ಲಂಡನ್: ಈವರೆಗೂ ಪತ್ತೆಯಾಗದಿರುವ ಎರಡನೇ ವಿಶ್ವಯುದ್ಧದ ಸ್ಫೋಟಗೊಳ್ಳದ ಸಾವಿರಾರು ಬಾಂಬ್ಗಳು ಪ್ರಪಂಚಾದ್ಯಂತ ಇರುವ ಸಾಧ್ಯತೆ ಇದೆ. ಈ ಹಿಂದೆ ಸ್ಫೋಟಕ ತಜ್ಞರು ಸಾವಿರಾರು ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಬಾಂಬ್ಗಳನ್ನು ನಿಷ್ಕ್ರಿಯೆಗೊಳಿಸಿದ ಉದಾಹರಣೆಗಳಿವೆ. ತೀರಾ ಇತ್ತೀಚೆಗೆ ನಾರ್ಫೋಲ್ಕ್ನ ಗ್ರೇಟ್ ಯಾರ್ಮೌಥ್ ಪಟ್ಟಣದಲ್ಲಿ 2ನೇ ವಿಶ್ವಯುದ್ಧದ ಬಾಂಬ್ ಒಂದು ಆಕಸ್ಮಿಕವಾಗಿ ಸ್ಫೋಟಗೊಂಡಿರುವುದಾಗಿ ಬ್ರಿಟಿಷ್ ಎಮರ್ಜೆನ್ಸಿ ಸರ್ವೀಸ್ ಆ್ಯಂಡ್ ಏಜೆನ್ಸೀಸ್ ಘೋಷಣೆ ಮಾಡಿದೆ.
ನಾರ್ಫೋಲ್ಕ್ ಪೊಲೀಸರ ಪ್ರಕಾರ ಇದೊಂದು ಯೋಜಿತವಲ್ಲದ ಸ್ಫೋಟವಾಗಿದೆ. ತಜ್ಞರು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿರುವಾಗಲೇ ಸ್ಫೋಟಗೊಂಡಿದೆ. ಆದರೆ, ಈ ಸ್ಫೋಟದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ನಾರ್ಫೋಲ್ಕ್ ಪೊಲೀಸರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ರೇಟ್ ಯಾರ್ಮೌಥ್ನಲ್ಲಿ ಮಂಗಳವಾರ ಬೆಳಗ್ಗೆ ಮಿಲಿಟರಿ ಸಾಧನ ಬಾಂಬ್ ಅನ್ನು ಪತ್ತೆಹಚ್ಚಿತು. ಇದರ ಬೆನ್ನಲ್ಲೇ ನೂರಾರು ಮಂದಿಯನ್ನು ಮನೆ ಮತ್ತು ಕೆಲಸ ಮಾಡುವ ಸ್ಥಳದಿಂದ ಬೇರೆಡೆ ಸ್ಥಳಾಂತರ ಮಾಡಲಾಯಿತು. ಆದಾಗ್ಯೂ ವಿಶೇಷ ರೋಬೋಟ್ಗಳನ್ನು ನಿಯೋಜಿಸಿ ಬಾಂಬ್ ಅನ್ನು ಸುರಕ್ಷಿತವಾಗಿ ಸ್ಫೋಟಿಸುವ ತಜ್ಞರ ಪ್ಲಾನ್ ಯಶಸ್ವಿಯಾಗಲಿಲ್ಲ. ಬಾಂಬ್ ಸ್ಫೋಟಗೊಳ್ಳುವುದನ್ನು ಯಾರಿಂದಲೂ ತಡೆಯಲಾಗಲಿಲ್ಲ.
ಎಲ್ಲಾ ಸೇನೆ ಮತ್ತು ತುರ್ತು ಸೇವಾ ಸಿಬ್ಬಂದಿಯು ಈ ಘಟನೆಗೆ ಸಾಕ್ಷಿಯಾದರು ಮತ್ತು ಸ್ಫೋಟದಿಂದ ಸಂಭವಿಸಿದ ಹಾನಿಯನ್ನು ನಿರ್ಣಯಿಸಲಾಗುತ್ತಿದೆ. ಈವರೆಗೂ ಯಾವುದೇ ದೈಹಿಕ ಹಾನಿ ಅಥವಾ ಪ್ರಾಣ ಹಾನಿ ವರದಿಯಾಗಿಲ್ಲ.
ಸಾಧನವನ್ನು ನಿಶ್ಯಸ್ತ್ರಗೊಳಿಸಲು ಕೆಲಸ ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿತು ಎಂದು ನಾರ್ಫೋಲ್ಕ್ ಕಾನ್ಸ್ಟಾಬ್ಯುಲರಿಯ ಸಹಾಯಕ ಮುಖ್ಯ ಕಾನ್ಸ್ಟೇಬಲ್ ನಿಕ್ ಡೇವಿಸನ್ ಖಚಿತಪಡಿಸಿದರು. (ಏಜೆನ್ಸೀಸ್)
The unexploded bomb in #GreatYarmouth detonated earlier during work to disarm it. Our drone captured the moment. We can confirm that no one was injured. Public safety has been at the heart of our decision making all the way through this operation, which we know has been lengthy. pic.twitter.com/9SaeYmHkrb
— Norfolk Police (@NorfolkPolice) February 10, 2023
ಅಪ್ರಾಪ್ತೆಯ ಶವಪರೀಕ್ಷೆಯಿಂದ ಸಿಕ್ಕಿಬಿದ್ದ ಕಾಮುಕ! ಸಂಬಂಧಿ ಯುವಕನಿಂದಲೇ ನಡೆಯಿತು ಘೋರ ಕೃತ್ಯ
ಲಕ್ಷಾಂತರ ಟೆಕ್ಕಿಗಳು ಲೇ ಆಫ್: ಅಗ್ರ ಸ್ಥಾನದಲ್ಲಿ ಗೂಗಲ್, ಇನ್ನಷ್ಟು ಟೆಕ್ಕಿಗಳು ಸಂತ್ರಸ್ತರಾಗುವ ಭೀತಿ
ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ