More

    ಒಂದು ವೇಳೆ ಆ ಜಾಗದಲ್ಲಿ ವಿರಾಟ್​ ಇದ್ದಿದ್ದರೆ ಮಾತು ಬೇರೆಯೇ ಇರುತ್ತಿತ್ತು; ಮಾಜಿ ಕ್ರಿಕೆಟಿಗರು ಹೀಗಂದಿದ್ಯಾಕೆ

    ಮುಂಬೈ: 17ನೇ ಆವೃತ್ತಿಯ ಐಪಿಎಲ್​ ಆರಂಭಗೊಂಡು ಈಗಾಗಲೇ 51 ಪಂದ್ಯಗಳು ಮುಕ್ತಾಯಗೊಂಡಿದ್ದು, ರೋಚಕತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಲಿ ಟೂರ್ನಿಯಲ್ಲಿ ಈವರೆಗೆ ಆಡಿರುವ ಬಹುತೇಕ ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದಿದ್ದು, ಹಲವು ದಾಖಲೆಗಳು ಪತನವಾಗಿದೆ. ಹಾಲಿ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 10 ಪಂದ್ಯಗಳಿಂದ 500 ರನ್​ಗಳಿಸಿದ್ದು, ಸ್ಟ್ರೈಕ್​​ರೇಟ್​ ವಿಚಾರವಾಗಿ ವಿರಾಟ್​ ಕೊಹ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಇದೀಗ ಕೊಹ್ಲಿ ಸ್ಟ್ರೈಕ್​ರೇಟ್​ ವಿಚಾರವಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್​ ಕೈಫ್ ಹಾಗೂ ಇರ್ಫಾನ್​ ಪಠಾಣ್​ ವಿರಾಟ್​ ಬೆಂಬಲಲ್ಲೆ ನಿಂತಿದ್ದು, ಟೀಕಾಕಾರರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

    Irfan Kaif

    ಇದನ್ನೂ ಓದಿ: ಹಿಂದೂ ಸಂಘಟನೆಗಳ ಕಾರ್ಯಕರ್ತರು ಗತಿಯಿಲ್ಲದ ಭಿಕ್ಷುಕರು: ಕಾಂಗ್ರೆಸ್​ ಶಾಸಕ ರಾಜು ಕಾಗೆ

    ಹಾಲಿ ಆವೃತ್ತಿಯಲ್ಲಿ ಸನ್​ರೈಸರ್ಸ್​ ಪರ ಟ್ರಾವಿಸ್​ ಹೆಡ್ಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹಾಲಿ ಟೂರ್ನಿಯಲ್ಲಿ 396 ರನ್​ಗಳನ್ನು ಕಲೆ ಹಾಕಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಗಳಿಸಿದ ಟ್ರಾವಿಸ್​ ನಿಧಾನಗತಿ ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡಿದರು. 38 ಬಾಲ್​ಗಳನ್ನು ಎದುರಿಸಿದ ಟ್ರಾವಿಸ್​ 58 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್​ ಕೈಫ್​ ಹಾಗೂ ಇರ್ಫಾನ್​ ಪಠಾಣ್​ ಪ್ರತಿಕ್ರಿಯಿಸಿದ್ದಾರೆ.

    ಒಂದು ವೇಳೆ ವಿರಾಟ್​ ಏನಾದರೂ ಈ ರೀತಿ ಆಟವಾಡಿದದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಎಲ್ಲಾ ಕ್ರಿಕೆಟಿಗರನ್ನು ಸಮಾನವಾಗಿ ಕಾಣಬೇಕು. ಒಂದು ವೇಳೆ ವಿರಾಟ್​ ಈ ಜಾಗದಲ್ಲಿ ಇದ್ದಿದ್ದರೆ ಜನರು ಆತ ಗಳಿಸಿದ ರನ್​ಗಳನ್ನು ನೋಡದೆ ಸ್ಟ್ರೈಕ್​ರೇಟ್​ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಆದರೆ, ನಮ್ಮ ಪ್ರಕಾರ ಇದು ಟ್ರಾವಿಸ್​ ಹೆಡ್​ ಅವರ ಅತ್ಯುತಮ ಇನ್ನಿಂಗ್ಸ್​ಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಇರ್ಫಾನ್​ ಪಠಾಣ್​ ಹಾಗೂ ಮೊಹಮ್ಮದ್​ ಕೈಫ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts