More

    ಕಾವೇರಿ‌ ನದಿಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿ ವಿಸರ್ಜನೆ: ಆತಂಕದಲ್ಲಿ ಸ್ಥಳೀಯರು

    ಮಂಡ್ಯ: ಕರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿಯನ್ನ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡುತ್ತಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕರೊನಾ ಸೋಂಕಿಗೆ ಬಲಿಯಾದವರ ಅಸ್ಥಿಯನ್ನು ಮೃತರ ಸಂಬಂಧಿಕರು ಬೆಂಗಳೂರಿನಿಂದ ಬಂದು ಶ್ರೀರಂಗಪಟ್ಟಣದ ಕಾವೇರಿ‌ ನದಿಯಲ್ಲಿ ಬಿಡುತ್ತಿದ್ದಾರೆ. ಮೃತರ ಕುಟುಂಬಸ್ಥರು ಇಲ್ಲಿಗೆ ಬರುವುದರಿಂದ ಕರೊನಾ ಹರಡುವ ಸಾಧ್ಯತೆ ಇದೆ. ಅಸ್ಥಿ ವಿಸರ್ಜನೆಗೆ ತಾಲೂಕು ಆಡಳಿತ ನಿಷೇಧ ಏರಿದೆ. ಆದರೂ ಸ್ಥಳೀಯ ಪುರೋಹಿತರು ಅಸ್ಥಿ ವಿಸರ್ಜನೆ ಮಾಡಿಸುತ್ತಿದ್ದಾರೆ ಎಂದು ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ರಸ್ತೆಗೆ ಮರದ ತುಂಡುಗಳನ್ನ ಹಾಕಿ ತಡೆ ಹಾಕಿದ್ದಾರೆ.

    ಕಾವೇರಿ‌ ನದಿಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಅಸ್ಥಿ ವಿಸರ್ಜನೆ: ಆತಂಕದಲ್ಲಿ ಸ್ಥಳೀಯರು

    ಘೋಸಾಯ್ ಘಾಟ್, ಸಂಗಮದಲ್ಲಿ ಪ್ರತಿನಿತ್ಯ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಈಗಾಗಲೇ ಕರೊನಾ ಸೋಂಕಿನ ಭೀತಿಯಲ್ಲಿ ಕಂಗೆಟ್ಟಿರುವ ಸ್ಥಳೀಯರಿಗೆ ಮತ್ತಷ್ಟು ಆತಂಕ ಹುಟ್ಟಿಸುತ್ತಿದೆ ಅಸ್ಥಿ ವಿಸರ್ಜನೆ. ಯಾವುದೇ ಕಾರಣಕ್ಕೂ ಕಾವೇರಿ ನದಿಗೆ ಕರೊನಾದಿಂದ ಮೃತಪಟ್ಟವರ ಅಸ್ಥಿ ಬಿಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಕರೊನಾ ವ್ಯಾಕ್ಸಿನ್ ಪಡೆಯೋದ್ರಿಂದ ರಾಜ್ಯದಲ್ಲಿ ಹೆಚ್ಚಲಿದ್ಯಾ ‘ರಕ್ತಕ್ಷಾಮ’?

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts