More

    ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!

    ವಿಜಯವಾಡ: ಕತ್ತೆ ಮಾಂಸವನ್ನು ತಿಂದರೆ ಲೈಂಗಿಕ ಶಕ್ತಿ ಮತ್ತು ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಂಬಿರುವ ಆಂಧ್ರ ಪ್ರದೇಶದ ಅನೇಕ ಜನ ಸಾಕಷ್ಟು ಕತ್ತೆಗಳನ್ನು ಹತ್ಯೆ ಮಾಡುತ್ತಿದ್ದು, ಅದರ ಅವಶೇಷಗಳನ್ನು ಕಾಲುವೆಗಳಲ್ಲಿ ಎಸೆಯುತ್ತಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

    ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರದ ಪ್ರಕಾರ ಕತ್ತೆಗಳು ಮಾಂಸಕ್ಕಾಗಿ ಬಳಸುವ ಪ್ರಾಣಿಯಲ್ಲ. ಹೀಗಾಗಿ ಅವುಗಳನ್ನು ಹತ್ಯೆ ಮಾಡುವುದು ಅಕ್ರಮ ಎಂದಿದ್ದರೂ ಆಂಧ್ರದಲ್ಲಿ ಕತ್ತೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಹೀಗಾಗಿ ಕತ್ತೆಗಳನ್ನು ದೇಶದಲ್ಲಿ ಅಳಿವಿನಂಚಿಗೆ ಸಾಗುತ್ತಿರುವ ಪ್ರಾಣಿಯೆಂದು ಪರಿಗಣಿಸಲಾಗಿದೆ. ಒಂದು ವೇಳೆ ಕತ್ತೆಗಳ ಸಂಖ್ಯೆ ಏರಿಕೆಯಾಗದಿದ್ದಲ್ಲಿ ಸಂಪೂರ್ಣವಾಗಿ ಅಳಿದು ಹೋಗಲಿವೆ.

    ಇದನ್ನೂ ಓದಿರಿ: 90 ಲಕ್ಷ ರೂ.ಗೆ ಸೈಟ್​ ಖರೀದಿಸಿ ವೈದ್ಯನ ಮನೆಗೆ ಸುರಂಗ ಕೊರೆದ ಖದೀಮರು ಹಣ, ಚಿನ್ನ ಮುಟ್ಟಲೇ ಇಲ್ಲ!

    ಕೆಜಿಗೆ 600 ರೂ.
    ಮಾಧ್ಯಮ ವರದಿಗಳ ಪ್ರಕಾರ ಅನೇಕ ಕತ್ತೆಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆಜಿಗೆ 600 ರೂ.ನಂತೆ ಕತ್ತೆ ಮಾಂಸ ಮಾರಾಟವಾಗುತ್ತಿದೆ. ಇದೀಗ ಕತ್ತೆಗಳನ್ನು ಬ್ಯಾನ್​ ಮಾಡುವುದು ಸರ್ಕಾರಕ್ಕೆ ಭಾರಿ ಸವಾಲಾಗಿ ಪರಿಣಮಿಸಿದೆ.

    ಜನರ ತಪ್ಪು ಕಲ್ಪನೆಯ ಫಲಿತಾಂಶ
    ಕತ್ತೆ ಮಾಂಸ ಅನೇಕ ಆರೋಗ್ಯ ಸಮಸ್ಯೆಗಳ ರಾಮಬಾಣ ಎಂದು ಆಂಧ್ರದ ಜನರು ನಂಬಿದ್ದಾರೆ. ಅಲ್ಲದೆ, ಈ ಮಾಂಸ ಸೇವನೆಯಿಂದ ಲೈಂಗಿಕ ಆಸಕ್ತಿ ಸಹ ಹೆಚ್ಚುತ್ತದೆ ಅಂದುಕೊಂಡಿದ್ದಾರೆ. ಹೀಗಾಗಿ ಎಥೇಚ್ಚವಾಗಿ ಕತ್ತೆ ಮಾಂಸವನ್ನು ಸೇವಿಸುತ್ತಿದ್ದಾರೆ. ರಾಜ್ಯ ಪಶ್ಚಿಮ ಗೋದಾವರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಗ್ಗಿಲ್ಲದೆ ಕತ್ತೆ ಮಾಂಸ ಮಾರಾಟವಾಗುತ್ತಿದೆ. ಕೃಷ್ಣ, ಪ್ರಕಾಶಂ ಮತ್ತು ಗುಂಟೂರಿನಲ್ಲಿ ಮಾಂಸ ಮಾರಾಟ ಜೋರಾಗಿದೆ.

    ಇದನ್ನೂ ಓದಿರಿ: ನಗುತ್ತಲೇ ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿ ಯುವತಿ ಆತ್ಮಹತ್ಯೆ: ಸಾವಿನ ಹಿಂದಿರುವ ನೋವು ಬಿಚ್ಚಿಟ್ಟ ತಂದೆ!

    ಈ ಬಗ್ಗೆ ಮಾತನಾಡಿರುವ ಪ್ರಾಣಿ ಪಾರುಗಾಣಿಕಾ ಸಂಸ್ಥೆ (ಎಆರ್​ಒ)ಯ ಕಾರ್ಯದರ್ಶಿ ಗೋಪಾಲ್​ ಆರ್​. ಸುರ್ಬಾತುಲಾ, ಕತ್ತೆಗಳ ಅಸ್ತಿತ್ವವೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಆಂಧ್ರದಲ್ಲಿ ಕತ್ತೆಗಳು ಬಹುತೇಕ ಮಾಯವಾಗಿವೆ. ಪ್ರಾಣಿಗಳಿಗೆ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ 1960ರ ಅಡಿಯಲ್ಲಿ ಅಕ್ರಮವಾಗಿ ಕತ್ತೆಗಳನ್ನು ವಧೆ ಮಾಡಲಾಗುತ್ತಿದೆ. ಇದು ಸ್ಥಳೀಯ ಮುನ್ಸಿಪಾಲ್​ ಕಾಯ್ದೆಗೆ ಮಾತ್ರವಲ್ಲದೆ, ಸುಪ್ರೀಂಕೋರ್ಟ್​ ಆದೇಶಕ್ಕೂ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಲಾಕ್​ಡೌನ್​ ವಿಸ್ತರಣೆ; ಮಾರ್ಚ್​ 8ರವರೆಗೆ ಮನೆಯಲ್ಲೇ ಇರಿ ಎಂದ ಸರ್ಕಾರ

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    ಭಾರತಕ್ಕೆ ಅಮೆರಿಕ ಮರಳಿಸಬೇಕಿದೆ 15 ಲಕ್ಷ ಕೋಟಿ ರೂಪಾಯಿ! ದೊಡ್ಡಣ್ಣನ ಪ್ರಜೆಗಳ ತಲೆ ಮೇಲೆ ತಲಾ 53 ಲಕ್ಷ ರೂ. ಸಾಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts