More

    ಕರೊನಾ ಭಯ ಬಿಟ್ಹಾಕಿ ಲಾಠಿ ಹಿಡಿದು ರಸ್ತೆಗಿಳಿದ ತುಂಬು ಗರ್ಭಿಣಿ ಪಿಎಸ್​ಐ!

    ಹಾವೇರಿ: ಕರೊನಾ ಸೋಂಕಿನ ಅಟ್ಟಹಾಸದ ನಡುವೆಯೂ ರಜೆ ಪಡೆಯದೆ ಗರ್ಭಿಣಿ ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ ಕೆಲಸ ಮಾಡುತ್ತಿದ್ದು, ಅನಗತ್ಯವಾಗಿ ರಸ್ತೆಗೆ ಬರುವ ಸಾರ್ವಜನಿಕರಿಗೆ ಲಾಠಿ ಹಿಡಿದು ಕರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೆಕೇರೂರು ಪಟ್ಟಣ ಪೊಲೀಸ್​ ಠಾಣೆಯ ಪಿಎಸೈ ಎಂ.ಟಿ. ದೀಪು 7 ತಿಂಗಳ ತುಂಬು ಗರ್ಭಿಣಿ. ಕರೊನಾ ಸೋಂಕು ಹರಡದಂತೆ ಗರ್ಭಿಣಿಯರು ಬಹಳ ಜಾಗ್ರತೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೂ ದೀಪು ಮಾತ್ರ ಇನ್ನೂ ಮಾತೃತ್ವ ರಜೆ ಪಡೆದಿಲ್ಲ. ಯಾವ ಭಯ, ಆತಂಕವೂ ಇಲ್ಲದೆ ಪ್ರತಿದಿನ ಸಿಟಿರೌಂಡ್ ಹೊಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಯಶಸ್ವಿಗೆ ಹಗಲು-ರಾತ್ರಿ ಎನ್ನದೆ ಕೆಲ ಮಾಡುತ್ತಿದ್ದಾರೆ.

    ಪೊಲೀಸ್​ ಜೀಪ್​ನಲ್ಲಿ ಮೈಕ್ ಹಿಡಿದು, ‘ಯಾರೊಬ್ಬರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಕೋವಿಡ್ ನಿಯಮ ಪಾಲನೆ ಮಾಡಿ’ ಎಂದು ಹೇಳುತ್ತಾ ಪಿಎಸ್​ಐ ದೀಪು, ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.

    ಕರೊನಾ ಭಯ ಬಿಟ್ಹಾಕಿ ಲಾಠಿ ಹಿಡಿದು ರಸ್ತೆಗಿಳಿದ ತುಂಬು ಗರ್ಭಿಣಿ ಪಿಎಸ್​ಐ!

    ಒಂದೂವರೆ ವರ್ಷದಿಂದ ಹಿರೆಕೇರೂರು ಪಟ್ಟಣದ ಠಾಣೆಯಲ್ಲಿ ಪಿಎಸ್​ಐ ಆಗಿ ಕೆಲಸ ಮಾಡುತ್ತಿದ್ದಾರೆ ದೀಪು. ಇವರ ಕರ್ತವ್ಯ ನಿಷ್ಠೆಗೆ ಇಲಾಖೆಯಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನಿಮ್ಮ ಸೇವೆ ಇತರರಿಗೆ ಸ್ಫೂರ್ತಿದಾಯಕ ಎಂದು ಸಾರ್ವಜನಿಕರು ಶುಭ ಕೋರುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ…

    ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts