More

    ದೇವನಹಳ್ಳಿಯ ಕಾರಹಳ್ಳಿ ಬಿಎಸ್​ಎಫ್ ಕ್ಯಾಂಪಸ್​ನಲ್ಲಿ 70ಕ್ಕೂ ಹೆಚ್ಚು ಯೋಧರಿಗೆ ಕರೊನಾ ಪಾಸಿಟಿವ್​

    ಬೆಂ.ಗ್ರಾಮಾಂತರ: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ವ್ಯಾಪ್ತಿಯ ಕಾರಹಳ್ಳಿ ಬಿಎಸ್​ಎಫ್ ಕ್ಯಾಂಪಸ್​ನಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, 70ಕ್ಕೂ ಹೆಚ್ಚು ಯೋಧರಿಗೆ ಕರೊನಾ ಪಾಸಿಟಿವ್ ಬಂದಿದೆ.

    ಇತ್ತೀಚಿಗೆ ಮೇಘಾಲಯದಿಂದ ಇಲ್ಲಿನ ಕ್ಯಾಂಪಸ್​ಗೆ ಬಂದಿದ್ದ 34 ಯೋಧರಲ್ಲಿ ಕರೊನಾ ಕಾಣಿಸಿಕೊಂಡಿತ್ತು. ಮೂರು ದಿನಗಳಿಂದ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 70ಕ್ಕೇರಿದೆ. ಸೋಂಕಿತ ಯೋಧರನ್ನು ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮತ್ತೆ ಕೆಲವು ಯೋಧರನ್ನು ಐಸೋಲೇಷನ್​ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

    700 ಯೋಧರ ಆಗಮನ: ಮೇಘಾಲಯದಿಂದ 700 ಯೋಧರು ಕಾರಹಳ್ಳಿ ಕ್ಯಾಂಪಸ್​ಗೆ ಆಗಮಿಸಿದ್ದಾರೆ. ಮಂಗಳವಾರ ಕರೊನಾ ತಪಾಸಣೆಗೆ ಒಳಗಾದ 365 ಮಂದಿ ಪೈಕಿ 36 ಮಂದಿಯ ವರದಿ ಪಾಸಿಟಿವ್ ಬಂದಿತ್ತು. ಒಟ್ಟು 70 ಮಂದಿಯನ್ನು ಐಸೋಲೇಷನ್ ಮಾಡಲಾಗಿದ್ದು, ಉಳಿದ ಯೋಧರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಅರೋಗ್ಯಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ದೇವನಹಳ್ಳಿಯ ಕಾರಹಳ್ಳಿ ಬಿಎಸ್​ಎಫ್ ಕ್ಯಾಂಪಸ್​ನಲ್ಲಿ 70ಕ್ಕೂ ಹೆಚ್ಚು ಯೋಧರಿಗೆ ಕರೊನಾ ಪಾಸಿಟಿವ್​

    ಓರ್ವ ಯೋಧ ಗಂಭೀರ: 70 ಯೋಧರ ಪೈಕಿ ಒಬ್ಬರ ಆರೋಗ್ಯ ಗಂಭೀರವಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಸೆ.11 ರಂದು ಮೇಘಾಲಯದಿಂದ ಇಲ್ಲಿನ ಬಿಎಸ್​ಎಫ್ ಕ್ಯಾಂಪಸ್​ಗೆ ಯೋಧರು ಬಂದಿಳಿದಿದ್ದರು. ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೊನಾ ತಪಾಸಣೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ, 365 ಯೋಧರಿಗೆ ಮಂಗಳವಾರ ಆರ್​ಟಿಪಿಸಿಆರ್ ತಪಾಸಣೆ ನಡೆಸಲಾಗಿದ್ದು, 36 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈಗ 70 ಯೋಧರಿಗೆ ಚಿಕಿತ್ಸೆ ದೊರಕಿಸಿಕೊಡಲಾಗಿದೆ. ಕ್ಯಾಂಪಸ್​ನಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಕ್ಯಾಂಪಸ್​ನಲ್ಲಿನ ಎಲ್ಲ ಯೋಧರಿಗೂ ಕರೊನಾ ತಪಾಸಣೆ ನಡೆಸುತ್ತಿದ್ದು, ಬುಧವಾರವೂ 1400 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಬಿಎಸ್​ಎಫ್ ಕ್ವಾರ್ಟ್​ಸ್ನಲ್ಲಿ 1800 ಯೋಧರ ಕುಟುಂಬ ವಾಸವಿದ್ದು, ಎಲ್ಲರಲ್ಲೂ ಕರೊನಾ ಆತಂಕ ಮನೆಮಾಡಿದೆ. ತಪಾಸಣೆ ಪ್ರಕ್ರಿಯೆ ಚುರುಕುಗೊಳಿಸಿರುವ ಜಿಲ್ಲಾಡಳಿತ ಪ್ರತಿಯೊಬ್ಬರ ಆರೋಗ್ಯದ ಮೇಲೆ ನಿಗಾವಹಿಸಿದೆ. ಸೋಂಕಿತರ ಸಂಖ್ಯೆ 100ರ ಗಡಿ ದಾಟುವ ಸಾಧ್ಯತೆಯಿದ್ದು, ಕ್ಯಾಂಪಸ್​ನಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ.

    ಹಳ್ಳಿಗಳಲ್ಲಿ ಆತಂಕ: ಕಾರಹಳ್ಳಿ ಬಿಎಸ್​ಎಪ್ ಕ್ಯಾಂಪಸ್​ನಲ್ಲಿ ಕರೊನಾ ಸೋಂಕು ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಹಳ್ಳಿಗಳ ಜನತೆ ಆತಂಕಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಕ್ಯಾಂಪಸ್​ನಲ್ಲಿನ ಯೋಧರಿಗೆ ಹೊರಗಿನವರ ಸಂಪರ್ಕವಿರುವುದಿಲ್ಲ, ಅವರು ಕ್ಯಾಂಪಸ್​ನಿಂದ ಹೊರಗೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕು ಹಳ್ಳಿಗಳಲ್ಲಿ ಹರಡುವ ಸಾಧ್ಯತೆ ಇಲ್ಲ. ಈ ಬಗ್ಗೆ ಜನತೆ ಆತಂಕಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

    ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ವಿದ್ಯಾರ್ಥಿಯ ತಾಯಿಯನ್ನ ಪೀಡಿಸಿ ತರಗತಿಯಲ್ಲೇ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts