More

    ರಾಜ್ಯದಲ್ಲಿ ಜುಲೈ 1ರಿಂದ ಶಾಲಾ ಕಾಲೇಜು ಆರಂಭ

    ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್​ ಮಾಡುವುದಾಗಿ ಶುಕ್ರವಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ರಾಜ್ಯ ಶಿಕ್ಷಣ ಇಲಾಖೆ. ದ್ವಿತೀಯ ಪಿಯುಸಿ ಎಕ್ಸಾಂ ರದ್ದಾಗಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಾದರೂ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳನ್ನೂ ಪಾಸ್​ ಮಾಡಲಾಗುತ್ತೆ. ಇದರ ಜತೆಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಆರಂಭ ಆಗುತ್ತೆ ಎಂಬ ಗೊಂದಲಕ್ಕೂ ಇಂದು ತೆರೆಬಿದ್ದಿದೆ.

    ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಹೇಳಿದ್ದಾರೆ. ಬಹುತೇಕ ಶಾಲಾ-ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದು, ಇಲಾಖೆ ಅಧಿಕೃತವಾಗಿ ಎಂದಿನಿಂದ ಶೈಕ್ಷಣಿಕ ವರ್ಷ ಆರಂಭಿಸಲಾಗುತ್ತದೆ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಜೂ.15ರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ. ಇದು ಮುಗಿಯುತ್ತಿದಂತೆಯೇ ಜು.1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಕರೊನಾ ಪರಿಸ್ಥಿತಿ ಇದೇ ರೀತಿ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳ ಬದಲಾಗಿ ಆನ್‍ಲೈನ್ ತರಗತಿಗಳನ್ನೇ ನಡೆಸಲಾಗುತ್ತದೆ. ಈ ವೇಳಾಪಟ್ಟಿಯು ಕರೊನಾ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸಲಿಲ್ಲವಾದರೆ ಮುಂದೆ ಹೋಗುವ ಸಾಧ್ಯತೆ ಕೂಡ ಇದೆ ಎಂದು ಸ್ಪಷ್ಟಪಡಿಸಿದರು.

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

    ರೋಹಿಣಿ ಸಿಂಧೂರಿ ಕಿರುಕುಳ ಸಹಿಸೋಕೆ ಆಗ್ತಿಲ್ಲ ಎಂದು ಐಎಎಸ್​ ಹುದ್ದೆಗೇ ರಾಜೀನಾಮೆ ಕೊಟ್ಟ ಶಿಲ್ಪಾನಾಗ್​

    ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

    ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

    ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts