More

    ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

    ಬೆಂಗಳೂರು: ಸಾವಿರ ಕೋಟಿ ಆಸ್ತಿ ಒಡೆಯ ಎಂದೇ ಗಮನ ಸೆಳೆದಿದ್ದ ಕೆಜಿಎಫ್‌ ಬಾಬು ನಿವಾಸದ ಮೇಲೆ ಇಂದು(ಶನಿವಾರ) ಬೆಳ್ಳಂಬೆಳಗ್ಗೆ ಐಟಿ ದಾಳಿ ಆಗಿದೆ. ವಸಂತನಗರದಲ್ಲಿರುವ ಕೆಜಿಎಫ್​ ಬಾಬು(ಯೂಸುಫ್‌ ಷರೀಫ್‌) ಒಡೆತನದ ರುಕ್ಸಾನ ಪ್ಯಾಲೇಸ್ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳಿಗಾಗಿ ಶೋಧಿಸಿದ್ದಾರೆ.

    ಕೆಲ ತಿಂಗಳ ಹಿಂದೆ ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿಧಾನ ಪರಿಷತ್ ‍ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆಜಿಎಫ್ ಬಾಬು, ಮುಂಬರುವ ವಿಧಾನಸಭಾ ಚುನಾಚಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಉಮ್ರಾ ಡೆವಲಪರ್ಸ್​ ಕಂಪನಿಯ ಮಾಲೀಕರಾಗಿರುವ ಕೆಜಿಎಫ್ ಬಾಬು, ರಾಜ್ಯ ರಾಜಕಾರಣದಲ್ಲಿ ಸಿರಿವಂತರ ಪಟ್ಟಿಯಲ್ಲಿ ಟಾಪ್‌ಮೋಸ್ಟ್‌ ಸ್ಥಾನದಲ್ಲಿದ್ದಾರೆ. 2021ರ ನವೆಂಬರ್​ನಲ್ಲಿ ಪರಿಷತ್​ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಇವರು ಕೊಟ್ಟ ಆಸ್ತಿ ವಿವರ ಕೇಳಿದ್ರೇನೆ ಶಾಕ್​ ಆಗ್ತೀರಿ. ಡಿಕೆಶಿ, ಎಂಟಿಬಿ ಅವರನ್ನೂ ಮೀರಿಸುವಷ್ಟು ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಇಬ್ಬರು ಪತ್ನಿಯರು, ಐದು ಮಕ್ಕಳನ್ನು ಹೊಂದಿರುವ ಯೂಸುಫ್‌ ಅವರ ಆಸ್ತಿಯ ವಿವರ ಹೀಗಿದೆ ನೋಡಿ…

    ನಾಮಪತ್ರ ಸಲ್ಲಿಕೆ ವೇಳೆ ಕೆಜಿಎಫ್​ ಬಾಬು ತಿಳಿಸಿರುವ ಪ್ರಕಾರ, ಇವರ ಬಳಿ 1,741.57 ಕೋಟಿ ರೂ. ಆಸ್ತಿ ಇದೆ. 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ. ಪತ್ನಿಯರು, ಅವಲಂಬಿತರು ಸೇರಿ ಅವರ ಒಟ್ಟು ಆಸ್ತಿ 1745 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು.

    ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಇದೆ. ತಮ್ಮ ಹೆಸರಿನಲ್ಲಿ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಇಬ್ಬರು ಪತ್ನಿಯರ ಹೆಸರಿನಲ್ಲಿ 1.30 ಕೋಟಿ ರೂ, 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದರು.

    ಇವಿಷ್ಟೇ ಅಲ್ಲದೆ, 4.8 ಕೆಜಿ ಚಿನ್ನಾಭರಣ, 1.10 ಕೋಟಿ ರೂ. ಮೌಲ್ಯದ ವಾಚ್‌, ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ 16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ. ಹೂಡಿಕೆ ಇದೆ. 58.10 ಕೋಟಿ ರೂ., 2.01 ಕೋಟಿ ರೂ. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರೂಪಾಯಿ ಮೌಲ್ಯದ ಎರಡು ಫಾರ್ಚೂನರ್‌ ಕಾರು, ಅಲ್ಲದೆ 100 ಕೋಟಿ ರೂ. ಮೌಲ್ಯದ ಚರಾಸ್ತಿ ಇರುವುದಾಗಿ ಹೇಳಿಕೊಂಡಿದ್ದರು.

    ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆಜಿ ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆಜಿ ಚಿನ್ನ ಇದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ತಮ್ಮ ಹೂಡಿಕೆ 17.62 ಕೋಟಿ ರೂ., ಮೊದಲ ಪತ್ನಿಯ ಹೂಡಿಕೆ 1.60 ಲಕ್ಷ ರೂ., ಎರಡನೇ ಪತ್ನಿಯ ಹೂಡಿಕೆ 75 ಸಾವಿರ ಹೂಡಿಕೆ, ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ 17.61 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಕೆಜಿಎಫ್​ ಬಾಬು ವಿವರಿಸಿದ್ದರು.

    58.12 ಕೋಟಿ ರೂ.ವನ್ನು ಇತರರಿಗೆ ಸಾಲವಾಗಿ ನೀಡಿದ್ದೇನೆ. ಆಸ್ತಿ ಖರೀದಿಗೆ ಮುಂಗಡವಾಗಿ ಯೂಸುಫ್‌ ಷರೀಫ್‌ 11.44 ಕೋಟಿ ರೂ. ನೀಡಿದ್ದರೆ, ವಾಹನ ಖರೀದಿಗೆ 1.72 ಕೋಟಿ ರೂ. ಹಾಗೂ ಇತರರಿಗೆ ಸಾಲವಾಗಿ 44.94 ಕೋಟಿ ರೂ. ನೀಡಿದ್ದೇನೆ ಯೂಸುಫ್‌ ಷರೀಫ್‌ ತಿಳಿಸಿದ್ದರು.

    ನಟ ಅಮಿತಾಭ್‌ ಬಚ್ಚನ್‌ ಅವರಿಂದ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದೇನೆ. ನನಗೆ ತಾಜ್‌ ಅಬ್ದುಲ್‌ ರಜಾಕ್‌ ಮತ್ತು ಶಾಜಿಯಾ ತರನ್ನಮ್‌ ಹೆಸರಿನ ಇಬ್ಬರು ಪತ್ನಿಯರಿದ್ದು, ಐದು ಮಕ್ಕಳನ್ನು ಹೊಂದಿದ್ದೇನೆ. ನನ್ನ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಪ್ರಮಾಣಪತ್ರದಲ್ಲಿ ಯೂಸೂಫ್‌ ಉಲ್ಲೇಖಿಸಿದ್ದರು.

    ಹಾರ ಹಾಕುವಾಗ ವರನ ಕೈತಾಗಿದ್ದಕ್ಕೆ ಮದ್ವೆಯನ್ನೇ ತಿರಸ್ಕರಿಸಿದ ವಧು! ಇನ್ನೇನು ತಾಳಿ ಕಟ್ಟಬೇಕು.. ಅಷ್ಟರಲ್ಲಿ ಅಲ್ಲೋಲ-ಕಲ್ಲೋಲ

    ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ… ಏಕೆ ಗೊತ್ತಾ?

    ಮದ್ವೆಗೆ ಹೋಗಿದ್ದೆ, ಮಲಗಲು ಕೋಣೆಗೆ ಹೋಗುವಾಗ ದಾರೀಲಿ ಚಿನ್ನದ ಸರ ಸಿಕ್ತು.. ದಯವಿಟ್ಟು ವಾರಸುದಾರರಿಗೆ ತಲುಪಿಸಿ ಸರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts