More

    ಲಸಿಕಾಕರಣದಿಂದ ಕರೊನಾ ಸೋಂಕಿತರ ಸಂಖ್ಯೆ ಇಳಿಕೆ, ಆದ್ರೆ ಕರೊನಾ ಮುಕ್ತ ಎನ್ನಲಾಗದು: ಡಾ.ಕೆ.ಸುಧಾಕರ್

    ಬೆಂಗಳೂರು: ವ್ಯಾಪಕ ಪ್ರಮಾಣದಲ್ಲಿ ಕರೊನಾ ನಿರೋಧಕ ಲಸಿಕೆ ಹಾಕಿರುವ ಕಾರಣ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ, ಇಡೀ ವಿಶ್ವವನ್ನು ಕಾಡಿದ ಕರೊನಾ ವೈರಾಣುವಿನಿಂದ ಮುಕ್ತವಾಗಿದ್ದೇವೆ ಎಂದು ಹೇಳುವುದು ವೈಜ್ಞಾನಿಕವಾಗಿ ತಪ್ಪಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ, ಶೇ.38 ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಿದ್ದೇವೆ. ಇದರಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿದ್ದರೂ ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ ಎಂದರು.

    ಸಿಎಂ ವಿವೇಚನೆಗೆ ಬಿಟ್ಟದ್ದು: ಒಂದರಿಂದ ಐದನೇ ತರಗತಿಗಳ ಆರಂಭ ಯಾವಾಗ ಎನ್ನುವುದು ಸಿಎಂ ಬಸವರಾಜ ಬೊಮ್ಮಾಯಿ‌ ಅವರ ವಿವೇಚನೆಗೆ ಬಿಟ್ಟದ್ದು. ಶಾಲೆಗಳ ಪುನರಾರಂಭದ ಕುರಿತು ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯವನ್ನು ಇಲಾಖೆ ಕೇಳಬೇಕಾಗಿದೆ. ಸಿಎಂ ದಿನಾಂಕ ನಿಗದಿಪಡಿಸಿದ ನಂತರ ಸಚಿವರು, ತಾಂತ್ರಿಕ ಸಲಹಾ ಸಮಿತಿ, ಅಧಿಕಾರಿಗಳು ಮುಖ್ಯಮಂತ್ರಿ ಸಮಕ್ಷಮ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ‌. ಸಿಎಂ ಈಗಾಗಲೇ ನೀಡಿರುವ ಹೇಳಿಕೆ ಪ್ರಕಾರ ದಸರಾ ಹಬ್ಬದ ಬಳಿಕ ಈ ಸಭೆ ಕರೆದು, ನಿರ್ಧರಿಸುವ ಸಾಧ್ಯತೆಗಳಿವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

    ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ಪತ್ತೆ: ಪೊಲೀಸರ ಬಳಿ ಮನದ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಮಕ್ಕಳು

    ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ

    ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts