More

    ಮತ್ತೆ ಬಂದರು ಮಹಾಲಕ್ಷ್ಮೀ ; 30 ವರ್ಷಗಳ ನಂತರ ‘ಟಿಆರ್‌ಪಿ ರಾಮ’ ಚಿತ್ರದಲ್ಲಿ ನಟನೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಮಹಾಲಾಕ್ಷ್ಮಿ 1983ರಿಂದ 1992ರವರೆಗೆ 10 ವರ್ಷಗಳಲ್ಲಿ ಕನ್ನಡದ 35ಕ್ಕೂ ಹೆಚ್ಚು ಚಿತ್ರಗಳು ಸೇರಿ ತಮಿಳು, ತೆಲುಗು, ಮಲಯಾಳಂನಲ್ಲಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಚಿತ್ರರಂಗದಿಂದ ಕಣ್ಮರೆಯಾಗಿದ್ದ ಅವರು, ಇದೀಗ ಮೂರು ದಶಕಗಳ ಬಳಿಕ ಮತ್ತೆ ವಾಪಸ್ಸಾಗಿದ್ದಾರೆ. ರವಿಪ್ರಸಾದ್ ನಿರ್ದೇಶಿಸಿ, ನಟಿಸಿರುವ ‘ಟಿಆರ್‌ಪಿ ರಾಮ’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಹೆಣ್ಣಿನ ಶೋಷಣೆ, ಮಾಧ್ಯಮಗಳ ಮೌಲ್ಯವೇನು ಎಂಬುದನ್ನು ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

    ಇದನ್ನೂ ಓದಿ : ಹುಡುಗನ ಜೊತೆಯಿರುವ ರುಕ್ಮಿಣಿ ಫೋಟೋಗಳು ವೈರಲ್​​​​, ಈ ಬಗ್ಗೆ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದ ನಟಿ

    ಮತ್ತೆ ಬಂದರು ಮಹಾಲಕ್ಷ್ಮೀ ; 30 ವರ್ಷಗಳ ನಂತರ ‘ಟಿಆರ್‌ಪಿ ರಾಮ’ ಚಿತ್ರದಲ್ಲಿ ನಟನೆ

    ಮಹಾಲಕ್ಷ್ಮೀ, ‘ನಾನು ಎಲ್ಲಾ ಭಾಷೆಯಲ್ಲಿ ಎಲ್ಲಾ ಹೀರೋಗಳ ಜೊತೆ ಸಿನಿಮಾ ಮಾಡಿದ್ದೇನೆ. ಎಲ್ಲವೂ ಟೀಂ ವರ್ಕ್. ಕೆಟ್ಟದನ್ನು ಕೇಳಬಾರದು, ಕೆಟ್ಟದನ್ನು ನೋಡಬಾರದು, ಕೆಟ್ಟದನ್ನು ಮಾಡಬಾರದು ಎಂಬ ಮೂರು ಕೋತಿಗಳ ಕಥೆಯನ್ನು ಹೇಳಿಕೊಡುವುದೇ ‘ಟಿಆರ್‌ಪಿ ರಾಮ’ ಚಿತ್ರ. ಗುಣಮಟ್ಟ, ಮನರಂಜನೆ, ನೀತಿಪಾಠ ಎಲ್ಲವೂ ಇದರಲ್ಲಿದೆ’ ಎಂದು ತಿಳಿಸಿದರು. ಚೊಚ್ಚಲ ನಿರ್ದೇಶನದ ಬಗ್ಗೆ ರವಿಪ್ರಸಾದ್, ‘ಕಮರ್ಷಿಯಲ್ ಜೊತೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಆಗಬೇಕಿದೆ. ಅಕ್ಟೋಬರ್ ಮೊದಲ ವಾರ ರಿಲೀಸ್ ಪ್ಲ್ಯಾನ್ ಇದೆ’ ಎಂದು ಹೇಳಿಕೊಂಡರು.

    ಇದನ್ನೂ ಓದಿ : ಖ್ಯಾತ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರಂತೆ ನಟಿ ಪೂಜಾ ಹೆಗ್ಡೆ!

    ಮತ್ತೆ ಬಂದರು ಮಹಾಲಕ್ಷ್ಮೀ ; 30 ವರ್ಷಗಳ ನಂತರ ‘ಟಿಆರ್‌ಪಿ ರಾಮ’ ಚಿತ್ರದಲ್ಲಿ ನಟನೆ

    ನಟಿ ಸ್ಪರ್ಶ, ‘ಈ ಸಿನಿಮಾ ಒಪ್ಪಿಕೊಳ್ಳಲು ಮಹಾಲಕ್ಷ್ಮೀ ಮೇಡಂ ಕಾರಣ. ಅವರ ಕಂಬ್ಯಾಕ್ ಚಿತ್ರವಿದು. ಅಂತಹ ಲೆಜೆಂಡ್ ಜತೆ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಲ್ಲ. ತುಂಬಾ ಫಾಸ್ಟ್ ಯುಗದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ಪ್ರಮಾದವಾಗುತ್ತದೆ ಅನ್ನೋದು ಚಿತ್ರದ ಒಂದು ಎಳೆ’ ಎಂದು ಮಾಹಿತಿ ನೀಡಿದರು. ಪತ್ರಕರ್ತೆಯಾಗಿ ಸ್ಪರ್ಶ, ಅವರ ತಾಯಿಯ ಪಾತ್ರದಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಚಿತ್ರಕ್ಕೆ ರಾಜ್‌ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ.

    ಮತ್ತೆ ಬಂದರು ಮಹಾಲಕ್ಷ್ಮೀ ; 30 ವರ್ಷಗಳ ನಂತರ ‘ಟಿಆರ್‌ಪಿ ರಾಮ’ ಚಿತ್ರದಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts