More

    ಮೋಟಾರು ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ

    ಬಾಳೆಹೊನ್ನೂರು: ಕೇಂದ್ರ ಸರ್ಕಾರ ಮೋಟಾರು ಕಾಯ್ದೆಯಲ್ಲಿ ಇತ್ತೀಚೆಗೆ ಕೆಲ ತಿದ್ದುಪಡಿ ಮಾಡಿರುವುದರಿಂದ ಚಾಲಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ಸುಂದರೇಶ್ ಮುದಗುಣಿ ಹೇಳಿದರು.

    ಜೇಸಿ ವೃತ್ತದಲ್ಲಿ ಕರುನಾಡು ಸಾರಥಿಗಳ ಸೈನ್ಯ, ಆಟೋ ಚಾಲಕರ ಸಂಘ, ಟ್ರ್ಯಾಕ್ಟರ್ ಚಾಲಕರ ಸಂಘ, ಲಾರಿ ಚಾಲಕರ ಸಂಘಗಳಿಂದ ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
    ಹಿಟ್ ಆ್ಯಂಡ್ ರನ್ ಕೇಸ್ ದಾಖಲಾದಲ್ಲಿ 10 ವರ್ಷ ಜೈಲು, 7 ಲಕ್ಷ ರೂ. ದಂಡ ವಿಧಿಸಿ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದಿದೆ. ಇದು ಅತ್ಯಂತ ಆತಂಕಕಾರಿ ವಿಚಾರ. ಕೆಲವೊಮ್ಮೆ ಚಾಲಕರಿಗೆ ತಿಳಿಯದೆ ಆಗುವ ಅಪಘಾತದಲ್ಲಿ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಚಾಲಕರ ಕುಟುಂಬವೇ ಸಂಕಷ್ಟಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗಮನಹರಿಸಿ ಈ ಹಿಂದಿನ ಕಾನೂನನ್ನೇ ಮುಂದುವರಿಸಬೇಕು ಅಥವಾ ದಂಡ, ಶಿಕ್ಷೆ ಅವಧಿ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.
    ಲಾರಿ ಚಾಲಕರ ಸಂಘದ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಹಬೀಬುಲ್ಲಾ, ನವೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts