More

    ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್​

    ಚನ್ನಪಟ್ಟಣ: ಕುಡಿವ ನೀರು ಸರಬರಾಜಾಗುವ ಪೈಪ್​ನಲ್ಲಿ ಸತ್ತ ಮಹಿಳೆಯ ಕಾಲು ಪತ್ತೆ ಪ್ರಕರಣ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇನ್ನೊಂದೆಡೆ ಪೊಲೀಸ್ ಇಲಾಖೆಗೆ ಸವಾಲಾಗಿದೆ.

    ನಗರ ನ್ಯಾಯಾಲಯ ಹಿಂಭಾಗವಿರುವ ಜಲಮಂಡಳಿ ಓವರ್ ಹೆಡ್ ಟ್ಯಾಂಕ್ ಪೈಪ್​ಲೈನ್ ವಾಲ್ವ್​ನಲ್ಲಿ ಶನಿವಾರ ಮಹಿಳೆಯೊಬ್ಬರ ಕಾಲು ಪತ್ತೆಯಾಗಿತ್ತು. ಟ್ಯಾಂಕ್ ಮೇಲ್ಭಾಗದಲ್ಲಿ ಮಹಿಳೆ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದ್ದರಿಂದ ಯಾರೋ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಕಾರ್ಯಾಚರಣೆ ಮಾಡಿ ಹೊರತೆಗೆದಾಗ ಒಂದು ಕಾಲಿನ ಭಾಗ ಮಾತ್ರ ದೊರಕಿತ್ತು. ಮೃತದೇಹದ ಉಳಿದ ಭಾಗದ ಪತ್ತೆಗಾಗಿ ನಗರಸಭೆ, ಜಲಮಂಡಳಿ ಹಾಗೂ ಪೊಲೀಸರು ಜಂಟಿಯಾಗಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ.

    ಹಲವು ದಿನದ ಹಿಂದೆಯೇ ಮಹಿಳೆ ಟ್ಯಾಂಕ್​ಗೆ ಬಿದ್ದಿದ್ದು, ಶವ ಕೊಳೆತು ನೀರಿನ ಸೆಳೆತಕ್ಕೆ ಸಿಲುಕಿ ಛಿದ್ರಗೊಂಡಿದೆ ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ವಾಲ್ವ್​ನಿಂದ ಹೊರತೆಗೆದ ಕಾಲಿನ ಭಾಗ ಜಾಸ್ತಿ ಕೊಳೆಯದಿರುವುದು ಹಾಗೂ ಯಾರೋ ದೇಹದಿಂದ ಬೇರ್ಪಡಿಸಿರುವ ರೀತಿಯಲ್ಲಿ ಗೋಚರಿಸುತ್ತಿರುವುದು ಅನುಮಾನ ಮೂಡಿಸಿದೆ. ಶನಿವಾರ ರಾತ್ರಿವರೆಗೂ ಪೈಪ್​ನಲ್ಲಿ ದೇಹದ ಉಳಿದ ಭಾಗಗಳಿಗಾಗಿ ಶೋಧಿಸಿದರೂ ಸಣ್ಣ ತುಂಡೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್​

    ನಾನಾ ರೀತಿಯ ಚರ್ಚೆ: ಕೊಲೆ ಮಾಡಿ ಪ್ರಕರಣದ ದಾರಿ ತಪ್ಪಿಸುವ ಸಲುವಾಗಿ ಈ ರೀತಿ ತಂದು ಹಾಕಿದ್ದಾರೆಯೇ ಎಂಬ ಪ್ರಶ್ನೆ ಸೇರಿ ನಾನಾ ಚರ್ಚೆಗಳು ಹುಟ್ಟಿಕೊಂಡಿವೆ. ಈ ಟ್ಯಾಂಕ್ ನ್ಯಾಯಾಲಯ, ನ್ಯಾಯಾಧೀಶರ ವಸತಿಗೃಹ ಹಾಗೂ ಜನನಿಬಿಡ ಪ್ರದೇಶದಲ್ಲಿದ್ದು, ಈ ರೀತಿಯಾಗಿ ಮಾಡಿರಲು ಸಾಧ್ಯವೇ? ಆತ್ಮಹತ್ಯೆಯಾಗಿದ್ದರೆ ದೇಹದ ಉಳಿದ ಭಾಗವೆಲ್ಲಿ? ಎಂಬ ಅನುಮಾನಗಳು ಗಿರಕಿ ಹೊಡೆಯುತ್ತಿದ್ದು, ಪ್ರಕರಣ ಪೊಲೀಸರಿಗೆ ಸವಾಲಾಗಿದೆ.

    ಟ್ಯಾಂಕರ್ ಮೂಲಕ ನೀರು ಪೂರೈಕೆ: ನೀರಿನ ಪೈಪ್​ನಲ್ಲಿ ಕಾಲು ಪತ್ತೆಯಾದ ಹಿನ್ನೆಲೆ 9, 10, 11ನೇ ವಾರ್ಡ್​ಗಳ ಜನರಿಗೆ ಶಾಸಕ ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ನಗರ ನೀರು ಸರಬರಾಜು ಮಂಡಳಿ ಭಾನುವಾರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿತು.

    ಕುಡಿವ ನೀರಿನ ಪೈಪ್​ನಲ್ಲಿ ಸತ್ತ ಮಹಿಳೆಯ ಕಾಲು ಪತ್ತೆ! ಬೆಂಗಳೂರು ಸಮೀಪ ಊರಿಗೆ ಊರೇ ತಲ್ಲಣ

    ಬಹಿರ್ದೆಸೆಗೆಂದು ಹೋದ ಅಣ್ಣ-ತಮ್ಮ ಇಬ್ಬರೂ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ!

    ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

    ಜೂಜು ಅಡ್ಡೆ ಮೇಲೆ ದಾಳಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಜಿಗಿದಿದ್ದ ವ್ಯಕ್ತಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts