ಬೆಂಗಳೂರು: ಸ್ಯಾಂಡಲ್ವುಡ್ ಬಹುನಿರೀಕ್ಷಿತ ಚಿತ್ರ “ರಾಬರ್ಟ್” ಕುರಿತು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಟ್ವಿಟರ್ನಲ್ಲಿ ಇಂದು ಸಿಹಿ ವಿಚಾರವನ್ನು ಹಂಚಿಕೊಂಡಿರುವ ದರ್ಶನ್, ರಾಬರ್ಟ್ ಸಿನಿಮಾ ಶೂಟಿಂಗ್ ಇವತ್ತಿಗೆ ಕಂಪ್ಲೀಟ್ ಆಗಿದೆ. ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವು ತಯಾರಾಗಿದ್ದೇವೆ ಎಂದು ಚಿತ್ರತಂಡದೊಂದಿಗಿನ ಗ್ರೂಪ್ ಫೋಟೋ ಮೂಲಕ ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ದರ್ಶನ್ಗೆ ಜತೆಯಾಗಿ ಆಶಾ ಭಟ್ ಅಭಿನಯಿಸಿದ್ದು, ಸೋನಲ್ ಮೊಂತೆರೊ, ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜಗಪತಿ ಬಾಬು ಖಳನಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರತಂಡದ ಸದ್ಯದ ಯೋಜನೆಗಳ ಪ್ರಕಾರ ಏ. 9ಕ್ಕೆ ರಾಬರ್ಟ್ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ.
Shooting wrapped up for #Roberrt today 🙂
ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ.ನಿಮ್ಮ ದಾಸ ದರ್ಶನ್@TharunSudhir @umap30071 @StarAshaBhat pic.twitter.com/sOMpGFhhq6
— Darshan Thoogudeepa (@dasadarshan) March 12, 2020
ಕಾಜೋಲ್ ಮಗಳ ಈ ಫೋಟೋಕ್ಕೆ ಮಾರು ಹೋಗದವರೇ ಇಲ್ಲ: ಅಂದು ಟ್ರೋಲ್ ಆಗಿದ್ದವಳೀಗ ಎಲ್ಲರ ಫೇವರೆಟ್
ಈ ಬಾಲಿವುಡ್ ನಟಿಗೆ ಮುಖ ಮುಚ್ಚಿಕೊಂಡು ಓಡಾಡುವಂತದ್ದೇನಾಯಿತು? ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದ ನಟಿ