ಹಾರ ಹಾಕುವಾಗ ವರನ ಕೈತಾಗಿದ್ದಕ್ಕೆ ಮದ್ವೆಯನ್ನೇ ತಿರಸ್ಕರಿಸಿದ ವಧು! ಇನ್ನೇನು ತಾಳಿ ಕಟ್ಟಬೇಕು.. ಅಷ್ಟರಲ್ಲಿ ಅಲ್ಲೋಲ-ಕಲ್ಲೋಲ

wedding
Published on

ಬೆಳ್ತಂಗಡಿ (ದಕ್ಷಿಣ ಕನ್ನಡ): ಇನ್ನೇನು ವಧುವಿಗೆ ವರ ತಾಳಿ ಕಟ್ಟಬೇಕು... ಅಷ್ಟರಲ್ಲಿ ಜಗಳ ಶುರು ಮಾಡಿದ ವಧು, ಮದುವೆಯನ್ನೇ ಕ್ಯಾನ್ಸಲ್​ ಮಾಡಿದ್ದಾಳೆ.

ಇಂತಹ ಘಟನೆ ನಾರಾವಿಯಲ್ಲಿ ಶುಕ್ರವಾರ ನಡೆದಿದೆ. ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸುವಾಗ ವಧುವಿನ ಕೊರಳು ಮತ್ತು ಕಿವಿಗೆ ವರನ ಕೈ ತಾಗಿದ್ದನ್ನೇ ನೆಪ ಮಾಡಿಕೊಂಡು ವಧು ಸಿಟ್ಟಾದಳು. ಹಿರಿಯರ ಮಾತುಕತೆ ಬಳಿಕ ಮದ್ವೆ ನಡೆಸಲು ಕುಟುಂಬಸ್ಥರು ಸಜ್ಜಾದರು. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮತ್ತೆ ಸಿಟ್ಟಿಗೆದ್ದ ವಧು, ತಾಳಿ ಸಹಿತ ಹೂವಿನ ಹಾರವನ್ನು ಎಸೆದು ಈ ಮದುವೆಯೇ ಬೇಡ ಎಂದಳು. ಇದರ ಬೆನ್ನಲ್ಲೇ ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಈ ಘಟನೆ ಬೆನ್ನಲ್ಲೇ ಎರಡು ಕುಟುಂಬಗಳ ನಡುವೆಯೂ ಸಣ್ಣಮಟ್ಟಿನ ಜಗಳ ಏರ್ಪಟ್ಟಿತ್ತು. ಸ್ಥಳಕ್ಕಾಗಮಿಸಿದ ವೇಣೂರು ಪೊಲೀಸರ ಸಮ್ಮುಖ ಮಾತುಕತೆ ನಡೆದರೂ, ಪ್ರಯೋಜನವಾಗದೆ ಮದುವೆ ನಡೆಯಲಿಲ್ಲ. ನಿಶ್ಚಿತಾರ್ಥ ಸಂದರ್ಭ ಬಂದಿದ್ದ ವರನೇ ಬೇರೆ, ಹೆಣ್ಣು ನೋಡಲು ಬಂದವನೇ ಬೇರೆ, ಈಗ ಮದುವೆ ಆಗುತ್ತಿರುವವನೇ ಬೇರೆ. ಮೂರು ಬಾರಿಯೂ ಬಂದದ್ದು ಬೇರೆ ಬೇರೆ. ಇದೇ ಕಾರಣಕ್ಕೆ ವಧು ಮದುವೆಯನ್ನ ತಿರಸ್ಕರಿಸಲು ಮುಖ್ಯ ಕಾರಣ ಎಂದು ಆರೋಪಿಸುವ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net