More

    ಶಾಲೆ-ಕಾಲೇಜು ಆರಂಭ: ಶಿಕ್ಷಕರಿಗೆ ಲಸಿಕೆ, ಮಕ್ಕಳಿಗೆ ಮಾಸ್ಕ್​

    ಬೆಂಗಳೂರು: ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿವರೆಗೆ ಶಾಲಾ ಕಾಲೇಜು ಪ್ರಾರಂಭವಾಗುತ್ತವೆ. ಸಿಎಂ ಕೂಡ ಶಾಲೆ ಪ್ರಾರಂಭ ಘೋಷಿಸಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳ್ತಿದ್ದೇವೆ. ಇವತ್ತು ಮಾರ್ಗಸೂಚಿ‌ ರಿಲೀಸ್ ಮಾಡ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್​, ಈಗಾಗಲೇ ಡಿಸಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಕಡೆ 9 ರಿಂದ 12 ನೇ ತರಗತಿಗಳು ನಡೆಯುತ್ತವೆ. ಶಿಕ್ಷಕರಿಂದಲೂ ಶಾಲೆ ಪ್ರಾರಂಭಕ್ಕೆ ಬೆಂಬಲವಿದೆ. ಶಾಲಾ ಶಿಕ್ಷಕರಿಗೆ ಆದ್ಯತೆಯ ಮೇರೆಗೆ ಕರೊನಾ ಲಸಿಕೆ ನೀಡಲಾಗುವಂತೆ ಅದಾಗಲೇ ಬಿಇಒಗಳಿಗೆ ಸೂಚಿಸಲಾಗಿದೆ ಎಂದರು.

    ಇದನ್ನೂ ಓದಿ: ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ಕರೊನಾ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಮಕ್ಕಳಿಗೆ ಪೂರಕವಾದ ಎಸ್​​ಒಪಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದ ಸಚಿವರು, ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಶಾಲೆಗೆ ಬಂದು, ಮತ್ತೆ ಮನೆಗೆ ವಾಪಸಾಗುವವರೆಗೆ ಮಾಸ್ಕ್​ ಇರಬೇಕು. ಇದನ್ನು ಶಿಕ್ಷಕರು ನೋಡಿಕೊಳ್ತಾರೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.

    VIDEO| ಗದ್ದೆಗಿಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

    VIDEO | ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಮೈನಾ ಹಕ್ಕಿ; ನಡೆಯಿತು ರಕ್ಷಣಾ ಕಾರ್ಯಾಚರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts