More

    ಕಳೆದ ಲಾಕ್​ಡೌನ್​ನಲ್ಲೇ ನನ್ನ ಮದುವೆ ಆಯ್ತು: ‘ಗಂಡ-ಹೆಂಡ್ತಿ’ ಗುಟ್ಟು ಬಿಚ್ಚಿಟ್ಟ ಸಂಜನಾ ಗಲ್ರಾನಿ

    ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿ ಕೊನೆಗೂ ತನ್ನ ಮದುವೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿ ಸಂಜನಾರ ಮದುವೆ ವಿಚಾರ ಭಾರೀ ಸುದ್ದಿ ಮಾಡಿತ್ತಾದರೂ ಸ್ಪಷ್ಟತೆ ಸಿಕ್ಕಿರಲಿಲ್ಲ. ಇದೀಗ ಸ್ವತಃ ಸಂಜನಾರೇ ತಾನು ಮದುವೆಯಾಗಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾರೆ.

    ಕರೊನಾ ಲಾಕ್​ಡೌನ್​ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಂಜನಾ ಗಲ್ರಾನಿ ಫೌಂಡೇಶನ್ ವತಿಯಿಂದ ನೆರವು ನೀಡುತ್ತಿರುವ ನಟಿ, ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಪಕ್ಕದಲ್ಲಿರುವ ಗುರುರಾಜ ಮಂಟಪದಲ್ಲಿ ಲೈಟ್ ಮೆನ್ ಸಂಘ ಮತ್ತು ಪ್ರೊಡಕ್ಷನ್ ಯೂನಿಟ್​ನ ಸದಸ್ಯರಿಗೆ ಆಹಾರ ಕಿಟ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಸಂಜನಾ, ಕಳೆದ ಲಾಕ್​ಡೌನ್​ನಲ್ಲಿ ಅಜೀಜ್ ಜತೆ ನನ್ನ ಮದುವೆ ಆಗಿರೋದು ನಿಜ ಎಂದರು. ಇದನ್ನೂ ಓದಿರಿ ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

    ನನ್ನ ಮದುವೆ ವಿಷ್ಯವನ್ನು ಲಾಕ್​ಡೌನ್ ಮುಗಿದ ಮೇಲೆ ತಿಳಿಸೋಣ ಅಂತಿದ್ದೆ. ಆದರೆ ನಾನಾ ಕಾರಣದಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಆಗಲಿಲ್ಲ. ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೂ ಆಗಲಿಲ್ಲ ಅನ್ನೋ ಕೊರಗಿದೆ. ಮದುವೆ ಸಂಭ್ರಮದ ಬದಲಾಗಿ ಲಾಕ್​​ಡೌನ್ ಸಂದರ್ಭದಲ್ಲಿ ಊಟಕ್ಕೆ ಪರದಾಡುತ್ತಿರುವ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಂಜನಾ ಹೇಳಿದರು.

    ಸಂಜನಾ ಗಲ್ರಾನಿ ಫೌಂಡೇಷನ್ ವತಿಯಿಂದ ಕೈಲಾದ ಸಹಾಯ ಮಾಡ್ತಿದ್ದೀವಿ. ಭಗವಂತ ಶಕ್ತಿ ಕೊಟ್ಟರೆ ಕನ್ನಡ ಇಂಡಸ್ಟ್ರಿಯೇ ನನ್ನ ಮೊದಲ ಆದ್ಯತೆ ಎಂದರು. ಸಂಜನಾರ ಪತಿ ಡಾ.ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

    ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಸಂಜನಾ ಗಲ್ರಾನಿ ದಿನಸಿ​​ ಕಿಟ್​​​ ವಿತರಿಸಿದರು. ಸಂಜನಾಗೆ ನಿರ್ಮಾಪಕ ಕೆ.ಮಂಜು, ಎನ್.ಕುಮಾರ್ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಸಾಥ್ ನೀಡಿದರು.

    ಚಾಮರಾಜನಗರದಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ವಿದೇಶದಿಂದ ಬೀದರ್​ಗೆ ಬಂದ ಮಗನೂ ದುರಂತ ಅಂತ್ಯ!

    ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

    ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts