More

    ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ಬಿಜೆಪಿಗೆ ಆದ ಗತಿಯೇ ಕಾಂಗ್ರೆಸ್‌ಗೂ ಆಗಲಿದೆ: ಕೋಡಿಹಳ್ಳಿ ಎಚ್ಚರಿಕೆ

    ಶಿವಮೊಗ್ಗ: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯದೆ ಹೋದರೆ ಬಿಜೆಪಿಯ ಸ್ಥಾನಕ್ಕೆ ಕಾಂಗ್ರೆಸ್ ಅನ್ನು ಕಳುಹಿಸುತ್ತೇವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೋಡಿಹಳ್ಳಿ ಬಣದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೋಡಿಹಳ್ಳಿ ಬಣದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ರೈತ ನಾಯಕ ಎಚ್.ಎಸ್.ರುದ್ರಪ್ಪ ಅವರಿಗೆ ನಮನ ಕಾರ್ಯಕ್ರಮ ಅಂಗವಾಗಿ ರುದ್ರಪ್ಪ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತ್ತು. ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಕಾಯ್ದೆ ಸೇರಿ ಇತರೆ 4 ಕಾಯ್ದೆಗಳನ್ನು ಜಾರಿಗೆ ತಂದಿದ್ದು ಹಾಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯ್ದೆ ಹಿಂಪಡೆಯಬೇಕಿತ್ತು. ಕಾಯ್ದೆ ಹಿಂಪಡೆಯುವ ಮೂಲಕ ಚುನಾವಣಾ ಪೂರ್ವದಲ್ಲಿ ಹೇಳಿದ್ದನ್ನು ಮಾಡುತ್ತೇವೆ ಎಂಬುದನ್ನು ಕಾಂಗ್ರೆಸ್ ತೋರಿಸಬೇಕಿತ್ತು ಎಂದರು.
    ಪ್ರತಿಪಕ್ಷದವರು ಟೀಕೆ ಮಾಡಿದ ತಕ್ಷಣ ರೈತರ ಜತೆ ಮಾತನಾಡುತ್ತೇವೆ. ಸಮಾಲೋಚನೆ ಮಾಡುತ್ತೇವೆಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೃಷಿ ಕಾಯ್ದೆ ಜತೆ ಎಪಿಎಂಸಿ ಕಾಯ್ದೆಯನ್ನೂ ರದ್ದು ಮಾಡುವ ಕುರಿತು ಸಿದ್ದರಾಮಯ್ಯ ಅವರಿಗೆ ನೆನಪು ಮಾಡಿಕೊಟ್ಟಿದ್ದೇನೆ. ಅವರ ಜತೆ ನಾವು ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದೇವೆ. ಅವರು ಎಲ್ಲ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಭರವಸೆ ನೀಡಿದ್ದಾರೆ ಎಂದು ಹೇಳಿದರು.
    ಸರ್ಕಾರ ಕೃಷಿ, ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ಜತೆಗೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಭರವಸೆ ನೀಡಿದೆ. ಒಂದು ವೇಳೆ ಇವರೂ ಸಹ ಅವುಗಳನ್ನು ಹಿಂಪಡೆಯದಿದ್ದರೆ ಈಗ ಬಿಜೆಪಿಗೆ ಆದ ಗತಿ ಮುಂದೆ ಕಾಂಗ್ರೆಸ್‌ಗೂ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts