More

    ಅಬಕಾರಿ ನೀತಿ ಹಗರಣ; ಅರವಿಂದ್​ ಕೇಜ್ರಿವಾಲ್​ ಬಂಧನ ಖಂಡಿಸಿ ದೇಶಾದ್ಯಂತ ಎಎಪಿ ಉಪವಾಸ ಸತ್ಯಾಗ್ರಹ

    ನವದೆಹಲಿ: ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಬಂಧನವನ್ನು ಖಂಡಿಸಿ ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

    ಅರವಿಂದ್​ ಕೇಜ್ರಿವಾಲ್​ ಬಂಧನ ಖಂಡಿಸಿ ದೇಶ ಹಾಗೂ ವಿಶ್ವಾದಾದ್ಯಂತ ಇರುವ ಎಎಪಿ ಬೆಂಬಲಿಗರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಸಚಿವ ಗೋಪಾಲ್​ ರೈ, ಜಂತರ್​ ಮಂತರ್​ನಲ್ಲಿ 11ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು, ಸಚಿವರು, ಸಂಸದರು ಮತ್ತು ಕೌನ್ಸಿಲರ್‌ಗಳು ಭಾಗಿಯಾಗಲಿದ್ದಾರೆ. ಭಗತ್​ ಸಿಂಗ್​ ಅವರ ಹುಟ್ಟೂರಾದ ಖತ್ಖರ್ಕಲನ್‌ನಲ್ಲೂ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ.

    AAP Protest

    ಇದನ್ನೂ ಓದಿ: ಸೋಲಿನ ನಡುವೆಯೂ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

    ಉತ್ತರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ 25 ರಾಜ್ಯಗಳ ರಾಜಧಾನಿಗಳು, ಜಿಲ್ಲಾ ಮತ್ತು ಬ್ಲಾಕ್ ಕೇಂದ್ರಗಳು, ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸಾಮೂಹಿಕ ಉಪವಾಸ ಮಾಡುವ ಮೂಲಕ ಜನರು ಕೇಜ್ರಿವಾಲ್ ಅವರನ್ನು ಬೆಂಬಲಿಸಲಿದ್ದಾರೆ.

    ಭಾರತ ಹೊರತುಪಡಿಸಿ  ನ್ಯೂಯಾರ್ಕ್, ಬೋಸ್ಟನ್, ಲಾಸ್ ಏಂಜಲೀಸ್, ಯುಎಸ್‌ನ ವಾಷಿಂಗ್ಟನ್ ಡಿಸಿ, ಕೆನಡಾದ ಟೊರೊಂಟೊ, ಆಸ್ಟ್ರೇಲಿಯಾದ ಮೆಲ್ಬೋರ್ನ್, ಲಂಡನ್​ ಸೇರಿದಂತೆ ಅನೇಕ ನಗರಗಳಲ್ಲಿ ಜನರು ಸಾಮೂಹಿಕ ಉಪವಾಸ ಕೈಗೊಳ್ಳಲಿದ್ದಾರೆ ಎಂದು ಸಚಿವ ಗೋಪಾಲ್​ ರೈ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts