More

    ದಾವಣಗೆರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇವೆ! ಆಕ್ಸಿಜನ್, ವೆಂಟಿಲೇಟರ್​ಗೂ ಕೊರತೆಯಿಲ್ಲ

    ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಸಿಕ್ಕರೂ ವೆಂಟಿಲೇಟರ್, ಆಕ್ಸಿಜನ್ ಕೊರತೆಯಿದೆ ಎಂಬ ಗಟ್ಟಿಧ್ವನಿ‌ ಕೇಳಿ ಬರುತ್ತಿದ್ದರೆ, ದಾವಣಗೆರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ‌ ಒಟ್ಟು 1,900 ಹಾಸಿಗೆಗಳು ಖಾಲಿಯಿವೆ!

    ಜಿಲ್ಲಾ ಆಡಳಿತದೊಂದಿಗೆ ಬುಧವಾರ ವಿಡಿಯೋ ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಖಾತೆ ಹೊಂದಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ‌ ಬಸವರಾಜು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 2,400 ಹಾಸಿಗೆಗಳು ಲಭ್ಯವಿದ್ದು, 500 ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಉಳಿದ ಹಾಸಿಗೆಗಳು ಖಾಲಿಯಿವೆ. ಆಕ್ಸಿಜನ್ ಹಾಗೂ ವೆಂಟಿಲೇಟರ್​ಗಳಿಗೂ ಕೊರತೆಯಿಲ್ಲ. ಇದನ್ನೂ ಓದಿರಿ ಅಲ್ಲು ಅರ್ಜುನ್​ಗೆ ಕರೊನಾ ಪಾಸಿಟಿವ್​: ನನ್ನ ಬಗ್ಗೆ ಚಿಂತಿಸದಿರಿ ಎಂದ ಟಾಲಿವುಡ್​ ನಟ

    ಕರೊನಾ 2ನೇ ಅಲೆ ಕಾಲಿಟ್ಟ ಬಳಿಕ ಲಸಿಕೆಗೆ ದಿಢೀರ್ ಬೇಡಿಕೆ ಹೆಚ್ಚಳವಾಗಿದ್ದರಿಂದ ಕೊರತೆ ಉಂಟಾಗಿದೆ. ದಿನಕ್ಕೆ 20,000 ಲಸಿಕೆ ಬೇಡಿಕೆಯನ್ನು ಜಿಲ್ಲಾಧಿಕಾರಿ ಪ್ರಸ್ತಾಪಿಸಿದ್ದು, ಸಿಎಂ, ಆರೋಗ್ಯ ಸಚಿವರ‌ ಗಮನಕ್ಕೆ ತಂದು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವಂತೆ ಕೋರಲಾಗುವುದು ಎಂದು ಬೈರತಿ ಬಸವರಾಜ ಹೇಳಿದರು.

    ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts