More

    VIDEO | ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಮೈನಾ ಹಕ್ಕಿ; ನಡೆಯಿತು ರಕ್ಷಣಾ ಕಾರ್ಯಾಚರಣೆ!

    ಮೈಸೂರು: ಮೈನಾ ಹಕ್ಕಿಯೊಂದಕ್ಕೆ ಗಾಳಿಪಟದ ದಾರ ಸುತ್ತಿಕೊಂಡು ಅದು ಮರದ ರೆಂಭೆಗೆ ಜೋತುಬಿದ್ದು ಒದ್ದಾಡುತ್ತಿದ್ದ ಪ್ರಸಂಗ ಮೈಸೂರು ಜಿಲ್ಲೆಯ ಎಚ್​.ಡಿ.ಕೋಟೆ ಪಟ್ಟಣದಲ್ಲಿ ಎದುರಾಗಿದೆ. ಇದನ್ನು ಕಂಡ ಸಾರ್ವಜನಿಕರು ವಿದ್ಯುತ್​ ಮಂಡಳಿ ಲೈನ್​ಮನ್ನಿನ ಸಹಾಯದೊಂದಿಗೆ ಅದನ್ನು ಕೆಳಗಿಳಿಸಿ ಪಾರುಮಾಡಿದ್ದಾರೆ.

    ಪಟ್ಟಣದಲ್ಲಿ ವಿದ್ಯುತ್ ಕಂಬಕ್ಕೆ ಹೊಂದಿಕೊಂಡಂತಿದ್ದ ಅರಳಿಮರದಲ್ಲಿ ಮೈನಾ ಹಕ್ಕಿಯೊಂದು ಸಿಲುಕಿಕೊಂಡಿತ್ತು. ಗಾಳಿಪಟದ ದಾರಕ್ಕೆ ಪಕ್ಷಿಯ ಕಾಲು ಮತ್ತು ರೆಕ್ಕೆಗಳು ಸಿಲುಕಿಕೊಂಡಿದ್ದು, ಬಿಡಿಸಿಕೊಳ್ಳಲಾಗದೆ, ಹಾರಲಾಗದೆ ಒದ್ದಾಡುತ್ತಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಸೆಸ್ಕ್​​ ಸಿಬ್ಬಂದಿ ಪಕ್ಷಿಯ ರಕ್ಷಣೆಗೆ ಮುಂದಾದರು.

    ಇದನ್ನೂ ಓದಿ: ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!

    ಸೆಸ್ಕ್ ಲೈನ್‌ಮನ್ ನೂರುಲ್ಲಾ ಎಂಬುವರು ಪಕ್ಷಿಯ ರಕ್ಷಣೆ ಮಾಡಿದವರು. ಹಿರಿಯ ಅಧಿಕಾರಿಗಳ ಅನುಮತಿ ಮೇರೆಗೆ ವಿದ್ಯುತ್ ಕಡಿತಗೊಳಿಸಿ ವಿದ್ಯುತ್ ಕಂಬವೇರಿದ ನೂರುಲ್ಲಾ, ಕೋಲಿನಿಂದ ದಾರವನ್ನು ತುಂಡರಿಸಿ ಪಕ್ಷಿಯನ್ನು ಕೆಳಕ್ಕೆ ಬೀಳಿಸಿದರು. ಪಕ್ಷಿ ರಕ್ಷಣೆಗೆ ಸಾಥ್ ನೀಡಿದ ಸ್ಥಳೀಯರು, ಕೆಳಗಡೆ ಪಕ್ಷಿ ನೆಲಕ್ಕೆ ಬೀಳದಂತೆ ಚೀಲ ಹರಡಿಕೊಂಡು ನಿಂತಿದ್ದರು. ನಂತರ ಪಕ್ಷಿಯ ಕಾಲಿಗೆ ಸಿಕ್ಕಿದ್ದ ದಾರವನ್ನು ಬಿಡಿಸಿ ತೆಗೆದು, ಅದಕ್ಕೆ ಶುಶ್ರೂಷೆ ಮಾಡಿ ಬಿಡುಗಡೆಗೊಳಿಸಲಾಯಿತು.

    ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ

    ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts