More

    ಪೋಲಿಯೋ ವ್ಯಾಕ್ಸಿನ್‌ನಿಂದ ವಂಚಿತರಾದರೆ ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆ

    ಚಿಕ್ಕಮಗಳೂರು: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ದೇಶವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸೋಣ. ಇದಕ್ಕೆ ಎಲ್ಲ ನಾಗರೀಕರೂ ಕೈಜೋಡಿಸಬೇಕು ಎಂದು ನಗರಸಭೆ ಸದಸ್ಯ ಮುನೀರ್ ಅಹ್ಮದ್ ಮನವಿ ಮಾಡಿದರು.

    ನಗರದ ಹಳೇ ಉಪ್ಪಳ್ಳಿ ರಸ್ತೆ ಸಮೀಪವಿರುವ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಲಿಯೋ ಒಂದು ಮಾರಕ ರೋಗ. ಯಾವುದೇ ಮಕ್ಕಳು ಈ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
    ಪಾಲಕರು ಮಕ್ಕಳನ್ನು ಸ್ವಯಂ ಪ್ರೇರಿತರಾಗಿ ಆರೋಗ್ಯ, ಅಂಗನವಾಡಿ ಕೇಂದ್ರ ಹಾಗೂ ಸಂಚಾರಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕು. ವಿಶೇಷವಾಗಿ ಸ್ಲಂಗಳಲ್ಲಿ ವಾಸಿಸುವ ನಿವಾಸಿಗಳು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಕಡೆ ಗಮನಹರಿಸಬೇಕು ಎಂದು ಹೇಳಿದರು.
    ನಗರಸಭೆ ಸದಸ್ಯ ಖಲಂದರ್ ಮಾತನಾಡಿ, ಮಕ್ಕಳು ಆರೋಗ್ಯವಾಗಿ ಜೀವಿಸುವ ಸಲುವಾಗಿ ಸರ್ಕಾರ ಮಾ.3ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸುತ್ತಿದೆ. ಲಸಿಕೆಯಿಂದ ವಂಚಿತರಾದರೆ ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಲಸಿಕೆ ಹಾಕಿಸುವುದು ಕಡ್ಡಾಯ ಎಂದರು.
    ಅಂಗನವಾಡಿ ಶಿಕ್ಷಕಿ ವಸೀಮ ಭಾನು, ಅಂಗನವಾಡಿ ಸಹಾಯಕಿರಾದ ಶೀಲಾ, ಶಾರದಮ್ಮ, ಸುಧಾ, ಮೇಘನಾ, ಆಶಾ ಕಾರ್ಯಕರ್ತೆಯರಾದ ಮಾಲಾ, ಸುಶೀಲಾ, ರೇಣುಕಾ, ಹೇಮಾವತಿ ಇತರರಿದ್ದರು.

    1016 ಬೂತ್
    ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 74,592 ಮಕ್ಕಳಿದ್ದು, ಈ ಮಕ್ಕಳಿಗೆ ಪೊಲಿಯೋ ಹನಿ ಹಾಕಲು 1,016 ಬೂತ್ ಸ್ಥಾಪಿಸಲಾಗಿತ್ತು. 898 ಸಿಬ್ಬಂದಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts