More

    ವೈರಲ್ ಆದ ರೋಹಿತ್ ಶರ್ಮಾ ಕಾರಿನ ನಂಬರ್ ಪ್ಲೇಟ್‌ ಹಿಂದಿದೆ ಈ ರೋಚಕ ಸಂಗತಿ!

    ನವದೆಹಲಿ: ಟೀಂ ಇಂಡಿಯಾದ ಕ್ಯಾಪ್ಟನ್, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಅಂದ್ರೆ ಏಪ್ರಿಲ್ 1ರಂದು ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಸ್ಟೇಡಿಯಂಗೆ ತಂಡದ ಬಸ್​ನಲ್ಲಿ ಬಾರದ ರೋಹಿತ್​, ತಮ್ಮ ಐಷಾರಾಮಿ ರೇಂಜ್ ರೋವರ್ ಕಾರಿನಲ್ಲಿ ಆಗಮಿಸಿದರು. ಕಾರಿನಲ್ಲಿ ಬಂದಿದ್ದೇ ತಡ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡರು. ಈ ಫೋಟೋಗಳು ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತು.

    ಇದನ್ನೂ ಓದಿ: VIDEO; ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಪ್ರೆಗ್ನೆಂಟ್!..ಸುಳಿವು ಕೊಟ್ಟ ಸುನೀಲ್ ಶೆಟ್ಟಿ!

    ರೋಹಿತ್ ಶರ್ಮಾರ ಕಾರಿಗಿಂತ ಕಾರಿನ ನಂಬರ್​ ಮೇಲೆ ಎಲ್ಲರ ಗಮನಸೆಳೆದಿದ್ದು, ಈ ಅಂಕಿ ಹಿಂದೆ ಏನಾದರೂ ವಿಶೇಷತೆ ಇದೆಯೇ? ಅಥವಾ ಯಾವುದಾದರೂ ಕುತೂಹಲಕಾರಿ ಸಂಗತಿ ಅಡಗಿದೆಯೇ? ಎಂಬ ಹಲವಾರು ಪ್ರಶ್ನೆಗಳು ನೆಟ್ಟಿಗರನ್ನು ಕಾಡಿತ್ತು. ಇಂದಿಗೂ ಸಹ ಅಭಿಮಾನಿಗಳ ಗಮನ ಸೆಳೆದ ಅತ್ಯಂತ ಆಸಕ್ತಿದಾಯಕ ವಿಷಯ ಕಾರಿನ ವಿಶಿಷ್ಟ ನಂಬರ್ ಪ್ಲೇಟೇ ಆಗಿದೆ. ಈ ನಂಬರ್​ ಪ್ಲೇಟ್​ ಹಿಂದೆ ಬಿದ್ದಿರುವ ಕೆಲವು ಫ್ಯಾನ್ಸ್​ಗೆ ಇಲ್ಲಿದೆ ನೋಡಿ ಅದರ ಹಿಂದಿರುವ ಅಸಲಿ ಮಾಹಿತಿ.

    ಕಾರಿನ ನಂಬರ್ ಪ್ಲೇಟ್‌ನಲ್ಲಿ ‘MH01E00264’ ಎಂದು ನಮೂದಿಸಲಾಗಿದೆ. ಕುತೂಹಲಕಾರಿಯಾಗಿ ‘264’ ನಂಬರ್ ಪ್ಲೇಟ್‌ನ ಕೊನೆಯ ಮೂರು ಅಂಕಿಗಳು ರೋಹಿತ್ ಅವರ ವೃತ್ತಿಜೀವನದಲ್ಲಿ ಅತ್ಯಂತ ವಿಶೇಷವಾಗಿದೆ. ಕಾರಣ ಆ ವಿಶಿಷ್ಟ ನಂಬರ್​ ಅವರ ಏಕದಿನ ಸ್ಕೋರ್ ಆಗಿದೆ. ಈ ವಿಷಯ ಶರ್ಮಾರ ಅಭಿಮಾನಿಗಳಿಗೆ ಮೆಲುಕು ಹಾಕುವಂತಿದೆ. ನವೆಂಬರ್ 13, 2014ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 264 ರನ್​ ಸಿಡಿಸಿದ್ದ ರೋಹಿತ್​ಗೆ ಇದು ವೈಯಕ್ತಿಕ ಸ್ಕೋರ್​ ಮಾತ್ರವಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

    ಇದನ್ನೂ ಓದಿ: ಕುಂಬ್ಳಕಾಯಿ ಕಳ್ಳ ಅಂದ್ರೆ ಸುಮಲತಾ ಏಕೆ ಹೆಗ್ಲುಮುಟ್ಟಿ ನೋಡ್ಕೊಳ್‌ಬೇಕು?

    ರೋಹಿತ್ ಅವರ ಅದ್ಭುತ ಪ್ರದರ್ಶನವು ಶ್ರೀಲಂಕಾ ವಿರುದ್ಧ ಭಾರತವು 404/5 ಪ್ರಬಲ ಮೊತ್ತವನ್ನು ಕಲೆಹಾಕುವಲ್ಲಿ ಸಹಾಯ ಮಾಡಿತು. ಸದ್ಯ ಈ ಸಂಗತಿ ತಿಳಿದ ಹಿಟ್ ಮ್ಯಾನ್ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದು, ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ನೀವೇ ಮುಂದುವರೆಯಬೇಕು ಎಂದು ಆಶಿಸಿದ್ದಾರೆ,(ಏಜೆನ್ಸೀಸ್).

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಈ ಹೋಟೆಲ್​ಗೆ ಮಾತ್ರ ಹೋಗಲೇಬೇಡಿ! ಇಲ್ಲಿಗೆ ಹೋದ್ರೆ ಖಂಡಿತ ಅವಮಾನ, ಕಣ್ಣೀರು ತಪ್ಪಿದ್ದಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts