ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳ್ಕೊಂಡಿದ್ದೀರಾ? ವೇತನ ಇಲ್ಲದೆ ಕಷ್ಟ ಪಡುವಂತಾಗಿದೆಯೇ? ಹಾಗಾದ್ರೆ ನೀವು ಗರಿಷ್ಠ ಮೂರು ತಿಂಗಳ ವೇತನದ ಶೇಕಡ 50 ವೇತನವನ್ನು ಕ್ಲೇಮ್ ಮಾಡಬಹುದು. ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಶನ್ (ಇಎಸ್ಐಸಿ) ಈ ಸಂಬಂಧ ಇಂದು ಪ್ರಕಟಣೆಯನ್ನು ಹೊರಡಿಸಿದೆ. ಅಟಲ್ ಬಿಮಿತ ವ್ಯಕ್ತಿ ಕಲ್ಯಾಣ್ ಯೋಜನಾ(ಎಬಿವಿಕೆವೈ)ದ ವ್ಯಾಪ್ತಿಯಲ್ಲಿ ಈ ಕ್ಲೇಮ್ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿ ನಿಯಮ ಪರಿಷ್ಕರಣೆಯೂ ಆಗಿದ್ದು, ಅದರ ವಿವರವನ್ನೂ ಅದು ಪ್ರಕಟಿಸಿದೆ.
ಬದಲಾದ ನಿಯಮಗಳಿವು
* ನಿರುದ್ಯೋಗ ಉಂಟಾಗಿ 90 ದಿನಗಳ ಬಳಿಕ ಪರಿಹಾರ ಕ್ಲೇಮ್ ಮಾಡುವ ಬದಲಾಗಿ, 30 ದಿನಗಳ ಬಳಿಕ ಪರಿಹಾರ ಕ್ಲೇಮ್ ಮಾಡಲು ಅವಕಾಶ.
* ಉದ್ಯೋಗದಾತರು ಕ್ಲೇಮ್ ಸಲ್ಲಿಸುವ ಬದಲು ನೇರವಾತಿ ಉದ್ಯೋಗಿಯೇ ಕ್ಲೇಮ್ ಸಲ್ಲಿಸಲು ಅನುಮತಿ
* ಹಿಂದಿನ ನಾಲ್ಕು ತಿಂಗಳ ನಿತ್ಯ ವೇತನದ ಸರಾಸರಿಯ ಶೇಕಡ 50 ರಷ್ಟು ಗರಿಷ್ಠ 90 ದಿನಗಳಿಗೆ ಮಿತಿಗೊಳಿಸಿ ಪರಿಹಾರ ಕ್ಲೇಮ್ ಮಾಡಬಹುದು. ಈ ಹಿಂದೆ ಇದು ಶೇಕಡ 25ರಷ್ಟು ಪರಿಹಾರ ಕೇಳುವುದಕ್ಕೆ ಸೀಮಿತವಾಗಿತ್ತು.
‘ಕೆಲಸ ಕಳೆದುಕೊಂಡವರು ಗರಿಷ್ಠ ಮೂರು ತಿಂಗಳ ವೇತನದ ಶೇಕಡ 50 ರಷ್ಟನ್ನು ನಿರುದ್ಯೋಗ ಪರಿಹಾರವಾಗಿ ಕ್ಲೇಮ್ ಮಾಡಬಹುದು. ಒಂದೊಮ್ಮೆ ಅವರು ಈಗ ಕೆಲಸ ಆರಂಭಿಸಿದ್ದರೂ ಈ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, 44,000 ಕೋಟಿ ರೂಪಾಯಿಯನ್ನು ಇಎಸ್ಐಸಿ ಮೀಸಲಿಟ್ಟಿದೆ. ಈ ಯೋಜನೆ ಜಾರಿಯಾಗಿ ಕೆಲವು ದಿನಗಳಾದರೂ ಇನ್ನೂ ವ್ಯಾಪಕ ಪ್ರಚಾರ ಸಿಗದ ಕಾರಣ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Web Exclusive: ಅಬಕಾರಿ ಸಬ್ ಇನ್ಸ್ಪೆಕ್ಟರ್ಗಳಿಗೆ ಬೈಕ್ ಭಾಗ್ಯ; ಅಕ್ರಮ ಮದ್ಯ ಮಾರಾಟ ತಡೆಯಲು ಅನುಕೂಲ
ಕಳೆದ ತಿಂಗಳು ಎಬಿವಿಕೆವೈ ಜಾರಿಗೊಳಿಸಲಾಗಿದ್ದು, ನಿತ್ಯ 400 ಕ್ಲೇಮ್ಗಳು ಇದುವರೆಗೆ ಬಂದಿವೆ. ಶೇಕಡ 25ರಷ್ಟು ಪರಿಹಾರ ಕೊಡಲಾಗುತ್ತಿತ್ತು. ಈಗ ಅದನ್ನು ಶೇಕಡ 50ರಷ್ಟು ವೇತನ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಇಎಸ್ಐಸಿ ಯಲ್ಲಿ 13.5 ಕೋಟಿ ಫಲಾನುಭವಿಗಳಿದ್ದು, 3.4 ಕೋಟಿ ಫಲಾನುಭವಿಗಳಿಗೆ ವೈದ್ಯಕೀಯ ವಿಮೆಯ ಸೌಲಭ್ಯವೂ ಸಿಗುತ್ತಿದೆ. ಹೊಸ ಸೋಷಿಯಲ್ ಸೆಕ್ಯೂರಿಟಿ ನಿಯಮ ಪ್ರಕಾರ ಈ ಪರಿಹಾರ ವೇತನವನ್ನು ಸರ್ಕಾರ ನೀಡತೊಡಗಿದೆ. ಇಎಸ್ಐಸಿ ನೋಟಿಫಿಕೇಶನ್ ಗೆ ಇಲ್ಲಿ ಕ್ಲಿಕ್ ಮಾಡಿ- (ಏಜೆನ್ಸೀಸ್)
ತುಲಾಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಶಬರಿಮಲೆ ಬಾಗಿಲು ಇಂದು ತೆರೆಯಲಿದೆ