More

    ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ವಿವಾದಾತ್ಮಕ ವಿಡಿಯೋ ಹಾಕಿ ಗಲಭೆ ಸೃಷ್ಟಿಸಿದ್ದ ಆರೋಪಿಗೆ ನ್ಯಾಯಾಂಗ ಬಂಧನ

    ಹುಬ್ಬಳ್ಳಿ: ಕೋಮುಭಾವನೆಗೆ ದಕ್ಕೆ ತರುವ ಅನಿಮೇಟೆಟ್​ ವಿಡಿಯೋವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿಕೊಂಡು ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣನಾಗಿದ್ದ ಆರೋಪಿ ಅಭಿಷೇಕ ಹಿರೇಮಠನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪೊಲೀಸರು ಸೋಮವಾರ 4ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಆರೋಪಿ ಅಭಿಷೇಕನನ್ನು ಹಾಜರುಪಡಿಸಿದ್ದರು. ಏ.30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದರು. ಅಭಿಷೇಕ ಪರ‌ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

    ಇನ್ನು ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 89 ಆರೋಪಿಗಳನ್ನು ಸೋಮವಾರ ಹುಬ್ಬಳ್ಳಿಯ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕನ ಬಂಧನಕ್ಕೆ ಒತ್ತಾಯಸಿದ ವೇಳೆ ಉಂಟಾದ ಗಲಭೆಯಿಂದ ಇಡೀ ಹುಬ್ಬಳ್ಳಿ ಸೇರಿದಂತೆ ರಾಜ್ಯವೇ ಬೆಚ್ಚಿತ್ತು. ಈ ಘಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿ ಸಿಕ್ಕಸಿಕ್ಕ ವಸ್ತು, ಕಾರು, ಆಸ್ಪತ್ರೆ ಮೇಲೆ ಕಲ್ಲು, ಬಡಗಿಯಿಂದ ಜಖಂಗೊಳಿಸಿ ಪೋಲಿಸರ ಮೇಲೂ ಕಲ್ಲು ತೂರಿದ್ದರು. ಅಲ್ಲದೇ ಪೊಲೀಸ್​ ವಾಹನವನ್ನು ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಿಸಿ ಟಿವಿ ಆಧಾರದ ಮೇಲೆ ಅಧಿಕೃತವಾಗಿ ಪೊಲೀಸರು ನೀಡಿರುವ ಮಾಹಿತಿ ಮೇರೆಗೆ ಇದೀಗ 89 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ಕು ಜನ ಬಾಲಾಪರಾಧಿಗಳು ಇದ್ದಾರೆ.

    ಹುಬ್ಬಳ್ಳಿ ಗಲಾಟೆ ಸಂಬಂಧ ಅಮಾಯಕರಿಗೆ ತೊಂದರೆ ಕೊಡಬೇಡಿ: ಪೊಲೀಸರಿಗೆ ಎಚ್​ಡಿಕೆ ಮನವಿ

    ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು… ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ

    ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಲು ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts