More

    ಶಾರೂಖ್​ ಖಾನ್​ಗೆ ಆಕ್ಷನ್​-ಕಟ್​ ಹೇಳಿದ ಆಮೀರ್​ ಖಾನ್​!

    ಮುಂಬೈ: ಬಾಲಿವುಡ್​ನ ಟಾಪ್​ ನಟರಾದ ಶಾರೂಖ್​ ಖಾನ್​ ಮತ್ತು ಆಮೀರ್​ ಖಾನ್​ ಒಟ್ಟಿಗೆ ನಟಿಸಬೇಕೆಂಬುದು ಅವರ ಅಭಿಮಾನಿಗಳ ಮತ್ತು ಚಿತ್ರರಂಗದ ಆಸೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಅವರಿಬ್ಬರೂ ಒಟ್ಟಿಗೆ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ.

    ಇದೀಗ ಆಮೀರ್​ ಖಾನ್​ ಅಭಿನಯದ ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರದಲ್ಲಿ ಶಾರೂಖ್​ ಖಾನ್​ ಅತಿಥಿ ಪಾತ್ರದಲ್ಲಿ ನಟಿಸಿರುವುದಷ್ಟೇ ಅಲ್ಲ, ಅವರ ಭಾಗದ ಚಿತ್ರೀಕರಣವನ್ನು ಖುದ್ದು ಆಮೀರ್​ ಖಾನ್​ ಮಾಡಿದ್ದಾರೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ.

    ಇದನ್ನೂ ಓದಿ: ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಬೃಹತ್​ ಫೈಟ್​ ಚಿತ್ರೀಕರಣ

    ಹೌದು, ಇತ್ತೀಚೆಗೆ ನವದೆಹಲಿಯಲ್ಲಿ ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರದ ಚಿತ್ರೀಕರಣ ನಡೆದಿದೆ. ಈ ಭಾಗದ ಚಿತ್ರೀಕರಣದಲ್ಲಿ ಶಾರೂಖ್​ ಖಾನ್​ ಅಭಿನಯಿಸಿದ್ದಾರಂತೆ. ಈ ಚಿತ್ರವನ್ನು ಅದ್ವೈತ್​ ಚಂದನ್​ ನಿರ್ದೇಶನ ಮಾಡುತ್ತಿದ್ದರೂ, ಶಾರೂಖ್​ ಖಾನ್​ ಭಾಗದ ಚಿತ್ರೀಕರಣ ಸ್ವತಃ ಆಮೀರ್​ ಮುಂದೆ ನಿಂತು ಡೈರೆಕ್ಟ್​ ಮಾಡಿಕೊಟ್ಟಿದ್ದಾರಂತೆ. ಇದೆಲ್ಲಾ ಆಯ್ತು, ಚಿತ್ರೀಕರಣ ಮುಗಿದ ನಂತರ ಇಬ್ಬರೂ ಸ್ಟಾರ್​ ನಟರು ಜತೆಯಾಗಿ ಸೇರಿ ಪಾರ್ಟಿ ಮಾಡಿದರಂತೆ.

    ಇದನ್ನೂ ಓದಿ: ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ … ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

    ವಿಶೇಷವೆಂದರೆ, ಶಾರೂಖ್ ಖಾನ್​ ಈ ಚಿತ್ರದಲ್ಲಿ ಬರೀ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ಅವರ ರೆಡ್​ ಚಿಲ್ಲೀಸ್​ ಸಂಸ್ಥೆಯೇ, ಈ ಚಿತ್ರದ ವಿಷ್ಯುಯಲ್​ ಎಫೆಕ್ಟ್ಸ್​ ಕೆಲಸಗಳನ್ನು ಮಾಡುತ್ತಿದೆ.

    ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರವು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ರೀಮೇಕ್​ ಆಗಿದ್ದು, ಆಮೀರ್​ ಖಾನ್​ ಅಲ್ಲದೆ ಕರೀನಾ ಕಪೂರ್​, ವಿಜಯ್​ ಸೇತುಪತಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನಷ್ಟು ಬಾಕಿ ಉಳಿದಿದ್ದು, ಮುಂದಿನ ಕ್ರಿಸ್ಮಸ್​ಗೆ ಅಂದರೆ 2021ರ ಕ್ರಿಸ್ಮಸ್​ಗೆ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

    ಬಹುನಿರೀಕ್ಷಿತ ‘ಲಕ್ಷ್ಮೀ’ ನೋಡಿದ ಜನ ಏನಂತಾರ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts