More

    ಪತ್ನಿ ಮುಖ ನೋಡಿ ಮುಜುಗರಕ್ಕೊಳಗಾಗಿ ಆರೋಪಿ ಆತ್ಮಹತ್ಯೆ ಪ್ರಕರಣ: ಪಿಎಸ್​ಐ ಸಸ್ಪೆಂಡ್​!

    ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಹೆಂಡತಿ ಮುಖ ನೋಡಿ ಮುಜುಗರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಓರ್ವ ಸಬ್ ಇನ್ಸ್​ಪೆಕ್ಟರ್​ನನ್ನು ಅಮಾನತು ಮಾಡಲಾಗಿದೆ.

    ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಮತ್ತು ಪಿಎಸ್​ಐ ಸಸ್ಪೆಂಡ್​ ಮಾಡಿ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಆದೇಶಿಸಿದ್ದಾರೆ.

    ನಾಲ್ವರು ಪೊಲೀಸರು ಆರೋಪಿಯನ್ನು ಸ್ಥಳ ಮಹಜರ್​ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ವೈಫಲ್ಯ ಕಂಡು ಬಂದಿದ್ದು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹನುಮಂತ ನಗರ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಮಂಜುನಾಥ್ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ಕಮಿಷನರ್​ ಕಮಲ್​ ಪಂತ್​ ತಿಳಿಸಿದರು.

    ಇದನ್ನೂ ಓದಿರಿ: ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!

    ಘಟನೆ ಹಿನ್ನೆಲೆ ಏನು?
    ಆರೋಪಿ ಸಿದ್ದಲಿಂಗ ಸ್ವಾಮಿ ವಿರುದ್ಧ ಬಿಡಿಎ ನಕಲಿ ಸೀಲ್, ಲೆಟರ್ ಹೆಡ್ ಬಳಸಿ 16 ಲಕ್ಷ ವಂಚಿಸಿದ ಆರೋಪದಡಿಯಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಆರೋಪಿಯನ್ನು ಶುಕ್ರವಾರ (ಫೆ.26) ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದಿದ್ದರು.

    ಈ ವೇಳೆ ಹೆಂಡತಿ ಮುಖ ನೋಡಿ ಮುಜುಗರಕ್ಕೆ ಒಳಗಾದ ಆರೋಪಿ ಸಿದ್ಧಲಿಂಗ ಮನೆಯ ಕಿಟಕಿಯಿಂದ ಹೋಗಿ ಕಟ್ಟಡದ ಮೇಲಿಂದ ಜಿಗಿದಿದ್ದ. ಇದರ ಪರಿಣಾಮ ತೀವ್ರ ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದ. (ದಿಗ್ವಿಜಯ ನ್ಯೂಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಂಡತಿ ಮುಖ ನೋಡಿ ಮುಜುಗರಕ್ಕೊಳಗಾಗಿ ಕಟ್ಟಡದಿಂದ ಜಿಗಿದಿದ್ದ ವಂಚನೆ ಆರೋಪಿ ಸಾವು

    ಪಾಲಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ

    Video| ಸಂಬಂಧಿಕರಿಂದಲೇ ದರೋಡೆಗೆ ಯತ್ನ! ಅಗ್ನಿಶಾಮಕ ಸಿಬ್ಬಂದಿಯಿಂದ ತಪ್ಪಿತು ಭಾರಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts