ಹೈದರಾಬಾದ್: ಝೀರೋ ಸಿನಿಮಾದ ಹೀನಾಯ ಸೋಲಿನ ಬಳಿಕ ಸುಮಾರು 5 ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್, 2023ರಲ್ಲಿ ಪಠಾಣ್ ಮತ್ತು ಜವಾನ್ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಅದ್ಧೂರಿಯಾಗಿ ರೀ ಎಂಟ್ರಿ ಕೊಟ್ಟರು. ಕರೊನಾ ಸಾಂಕ್ರಮಿಕ ಪರಿಣಾಮಕ್ಕೆ ಒಳಗಾಗಿ ತೀವ್ರ ನಷ್ಟದಲ್ಲಿದ್ದ ಬಾಲಿವುಡ್ಗೆ ಶಾರುಖ್ ಖಾನ್ ಗೆಲುವು ಹೊಸ ತಿರುವು ನೀಡಿತು ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.
2023ರಲ್ಲಿ ತೆರೆಕಂಡ ಮೂರನೇ ಸಿನಿಮಾ ‘ಡಂಕಿ’ ಮೂಲಕ ಶಾರುಖ್ ಹ್ಯಾಟ್ರಿಕ್ ಗೆಲುವು ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಇದೇ ಮೊದಲಬಾರಿಗೆ ಲೆಜೆಂಡರಿ ನಿರ್ದೇಶಕ ರಾಜಕುಮಾರ್ ಹಿರಾನಿ ಜತೆ ಶಾರುಖ್ ಕೆಲಸ ಮಾಡಿದ್ದರಿಂದ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಆದೆ, ಡಂಕಿ ಸಿನಿಮಾ ಎಲ್ಲರ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಬಾಕ್ಸ್ಆಫೀಸ್ನಲ್ಲಿ ಅಂದುಕೊಂಡ ಸಾಧನೆ ಮಾಡದೆ ನಿರಾಸೆ ಮೂಡಿಸಿತು. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಬಿಡುಗಡೆಯು ಡಂಕಿ ಸಿನಿಮಾಗೆ ಸ್ಪರ್ಧೆ ಒಡ್ಡಿದ್ದರಿಂದ ಡಂಕಿ ಹಣ ಗಳಿಕೆಗೆ ನೇರ ಪರಿಣಾಮ ಬೀರಿತು.
ಅಂದಹಾಗೆ ಪ್ರಶಾಂತ್ ನೀಲ್ ಮತ್ತು ಶಾರುಖ್ ಖಾನ್ ಎದುರು-ಬದುರಾಗಿದ್ದು ಇದು ಎರಡನೇ ಬಾರಿ. ಡಂಕಿ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 225 ಕೋಟಿ ರೂ. ಕಲೆಕ್ಸನ್ ಮಾಡಿತು. ಇನ್ನೊಂದೆಡೆ ಸಲಾರ್ ಸಿನಿಮಾ ಹಿಂದಿ ಆವೃತ್ತಿಯಲ್ಲಿ 150 ಕೋಟಿ ರೂ. ಗಳಿಸಿತು. ಸಲಾರ್ ಸಿನಿಮಾ ಜಾಗತಿಕವಾಗಿ 600 ಕೋಟಿ ರೂ. ಸಂಪಾದಿಸಿದರೆ, ಡಂಕಿ ಸಿನಿಮಾ 475 ಕೋಟಿ ರೂ. ಗಳಿಕೆ ಮಾಡಿತು. ಹಿಂದಿನಂತೆ ಪ್ರಶಾಂತ್ ನೀಲ್ ಈ ಬಾರಿಯೂ ಶಾರುಖ್ ಖಾನ್ ವಿರುದ್ಧ ಗೆಲುವು ಸಾಧಿಸಿದರು. 2018ರಲ್ಲಿ ಶಾರುಖ್ ಅವರ ಝೀರೋ ಸಿನಿಮಾದ ಎದುರು ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿತ್ತು.
ಕೆಜಿಎಫ್ 1 ಹಿಂದಿ ಆವೃತ್ತಿಯಲ್ಲೇ 45 ಕೋಟಿ ರೂ. ಗಳಿಕೆ ಮಾಡಿ ಸೂಪರ್ ಹಿಟ್ ಎನಿಸಿಕೊಂಡಿತು. ಝೀರೋ ಸಿನಿಮಾ ಜಾಗತಿಕವಾಗಿ ಕೇವಲ 90 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೀನಾಯ ಸೋಲುಂಡಿತು. ಝೀರೋ ಮತ್ತು ಡಂಕಿ ಎರಡೂ ನಾಟಕ ಪ್ರಕಾರದ ಚಿತ್ರಗಳಾದ್ದರಿಂದ ಕೆಜಿಎಫ್ ಮತ್ತು ಸಲಾರ್ ಎದುರು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಶಾರುಖ್ ಅವರ ಅಭಿಮಾನಿಗಳು ಮತ್ತು ಬಾಲಿವುಡ್ ಪ್ರೇಕ್ಷಕರು ವಾದಿಸುತ್ತಿದ್ದಾರೆ.
ಪ್ರಶಾಂತ್ ನೀಲ್-ಶಾರುಖ್ ಖಾನ್ ಮತ್ತೊಮ್ಮೆ ಮಾಸ್ ಚಿತ್ರಗಳ ಮೂಲಕ ಮೂರನೇ ಬಾರಿ ಬಾಕ್ಸ್ ಆಫೀಸ್ನಲ್ಲಿ ಮುಖಾಮುಖಿಯಾದರೆ ಆಗ ನಿಜವಾದ ಮಜಾ ಇರಲಿದೆ ಎನ್ನುತ್ತವೆ ಬಾಲಿವುಡ್ ಟ್ರೇಡ್ ಮೂಲಗಳು. ಮಾಸ್ ಚಿತ್ರದ ಮೂಲಕ ಶಾರುಖ್ ಮತ್ತು ಪ್ರಶಾಂತ್ ನೀಲ್ ಎದುರಾಗುತ್ತಾರಾ? ಹಿಂದಿನಿ ಸೋಲಿಗೆ ಶಾರುಖ್ ಪ್ರತೀಕಾರ ತೀರಿಸಿಕೊಳ್ಳುತ್ತಾರಾ? ಪ್ರಶಾಂತ್ ನೀಲ್ಗೆ ಮಾಸ್ ಚಿತ್ರದ ಮೂಲಕವೇ ಶಾರುಖ್ ಟಕ್ಕರ್ ಕೊಡುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ. ಆದರೆ, ಇಂಥದ್ದೊಂದು ಮುಖಾಮುಖಿಗೆ ಸಿನಿಪ್ರಿಯರು ಎದುರು ನೋಡುತ್ತಿರುವುದಂತೂ ಸತ್ಯ. (ಏಜೆನ್ಸೀಸ್)
ಮಹೇಶ್ ಬಾಬು ವಿಗ್ ಬಳಸುತ್ತಾರಾ? ಮೇಕಪ್ ಮ್ಯಾನ್ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…
100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?
ಶೂ ಕ್ಲೀನ್ ಮಾಡಿ ತಿಂಗಳಿಗೆ 1.20 ಲಕ್ಷ ರೂ. ಗಳಿಕೆ! ಬದುಕು ಬದಲಿಸಿತು ಫ್ರೆಂಡ್ ಸಲಹೆ, ಯೂಟ್ಯೂಬ್ ಪಾಠ