ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಬೇಡಿಕೆಯ ಬಗ್ಗೆ ಹೊಸದಾಗಿ ಪರಿಚಯಿಸ ಬೇಕಿಲ್ಲ. ಸದ್ಯ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸನ್ನಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಇನ್ನು, ನಮ್ಮ ಕನ್ನಡದ ಒಂದು ಐಟಂ ಹಾಡಿನಲ್ಲೂ ಸನ್ನಿ ಹೆಜ್ಜೆ ಹಾಕಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ, ನಟಿ ಕಳೆದ ಕೆಲವು ಗಂಟೆಗಳಿಂದ ಅವರ ಸಿನಿಮಾಗಳ ವಿಚಾರವಾಗಿ ಸುದ್ದಿ ಮಾಡುತ್ತಿಲ್ಲ. ಇದೀಗ, ನಟಿ ಸನ್ನಿ ಲಿಯೋನ್ಗೆ ಮೋಸವಾಗಿದ್ದು, ಈ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹಾಗಾದರೆ, ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿಗೆ ಯಾರು ಮೋಸ ಮಾಡಿದ್ದಾರೆ ಅಂತೀರಾ?.
ಅಂದಹಾಗೆ, ಸನ್ನಿ ಹೆಸರಿನಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆಯಲಾಗಿದೆಯಂತೆ. ಹೌದು, ಈ ವಿಚಾರವನ್ನು ಕೇಳಿ ಸ್ವತಃ ಸನ್ನಿ ಲಿಯೋನ್ ಶಾಕ್ ಆಗಿದ್ದು, ಈ ವಿಚಾರದ ಬಗ್ಗೆ ಅವರು ಟ್ವೀಟ್ ಸಹ ಮಾಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಇನ್ನು, ಸನ್ನಿ ಅವರ ಟ್ವೀಟ್ ಬೆನ್ನಲ್ಲೇ, ತಮಗೂ ಇದೇ ರೀತಿ ಮೋಸ ಆಗಿದೆ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ. ನಟಿ ಸನ್ನಿ ಲಿಯೋನ್ ಅವರ ಹೆಸರಿನಲ್ಲಿ ಒಂದು ನಕಲಿ ಪಾನ್ ಕಾರ್ಡ್ ಮಾಡಿಸಿ, ಅದನ್ನು ಬಳಸಿ ಲೋನ್ ತೆಗೆದುಕೊಳ್ಳಲಾಗಿದೆ. ಇನ್ನು, ಈ ಲೋನ್ ದೋಖಾ ಧಾನಿ ಸ್ಟಾಕ್ ಲಿಮಿಟೆಡ್ ಪ್ಲಾಟ್ಫಾರ್ಮ್ನಲ್ಲಿ ನಡೆದಿದೆ ಎಂದು ನಟಿ ತಿಳಿಸಿದ್ದಾರೆ.
”ಮೂರ್ಖನೊಬ್ಬ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆದಿದ್ದಾನೆ! ಇದರಿಂದ, ನನ್ನ ಸಿಬಿಲ್ ಸ್ಕೋರ್ಗೆ ತೊಂದರೆ ಆಗಿದೆ. ಇಂಡಿಯಾಬುಲ್ ಸೆಕ್ಯೂರಿಟಿ ಲಿಮಿಟೆಡ್ನಲ್ಲಿ ಈ ಫ್ರಾಡ್ ನಡೆದಿದೆ‘ ಎಂದು ಟ್ವೀಟ್ ಮಾಡಿದ್ದಾರೆ ಸನ್ನಿ. ನಂತರ, ಧಾನಿ ಸ್ಟಾಕ್ ಲಿಮಿಟೆಡ್ ಅವರು ತಮ್ಮ ಸಮಸ್ಯೆಯನ್ನು ಪರಿಹರಿಸಿದ್ದಕ್ಕೆ ಧನ್ಯವಾದಗಳು ತಿಳಿಸಿ ಮತ್ತೊಂದು ಟ್ವೀಟ್ ಕೂಡಾ ಮಾಡಿದ್ದಾರೆ ಸನ್ನಿ. ಈ ರೀತಿಯ ಅನೇಕ ಘಟನೆಗಳು ನಡೆದ ಬಗ್ಗೆ ಈಗಾಗಲೇ ಹಲವು ವರದಿಗಳು ತಿಳಿಸಿವೆ.
ಮದುವೆಯಾದರೂ ನಟಿ ಪ್ರಿಯಾಮಣಿಗೆ ಬೇಡಿಕೆ ಕಡಿಮೆಯಾಗಿಲ್ಲ… ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು?
ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್! ‘ಪೆಪೆ’ ಚಿತ್ರದ ಟೀಸರ್ಗೆ ಉತ್ತಮ ಪ್ರತಿಕ್ರಿಯೆ…