More

    ನಾಳೆ ಕಾಂಗ್ರೆಸ್​ನ ಎಲ್ಲ ಶಾಸಕರು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ ‘PAYCM’ ಪೋಸ್ಟರ್​ ಅಂಟಿಸ್ತೀವಿ: ಡಿಕೆಶಿ

    ಬೆಂಗಳೂರು: ‘ಪೇಸಿಎಂ’ ಪೋಸ್ಟರ್ ಅಂಟಿಸಿದ್ದ ಪ್ರಕರಣ ಸಂಬಂಧ ಐವರು ಕಾಂಗ್ರೆಸ್​ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ವಿರುದ್ಧ ಕೆಂಡಾಮಂಡಲವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ನಾಳೆ(ಶುಕ್ರವಾರ) ಕಾಂಗ್ರೆಸ್​ನ ಎಲ್ಲ ಎಂಎಲ್​ಎ ಮತ್ತು ಎಂಎಲ್​ಸಿಗಳು ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
    ನಾಳೆ ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಬಿಜೆಪಿಯವರು ಅಧಿಕಾರ ದುರ್ಬಳಕೆ, ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ರಾತ್ರೋರಾತ್ರಿ ಅರೆಸ್ಡ್ ಮಾಡಿರುವುದನ್ನು ಖಂಡಿಸುತ್ತೇನೆ. ಬಿಬಿಎಂಪಿಯವರಿಗೆ ಕಣ್ಣಿಲ್ವಾ? ಜನೋತ್ಸವದ್ದು ಅಷ್ಟೊಂದು ಪೋಸ್ಟರ್ ಹಾಕಿಲ್ವಾ? ಮುನಿರತ್ನ, ಸುಧಾಕರ್​ ಎಲ್ಲರೂ ಪೋಸ್ಟರ್ ಹಾಕಿಲ್ವಾ? ಇದರ ವಿರುದ್ಧ ಬಿಬಿಎಂಪಿ ಯಾಕೆ ಕೇಸ್ ಹಾಕಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

    ಪೇಸಿಎಂ ಪೋಸ್ಟರ್​ ಹಾಕಿದ ಬಳಿಕ ಬಿಜೆಪಿಯವರು ನನ್ನ ಮತ್ತು ಸಿದ್ದರಾಮಯ್ಯರ ಫೋಟೋವನ್ನೂ ಪೋಸ್ಟರ್ ಮಾಡಿದ್ದಾರೆ. ಶೇ.40 ಕಮಿಷನ್​ ಸರ್ಕಾರ ಎಂದು ನಾವು ಆರೋಪ ಮಾಡಿದ್ದೇವಾ? ಭ್ರಷ್ಟಾಚಾರ ವಿಚಾರವಾಗಿ ಬೊಮ್ಮಾಯಿ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಜನರಿಗೂ ವಿಚಾರ ಮುಟ್ಟಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರೋಗ್ಯಕರ ರಾಜಕೀಯ. ನಾಳೆ ನಾವು ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್​ ಅಂಟಿಸುತ್ತೇವೆ ಎಂದು ಡಿಕೆಶಿ ಹೇಳಿದರು.

    ನಾಳೆ ಕಾಂಗ್ರೆಸ್​ನ ಎಲ್ಲ ಶಾಸಕರು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ 'PAYCM' ಪೋಸ್ಟರ್​ ಅಂಟಿಸ್ತೀವಿ: ಡಿಕೆಶಿ

    ಕಾಂಗ್ರೆಸ್ ಪಕ್ಷದಿಂದ 40% ಕಮಿಷನ್ ಆಂದೋಲನ ನಡೆಯುತ್ತಿದೆ. ನಾನು, ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ಪೋಸ್ಟರ್ ಅಂಟಿಸಿದ್ದಾರೆ. ಬಿಜೆಪಿ ಕೂಡ ಸುಳ್ಳು ಆರೋಪ ಮಾಡಿದೆ. ನಮಗೂ ಬೇಡವಾದವರು ಅಂತ ಪೊಸ್ಟರ್ ಅಂಟಿಸಿದ್ದಾರೆ ಅಲ್ವಾ? ಅವರನ್ನು ಯಾಕೆ ಅರೆಸ್ಟ್​ ಮಾಡಿಲ್ಲ. ನಮ್ಮ ನಾಯ್ಡು ಅವರನ್ನು ರಾತ್ರಿ ಬಂಧನ ಮಾಡಿದ್ದಾರೆ. ಅವರೇನು ಕಳ್ಳತನ ಮಾಡಿದ್ರಾ? ಸರ್ಕಾರದ ವಿರುದ್ಧ ಹೋರಾಟ ಮಾಡಬಾರದಾ? ನಮಗೂ ರಿಡೂ ಸಿದ್ದರಾಮಯ್ಯ ಅಂತ ಅಂದಿದ್ದಾರೆ. ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು? ಯಾಕೆ ತನಿಖೆ ಮಾಡಿಸಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ನಾಳೆ ಕಾಂಗ್ರೆಸ್​ನ ಎಲ್ಲ ಶಾಸಕರು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ 'PAYCM' ಪೋಸ್ಟರ್​ ಅಂಟಿಸ್ತೀವಿ: ಡಿಕೆಶಿ

    ಕಾಂಗ್ರೆಸ್​ ಪೋಸ್ಟರ್​ನಲ್ಲಿ ಏನಿದೆ?: ಕಾಂಗ್ರೆಸ್​ ಹಾಕಿರುವ ಪೇಸಿಎಂ ಪೋಸ್ಟರ್​ಗಳನ್ನು ಮೊಬೈಲ್​ ಪೋನ್​ನಿಂದ ಸ್ಕಾ$ನ್​ ಮಾಡಿದರೆ ಕಾಂಗ್ರೆಸ್​ ಇತ್ತೀಚೆಗೆ ಆರಂಭಿಸಿರುವ 40 ಪರ್ಸೆಂಟ್​ ಕಮಿಷನ್​ ಸರ್ಕಾರ ಎಂಬ ವೆಬ್​ಸೈಟ್​ನಲ್ಲಿ 40 ಪರ್ಸೆಂಟ್​ ಸ್ಕಾ$ಮ್​ ಸ್ಟಾರ್ಟ್​ ಎಂಬ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಶೇ.40 ಪರ್ಸೆಂಟ್​ ಬಗ್ಗೆ ದೂರುಗಳನ್ನು ಸ್ವೀಕಾರ ಮಾಡಲಾಗುತ್ತದೆ ಎಂಬ ಮಾಹಿತಿ ಹಾಗೂ ದೂರು ನೀಡಲು ಮೊಬೈಲ್​ ಸಂಖ್ಯೆಯನ್ನು (8440004040) ತೋರಿಸುತ್ತದೆ. ರಸ್ತೆ ಹಗರಣ, ಬಿಟ್​ ಕಾಯಿನ್​ ಹಗರಣ, ಪಿಎಸ್​ಐ ಹಗರಣ ಎಂಬ ಪುಟಗಳು ಇದರಲ್ಲಿವೆ. ಎಷ್ಟು ಜನ ಸ್ಕ್ಯಾನ್​ ಮಾಡಿ ನೋಡಿದ್ದಾರೆ ಎಂಬ ಮಾಹಿತಿ ಸಹ ಸಿಗುತ್ತದೆ.

    ‘ಪೇಸಿಎಂ’ ಪೋಸ್ಟರ್ ಪ್ರಕರಣ: ಕಾಂಗ್ರೆಸ್​ನ ಐವರ ಬಂಧನ

    ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

    ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts