More

    ಯೂಟ್ಯೂಬರ್​ ‘ಮಲ್ಲು ಟ್ರಾವೆಲರ್​’ ವಿರುದ್ಧ ಲುಕ್ ​ಔಟ್​ ನೋಟಿಸ್​ ಜಾರಿ

    ಕೊಚ್ಚಿ: ಸಂದರ್ಶನದ ನೆಪದಲ್ಲಿ ಸೌದಿ ಅರೇಬಿಯಾ ಮೂಲದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಯತ್ನಿಸಿದ ಆರೋಪ ವ್ಯಕ್ತವಾದ ಹಿನ್ನೆಲೆ ಯೂಟ್ಯೂಬರ್​ ವಿರುದ್ಧ ಇದೀಗ ಕೇರಳ ಪೊಲೀಸರು ಲುಕ್‌ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಆರೋಪಿ ಕೆನಡಾದಲ್ಲಿರುವ ಕಾರಣ ಈಗ ಲುಕ್‌ ಔಟ್ ಸುತ್ತೋಲೆ ಹೊರಡಿಸಲಾಗಿದೆ.

    ಇದನ್ನೂ ಓದಿ: VIDEO | ನಾವು ರಿಮೋಟ್ ಒತ್ತಿದಾಗ ಬಡವರು ಯೋಜನೆಗಳ ಲಾಭ ಪಡೆಯುತ್ತಾರೆ; ಇದೇ ಬಿಜೆಪಿ ಒತ್ತಿದರೆ…: ರಾಹುಲ್​ ಗಾಂಧಿ

    ಸೆಪ್ಟೆಂಬರ್ 13 ರಂದು ಕೊಚ್ಚಿಯ ಹೋಟೆಲ್‌ನಲ್ಲಿ ನಡೆದ ಆಪಾದಿತ ಘಟನೆಗೆ ಸಂಬಂಧಿಸಿದಂತೆ ಶಕೀರ್ ಸುಬಾನ್ ಅಲಿಯಾಸ್ ‘ಮಲ್ಲು ಟ್ರಾವೆಲರ್’ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರ ಪ್ರಕಾರ, ಆರೋಪಿಯು ವಿದೇಶಿ ಪ್ರಜೆಯ ಜತೆ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ಸುಭಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯೊಬ್ಬಳ ನಮ್ರತೆಗೆ ಆಕ್ರೋಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ತನ್ನ ಯೂಟ್ಯೂಬ್ ವೀಡಿಯೊದಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ ಸುಭಾನ್, “ಮಹಿಳೆ ಮತ್ತು ಆಕೆಯ ಸ್ನೇಹಿತರೊಬ್ಬರು ಹೋಟೆಲ್‌ನಲ್ಲಿ ನನ್ನ ಭೇಟಿ ಮಾಡಿ, ಹಣಕಾಸಿನ ನೆರವು ಕೋರಿದರು. ಮಹಿಳೆ ನಾನು ನಿಮ್ಮ ಅಭಿಮಾನಿ ಎಂದು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡು ನನ್ನನ್ನು ಸಂಪರ್ಕಿಸಿದ್ದಾಳೆ” ಎಂದು ಶಕೀರ್ ವೀಡಿಯೊದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ:  ತೀರ್ಥಹಳ್ಳಿಯಲ್ಲಿ ಕೈಗಾರಿಕಾ ವಲಯ: ಆರಗ ಜ್ಞಾನೇಂದ್ರ ಭರವಸೆ

    ಟ್ರಾವೆಲ್ ವ್ಲಾಗರ್ ಆಗಿರುವ ಶಾಕಿರ್ ಸುಭಾನ್ ಇನ್​ಸ್ಟಾಗ್ರಾಮ್​ನಲ್ಲಿ 2.2 ಮಿಲಿಯನ್​ಗೂ ಅಧಿಕ ಅನುಯಾಯಿಗಳು ಮತ್ತು ಯೂಟ್ಯೂಬ್‌ನಲ್ಲಿ 2.7 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts