More

  ಪೋಲಿಯೋ ಹಾಕಿಸಿ ಅಂಗವೈಕಲ್ಯ ತಡೆಯಿರಿ

  ಕಲಬುರಗಿ: ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು, ಜಗತ್ತಿಗೆ ಮಾದರಿಯಾಗಿದೆ. ಮುಂಜಾಗ್ರತೆಯಿಂದ ಅಂಗವಿಕಲ ತಡೆಯಬಹುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

  ನಗರದ ಹೀರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಎಚ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

  ಯಾರೊಬ್ಬರೂ ಅಂಗವಿಕಲರಾಗಬಾರದು ಎಂಬ ಉದ್ದೇಶದೊಂದಿಗೆ ಪೋಲಿಯೋ ಲಸಿಕೆ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದ್ದು, ಎಲ್ಲರೂ ಮಕ್ಕಳಿಗೆ ಕಡ್ಡಾಯವಾಗಿ ಕೊಡಿಸಬೇಕು. ತಾಯಂದಿರು ಐದು ವರ್ಷದ ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ಮನವಿ ಮಾಡಿದರು.

  ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ ೩,೪೧,೯೫೧ ಮಕ್ಕಳಿದ್ದಾರೆ. ಇದುವರೆಗೂ ಮನೆಯಲ್ಲಿ ಕೆಲ ಮಕ್ಕಳಿಗೆ ಹಾಕದಿರುವವರು ಲಸಿಕೆ ಹಾಕಿಸಬೇಕು. ೧೭ ಲಸಿಕೆ ಕೇಂದ್ರ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ಮೇಲ್ವಿಚಾರಕು, ಆಶಾ ಕಾರ್ಯಕರ್ತೆಯರು, ಸಂಚಾರಿ ಸ್ಥಳಗಳಲ್ಲಿ, ತಂಗುದಾಣಗಳಲ್ಲಿ ಹಾಗೂ ಮನೆ ಮನೆ ಭೇಟಿ ಮಾಡಿ ಲಸಿಕೆ ಹಾಕುತ್ತಾರೆ. ಸ್ಪಂದಿಸಬೇಕು ಎಂದರು.

  ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ ಮಾತನಾಡಿ, ಪೋಲಿಯೋ ಅಭಿಯಾನದಲ್ಲಿ ಭಾರತ ಬೇರೆ ದೇಶಗಳಿಗೆ ಮಾದರಿಯಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಪಲ್ಸ್ ಪೋಲಿಯೋ ಲಸಿಕೆಯಿಂದ ಮಕ್ಕಳು ವಂಚಿತರಾಗಬಾರದು. ಬೂತ ಮಟ್ಟದಲ್ಲಿ ಪೋಲಿಯೋ ಲಸಿಕೆ ನೀಡುತ್ತಿದ್ದು, ಮೂರು ದಿನ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ ಎಂದರು.

  ಮಹಾನಗರ ಪಾಲಿಕೆ ಸದಸ್ಯ ಅಲಿಮೊದ್ದೀನ್ ಪಟೇಲ್, ಲಿಂಗರಾಜ ಕಣ್ಣಿ, ಪೋಲಿಯೋ ಸರ್ವೇಕ್ಷಣಾ ಅಧಿಕಾರಿಗೆ ಡಾ.ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಡಾ. ಮಾರುತಿ ಕಾಂಬಳೆ, ಸುನೀತಾ ಜಾಧವ್ ಇತರರಿದ್ದರು.

  See also  ಮಳೆಗಾಲದಲ್ಲಿ ಸ್ವಚ್ಛತೆ, ಶುಚಿತ್ವಕ್ಕೆ ಆದ್ಯತೆ ನೀಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts