಕಾಂಗ್ರೆಸ್​ನ ನಾಲ್ಕನೇ ಗ್ಯಾರಂಟಿಗೂ ಚಾಲನೆ: ವರ್ಣರಂಜಿತ ಸಮಾರಂಭದಲ್ಲಿ ‘ಗೃಹಲಕ್ಷ್ಮಿ’..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts