More

    ದರ್ಗಾದಲ್ಲಿ ಶಿವನಾಮ ಝೇಂಕಾರ! ಅಮಾವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ

    ನರಗುಂದ: ಇಲ್ಲಿನ ದರ್ಗಾವೊಂದರಲ್ಲಿ ಶಿವನಾಮ ಝೇಂಕಾರ ಕೇಳಿಬರುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನದಂದು ವಿಶೇಷ ಪೂಜೆ ಜತೆಗೆ ಭಜನೆ, ಪುರಾಣ ಪ್ರವಚನಗಳು ನಡೆಯುತ್ತವೆ! ಅಚ್ಚರಿಯಾದರೂ ಇದು ಸತ್ಯ.

    ಸರ್ವಧರ್ಮದ ಭಕ್ತರ ಪ್ರೀತಿಪಾತ್ರ ಸಂತರಾಗಿದ್ದ ಲಿಂ. ಶ್ರೀ ಇಮಾಮ ಸಾಹೇಬರ ಸ್ಮರಣಾರ್ಥ 2005ರಲ್ಲಿ ಪಟ್ಟಣದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಮೆಹಬೂಬ ಸುಭಾನಿ ದರ್ಗಾದಲ್ಲಿ ಗದ್ದುಗೆ ನಿರ್ಮಿಸಲಾಗಿದೆ. ಅಂದಿನಿಂದ ಈ ದರ್ಗಾದಲ್ಲಿ ಪಾರ್ವತಿ-ಪರಮೇಶ್ವರ, ಗಣಪತಿ ವಿಗ್ರಹ, ನಾಗಲಿಂಗಸ್ವಾಮಿ, ಈಶ್ವರಲಿಂಗ, ಲಕ್ಷ್ಮೀ, ಸರಸ್ವತಿ, ಶಿರಡಿ ಸಾಯಿಬಾಬಾ, ಸಂತ ಶಿಶುನಾಳ ಶರೀಫ, ಗುರುಗೋವಿಂದ ಭಟ್ಟರು ಸೇರಿ ಅನೇಕ ಹಿಂದು ದೇವರು-ಸಂತರ ಫೋಟೋ ಮತ್ತು ಅಲೈದೇವರ ಪಾಂಜಾಗಳನ್ನು ಗದ್ದುಗೆ ಮೇಲಿಟ್ಟು ಇಸ್ಲಾಂ ಧರ್ಮದಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    ದರ್ಗಾದಲ್ಲಿ ಶಿವನಾಮ ಝೇಂಕಾರ! ಅಮಾವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ

    ಜತೆಯಲ್ಲಿ ‘ಓಂ ನಮಃ ಶಿವಾಯ’ ಮಂತ್ರದೊಂದಿಗೆ ಎಲ್ಲ ದೇವರುಗಳನ್ನು ಪೂಜಿಸಲಾಗುತ್ತಿದೆ. ಬಾಬುಸಾಹೇಬ ಜಮಾದಾರ ಅವರು ಮುಸ್ಲಿಂ ವ್ಯಕ್ತಿಯಾಗಿದ್ದರೂ ರುದ್ರಾ ಮಾಲೆ, ವಿಭೂತಿ, ಕುಂಕುಮ ಧರಿಸಿ, ತಲೆಗೆ ಟೋಪಿ ಧರಿಸಿಕೊಂಡು ಎಲ್ಲ ದೇವರಿಗೆ ಬೆಳಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸುತ್ತಾರೆ.

    ದರ್ಗಾದಲ್ಲಿ ಶಿವನಾಮ ಝೇಂಕಾರ! ಅಮಾವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ

    ಜೆಡಿಎಸ್​ ಪಕ್ಷವನ್ನೇ ವಿಸರ್ಜನೆ ಮಾಡ್ತೀವಿ, ಮತ್ತೆ ಮತ ಕೇಳಲು ಬರಲ್ಲ: ಸವಾಲು ಸ್ವೀಕರಿಸುತ್ತಲೇ ಎಚ್​ಡಿಕೆ ಘೋಷಣೆ

    ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….

    ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts