More

    ಚಿನ್ನದ ಹುಡುಗ ನೀರಜ್ ಚೋಪ್ರಾ ಗುರು ಕಾಶಿನಾಥ ನಾಯ್ಕರಿಗೆ 5 ಲಕ್ಷ ನಗದು ಪುರಸ್ಕಾರ ನೀಡಿ ಸನ್ಮಾನ

    ಬೆಂಗಳೂರು: ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನದ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿ ನಮ್ಮ ಕನ್ನಡಿಗ ಕಾಶಿನಾಥ ನಾಯ್ಕ. ಇವರು ನಮ್ಮ ಕನ್ನಡದ ಹೆಮ್ಮೆ ಎಂದು ಸಚಿವ ಡಾ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

    ನೀರಜ್ ಚೋಪ್ರಾ ಗುರು ಕಾಶಿನಾಥ ನಾಯ್ಕ ಅವರಿಗೆ ವಿಧಾನಸೌಧದ ಸಚಿವರ ಕೊಠಡಿಯಲ್ಲಿ 5 ಲಕ್ಷ ಮೌಲ್ಯದ ಚೆಕ್ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ, ಜಾವೆಲಿನ್ ಥ್ರೋನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಬಂಗಾರದ ಸಾಧನೆ ಮಾಡಿದರು. ಅವರ ಸಾಧನೆ ಹಿಂದಿರುವುದು ನಮ್ಮ ಕನ್ನಡಿಗ ಕಾಶಿನಾಥ ನಾಯ್ಕ. ಹಾಗಾಗಿ, ಕಾಶಿನಾಥ ನಾಯ್ಕ ಅವರಿಗೆ ಐದು ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದರು.

    ನೀರಜ್ ಚೋಪ್ರಾ ಅವರಿಗೆ ಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಿದ್ದೇವೆ. ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಕ್ರೀಡಾಪಟುಗಳನ್ನು 2024ರ ಒಲಂಪಿಕ್ಸ್‌ಗೆ ಕಳುಹಿಸುವ ಗುರಿ ಹೊಂದಲಾಗಿದೆ. ಜನವರಿ 4-5 ರಂದು ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡಾ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

    ಯುವ ಸಬಲೀಕರಣ ಮತ್ತು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಗೋಪಾಲಕೃಷ್ಣ ಉಪಸ್ಥಿತರಿದ್ದರು.

    ಜಾವೆಲಿನ್ ಪವರ್​ಹೌಸ್ ಆಗಲಿದೆ ಭಾರತ! ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

    ದುರಂತಕ್ಕೆ ದಾರಿ ಮಾಡಿದ್ದೇ ಅರ್ಚನಾಳ 3ನೇ ಗಂಡನ ಜತೆ ಮಗಳ ಸಲ್ಲಾಪ! ಒಂದೂವರೆ ತಿಂಗಳ ರಹಸ್ಯ ಬಯಲು

    ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ಸತ್ತು ಹೋದ ಅಂತೇಳಿ… ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts