More

    ಪವಿತ್ರಾ ಲೋಕೇಶ್​ ಮತ್ತು ನರೇಶ್​ ಇನ್ನು ಬೆಸ್ಟ್​ಫ್ರೆಂಡ್ಸ್​ ಅಲ್ಲ, ಗಂಡ-ಹೆಂಡ್ತಿ..!

    ಹೈದರಾಬಾದ್​: ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಜೋಡಿ ಇದೀಗ ಸದ್ದಿಲ್ಲದೇ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದನ್ನು ನೀಡಿದೆ.

    ತೆಲುಗು ಚಿತ್ರರಂಗದಲ್ಲಿ ಪೋಷಕ ನಟ ನರೇಶ್​ ಹಾಗೂ ಕನ್ನಡ, ತೆಲುಗು ಚಿತ್ರಗಳಲ್ಲಿ ಪೋಷಕ ನಟಿ ಪವಿತ್ರಾ ಲೋಕೇಶ್​ ನಡುವೆ ಸಂಬಂಧ ಇರುವುದಾಗಿ ನರೇಶ್​ ಪತ್ನಿ ರಮ್ಯಾ, ಮಾಧ್ಯಮಗಳ ಮುಂದೆ ಹೇಳಿದ್ದರು. ಇದಲ್ಲದೇ ತಮಗೆ ಪತಿಯಿಂದ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ನರೇಶ್​ ಹಾಗೂ ಪವಿತ್ರಾ ಹೋಟೆಲ್​ನಲ್ಲಿ ಒಂದೇ ರೂಮಿನಲ್ಲಿ ನೆಲೆಸಿದ್ದರು. ಇಷ್ಟೆಲ್ಲಾ ನಡೆದ ಮೇಲೂ ಪವಿತ್ರಾ ಲೋಕೇಶ್​ ಮಾತ್ರ ತಮ್ಮ ಹಾಗೂ ನರೇಶ್​ ನಡುವಿನ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ಬಿಚ್ಚಿಟ್ಟಿರಲಿಲ್ಲ. ನರೇಶ್​ ಕೇವಲ ತನಗೆ ಒಬ್ಬ ಒಳ್ಳೆಯ ಗೆಳೆಯ ಎಂದೇ ವಾದಿಸಿದ್ದರು.

    ಆದರೆ ಇದೀಗ ನರೇಶ್​ 2023ರ ಹೊಸ ವರ್ಷಕ್ಕೆ ಹೊಸ ಸುದ್ದಿ ಎಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ನರೇಶ್​ ಕ್ಯಾಂಡಲ್​ ಲೈಟ್​ನಲ್ಲಿ ಪವಿತ್ರಾ ಲೋಕೇಶ್​ ಅವರೊಂದಿಗೆ ಕೇಕ್​ ಕತ್ತರಿಸಿ, ಪರಸ್ಪರ ತಿನ್ನಿಸಿದ್ದಾರೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಷಯ ಕೋರುತ್ತಾ, ಈ ಹೊಸ ವರ್ಷಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕು. ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್​ರೊಂದಿಗಿನ ಸಂಬಂಧಕ್ಕೆ ಮುದ್ರೆ ಒತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts