More

    142 ಕೆರೆಗಳನ್ನು ಪುನಶ್ಚೇತನಗೊಳಿಸಿದ ಇಂಜಿನಿಯರ್; 15 ವರ್ಷಗಳಿಂದ ಒಣಗಿದ್ದ ಕೆರೆಯಲ್ಲೂ ನೀರು!

    ಚೆನ್ನೈ: ಜನಜೀವನಕ್ಕೆ ಜಲಮೂಲಗಳು ಅತ್ಯಗತ್ಯ. ಅದಕ್ಕೆಂದೇ ಈ ಹಿಂದಿನವರು ಕೆರೆ-ಕಟ್ಟೆಗಳನ್ನು ಕಟ್ಟಿದ್ದರೂ ಆಧುನೀಕರಣ-ನಗರೀಕರಣದಿಂದಾಗಿ ಅವು ಒಣಗುತ್ತ, ಕಣ್ಮರೆಯಾಗುತ್ತ ಬಂದಿವೆ. ಆದರೆ ಇಲ್ಲೊಬ್ಬರು ಇಂಜಿನಿಯರ್​ ಅಂಥ ದೇಶದಲ್ಲಿ ಒಟ್ಟು 142 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದಾರೆ.

    ತಮಿಳುನಾಡಿನ ನಿಮಲ್ ರಾಘವನ್ ಎಂಬ 35 ವರ್ಷದ ಇಂಜಿನಿಯರ್ ಇಂಥದ್ದೊಂದು ಮಹಾನ್ ಕೆಲಸ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ದುಬೈನಿಂದ ಊರಿಗೆ ಬಂದಿದ್ದ ಇವರು ಈಗಾಗಲೇ 142 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಇವೆಲ್ಲವೂ ಬಹುತೇಕ ಕ್ರೌಡ್​​ಫಂಡಿಂಗ್​ನಿಂದ ಕಾರ್ಯಸಾಧ್ಯವಾಗಿವೆ.

    ಇದನ್ನೂ ಓದಿ: ಚಿಕಿತ್ಸೆಗೆಂದು ಉಡುಪಿಯಿಂದ ಬೆಂಗಳೂರಿಗೆ ಬಂದವನ ಎರಡೂ ಕಾಲು ಪೂರ್ತಿ ಜಖಂ!

    ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ ನಡಿಯಂ ಗ್ರಾಮಕ್ಕೆ 2018ರಲ್ಲಿ ರಾಘವನ್ ದುಬೈನಿಂದ ಮರಳಿದ್ದರು. ಅದೇ ನವೆಂಬರ್​ನಲ್ಲಿ ಗಾಜಾ ಸೈಕ್ಲೋನ್​ ಅಪ್ಪಳಿಸಿದ್ದು, ತಮಿಳುನಾಡಿನಾದ್ಯಂತ ಸಂಕಷ್ಟ ಪರಿಸ್ಥಿತಿ ಉಂಟಾಗಿತ್ತು. ಮೂರು ತಿಂಗಳ ಕಾಲ ಇದರ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ನಿಮಲ್ ರಾಘವನ್​ಗೆ ಸ್ಥಳೀಯವಾಗಿ ದೊಡ್ಡ ಸಮಸ್ಯೆ ಎಂದರೆ ನೀರಿನದ್ದು ಎಂಬುದು ಅರಿವಿಗೆ ಬಂದಿತ್ತು.

    ಇದನ್ನೂ ಓದಿ: 4 ವರ್ಷ ಕಳೆದರೂ ಕಳವಾದ ಚಿನ್ನದ ಸರ ಪತ್ತೆ ಮಾಡಲಾಗದೆ ಹೊಸ ಸರ ಕೊಡಿಸಿದ ಪೊಲೀಸರು!; ಆಗಿದ್ದೇನು?

    ತನ್ನ ಮೊದಲ ಯೋಜನೆಯಾಗಿ ಹುಟ್ಟೂರಿನ 565 ಎಕರೆ ವಿಸ್ತೀರ್ಣದ ಪೆರಿಯಕುಲಂ ಕೆರೆಯ ಪುನಶ್ಚೇತನ ಕೈಗೊಂಡಿದ್ದ ನಿಮಲ್, ಅದನ್ನು ಸಮಾನಮನಸ್ಕರ ಸಹಕಾರ ಹಾಗೂ ಕ್ರೌಂಡ್​ಫಂಡಿಂಗ್ ಸಹಾಯದಿಂದ 27 ಲಕ್ಷ ರೂ. ಖರ್ಚಿನಲ್ಲಿ ಪುನಶ್ಚೇತನಗೊಳಿಸಿದ್ದರು. ಹೀಗೆ 142 ಕೆರೆಗಳನ್ನು ಪುನಶ್ಚೇತನಗೊಳಿಸಿರುವ ನಿಮಲ್, ಇನ್ನೆರಡು ಕೆರೆಗಳ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿರುವಾಗಲೇ ಮತ್ತೊಂದು ಕೆರೆಯ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಮದ್ವೆಯಾಗಿ 17 ವರ್ಷಗಳ ಬಳಿಕ ಗೊತ್ತಾಯ್ತು ಇಬ್ಬರ ನಡುವಿನ ಅಸಲಿ ಸಂಬಂಧ!

    ಇದೀಗ 145ನೇ ಯೋಜನೆಯಾಗಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೆನಿಕರೈ ಕೆರೆ ಪುನಶ್ಚೇತನ ನಡೆಸುತ್ತಿದ್ದಾರೆ. ಪರಿಣಾಮವಾಗಿ 15 ವರ್ಷಗಳಿಂದ ಒಣಗಿದ್ದ ಈ ಕೆರೆಯಲ್ಲಿ ನೀರು ತುಂಬಲಾರಂಭಿಸಿದೆ. ಈ ಕೆರೆಯಲ್ಲಿನ ಉಪ್ಪುನೀರು ಬರುತ್ತಿದ್ದು, ಅದನ್ನು ಇನ್ನೆರಡು ವರ್ಷಗಳಲ್ಲಿ ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು ಎಂಬ ವಿಶ್ವಾಸ ಅವರದ್ದು.

    ಉತ್ತರಪ್ರದೇಶದಲ್ಲೂ ಕೆರೆ ಪುನಶ್ಚೇತನಗೊಳಿಸಿರುವ ನಿಮಲ್, ಜಮ್ಮು-ಕಾಶ್ಮೀರ ಮತ್ತು ಹರಿಯಾಣದಲ್ಲೂ ಅದೇ ಕಾರ್ಯದಲ್ಲಿದ್ದಾರೆ. ಮಾತ್ರವಲ್ಲ ಅವರಿಗೆ ಈಗ ಕೀನ್ಯಾದಿಂದಲೂ ಕರೆ ಬಂದಿದ್ದು, ಅಲ್ಲಿನ ಕೆರೆ ಪುನಶ್ಚೇತನಕ್ಕಾಗಿ ತಿಂಗಳಲ್ಲಿ ಹತ್ತು ದಿನ ಮೀಸಲಿಡಲಿದ್ದಾರೆ.

    ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts