ಬೀದರ್: ವಾಹನ ಸವಾರರು ಖುದ್ದು ಎಚ್ಚರದಿಂದಲೇ ವಾಹನ ಚಲಾಯಿಸಿದರೂ ಬೇರೆ ವಾಹನಗಳು ಬಂದು ಡಿಕ್ಕಿ ಹೊಡೆದು ಅಪಘಾತಗಳಾದ, ಪ್ರಾಣ ಕಳೆದುಕೊಂಡ ಎಷ್ಟೋ ಪ್ರಕರಣಗಳಿವೆ. ಅಂಥ ಪ್ರಕರಣಗಳ ಪಾಲಿಗೆ ಇದೊಂದು ಹೊಸ ಸೇರ್ಪದೆ.
ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಲಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಲ್ಲದೆ, ಸವಾರರ ಮೇಲೆ ಹಾದುಹೋದ ಕಾರಣ ಬೈಕ್ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀದರ್ ತಾಲೂಕಿನ ಶಂಶೇರ್ನಗರ ಬಳಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಬಾವಗಿ ಗ್ರಾಮದ ಸೈಲಾನಿ ಫಕೀರ್ (48) ಹಾಗೂ ಅವರ ಪತ್ನಿ ಬಿಪಾಷಾ (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಗಂಡ-ಹೆಂಡತಿ ತರಕಾರಿ ಖರೀದಿಸಿಕೊಂಡು ಬೀದರ್ನಿಂದ ಬಾವಗಿ ಗ್ರಾಮಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣವಾಗಿರುವ ಲಾರಿಯಲ್ಲಿ ಕಬ್ಬು ಸಾಗಿಸಲಾಗುತ್ತಿತ್ತು. ಬೀದರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…
ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್ಕೇಸ್ನಲ್ಲಿ ಹೆಣವಾಗಿ ಸಿಕ್ಕ!