More

  ಅಬಕಾರಿ ನೀತಿ ಹಗರಣ; ಮಾಜಿ ಐಎಎಸ್​ ಅಧಿಕಾರಿಯನ್ನು ಬಂಧಿಸಿದ ED

  ನವದೆಹಲಿ: ಅಬಕಾರಿ ನೀತಿ ಜಾರಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಛತ್ತೀಸ್​ಗಢದ ಮಾಜಿ ಐಎಎಸ್​ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

  ಬಂಧಿತರನ್ನು ಅನಿಲ್​ ಟುಟೇಜಾ ಎಂದು ಗುರುತಿಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಯಶ್ ಟುಟೇಜಾ ಅವರೊಂದಿಗೆ ಹೇಳಿಕೆ ದಾಖಲಿಸಲು ಶನಿವಾರ ಹೋಗಿದ್ದಾಗ ಆರ್ಥಿಕ ಅಪರಾಧಗಳ ವಿಭಾಗ (EOW), ಭ್ರಷ್ಟಾಚಾರ ನಿಗ್ರಹ ದಳದ (ACB) ರಾಯ್‌ಪುರದ ಕಚೇರಿಯಲ್ಲಿ ಮಾಜಿ ಐಎಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.

  ಇದನ್ನೂ ಓದಿ: ಎಸ್​ಆರ್​ಎಚ್​ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಗಳು ಉಡೀಸ್

  ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಟುಟೇಜಾರನ್ನು ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ವಿನಂತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2003 ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರು 2023ರಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದರು.

  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಐಎಸ್​ ಅಧಿಕಾರಿ ಅನಿಲ್​ ಹಾಗೂ ಅವರ ಪುತ್ರ ಯಶ್​ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್​ 08 ರಂದು ಸುಪ್ರೀಂ ಕೋರ್ಟ್​ ಅವರ ವಿರುದ್ಧದ ಮೊಕದ್ದಮೆಯನ್ನು ರದ್ದು ಪಡಿಸಿತ್ತು. ಇದರ ಹೊರತಾಗಿಯೂ ಅವರನ್ನು ಬಂಧಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

  See also  ಯೋಗ ಮಾನಸಿಕ ದೃಢತೆಗೆ ಸಹಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts