More

    ವಯಸ್ಸು ಎಂಬುದು ಸಂಖ್ಯೆ ಮಾತ್ರ; ಮೊದಲ ಕಟೌಟ್ ನೋಡಿ ಕಣ್ತುಂಬಿ ಬಂತು ಎಂದ ಬಿರಾದಾರ್

    | ಪ್ರಮೋದ ಮೋಹನ ಹೆಗಡೆ

    ಈವರೆಗೆ ಸುಮಾರು 500 ಚಿತ್ರಗಳಲ್ಲಿ ಹಾಸ್ಯ ನಟ, ಪೋಷಕ ಕಲಾವಿದರಾಗಿ ಮಿಂಚಿರುವ ಬಿರಾದರ್, 71ನೇ ವಯಸ್ಸಿನಲ್ಲಿ ‘90 ಬಿಡಿ ಮನೀಗ್ ನಡಿ’ ಚಿತ್ರದ ಮೂಲಕ ಕಮರ್ಷಿಯಲ್ ಹೀರೋ ಆಗಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು 1972ರಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರೂ, ಗುರುತಿಸಿಕೊಂಡಿದ್ದು 1985ರಲ್ಲಿ ತೆರೆಗೆ ಬಂದ ‘ಶಂಖನಾದ’ ಚಿತ್ರದ ಮೂಲಕ. ಈ ಐದು ದಶಕಗಳ ಪಯಣ, 70ರ ಹೊಸ್ತಿಲಲ್ಲಿ ಹೀರೋ ಆಗಿದ್ದು, ಡಾನ್ಸ್, ೈಟ್ಸ್, ಮುಂದಿನ ಚಿತ್ರಗಳ ಬಗ್ಗೆ ಬಿರಾದಾರ್ ವಿಜಯವಾಣಿ ಜತೆ ಮಾತನಾಡಿದ್ದಾರೆ.

    71ನೇ ವಯಸ್ಸಲ್ಲಿ ಕಮರ್ಷಿಯಲ್ ಹೀರೋ ಆಗಿದ್ದು ಹೇಗನಿಸುತ್ತದೆ?
    ನಾನು ರಂಗಭೂಮಿ ಕಲಾವಿದ. ಯಾವುದೇ ಪಾತ್ರವಾದರೂ ಬಹಳ ಇಷ್ಟಪಟ್ಟು ಖುಷಿಯಿಂದ ಮಾಡುತ್ತೇನೆ. ಆದರೆ, ಇದೇ ಮೊದಲ ಬಾರಿಗೆ ಹೀರೋ ಪಾತ್ರ ಮಾಡಿದ್ದು ಖುಷಿಯಿದೆ. ಈಗಲಾದರೂ ಹೀರೋ ಪಾತ್ರ ಸಿಕ್ಕಿದೆ ಎಂಬ ದೊಡ್ಡ ಸಂತೋಷವಿದೆ. ಅದರಲ್ಲೂ, ಈ ಚಿತ್ರದಲ್ಲಿ ನಾನು ಡ್ಯಾನ್ಸ್, ೈಟ್ ಮಾಡಿದ್ದೇನೆ. ಅವೆಲ್ಲವೂ ನನಗೆ ಕಷ್ಟವಾಗಿದ್ದರೂ, ೈಟ್ ಮಾಸ್ಟರ್ ಮತ್ತು ನಿರ್ದೇಶಕರು ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಅದೊಂದು ಹೊಸ ಅನುಭವ.

    ವಯಸ್ಸು ಎಂಬುದು ಸಂಖ್ಯೆ ಮಾತ್ರ; ಮೊದಲ ಕಟೌಟ್ ನೋಡಿ ಕಣ್ತುಂಬಿ ಬಂತು ಎಂದ ಬಿರಾದಾರ್

    ನಿಮ್ಮ ಈ ಎನರ್ಜಿ ಹಿಂದಿನ ಗುಟ್ಟೇನು?
    ರಂಗಭೂಮಿಯಿಂದ ಬಂದವರಿಗೆ ಪಾತ್ರಕ್ಕೆ ತುಂಬಬೇಕಾದ ಎನರ್ಜಿ ಇರುತ್ತದೆ. ಹೆಚ್ಚೇನು ತೊಂದರೆ ಆಗಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಪಾತ್ರಕ್ಕಾಗಿ ನಾನು ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡುತ್ತೇನೆ. ಆ ನಿರ್ಧಾರವೇ ನನ್ನಲ್ಲಿ ಎನರ್ಜಿ ತುಂಬುತ್ತದೆ.

    ಇದನ್ನೂ ಓದಿ: ನಿರ್ದೇಶಕ ಪವನ್ ಒಡೆಯರ್ ಮನೆಗೆ ಲಕ್ಷ್ಮಿಆಗಮನ; ಎರಡನೇ ಬಾರಿ ತಾಯಿಯಾದ ಅಪೇಕ್ಷಾ ಪುರೋಹಿತ್

    ನಿಮ್ಮ ಸಿದ್ಲಿಂಗ ಪಾತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
    ಚಿತ್ರಕ್ಕೆ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರದಲ್ಲಿರುವ ದೃಶ್ಯಗಳು, ಹಾಡುಗಳು, ಎಲ್ಲರ ಅಭಿನಯ ತುಂಬಾ ಚೆನ್ನಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಈವರೆಗೆ ನಾನು ಮಾಡಿದ ಎಲ್ಲ ಪಾತ್ರಗಳೂ ಚೆನ್ನಾಗಿತ್ತು. ಈಗ ಹೀರೋ ಆಗಿ ಕೂಡ ನಾನು ತುಂಬಾ ಚೆನ್ನಾಗಿ ಮಾಡಿದ್ದೇನೆ ಎಂದು ಹೇಳುತ್ತಿರುವುದು ಕೇಳಿ ಖುಷಿಯಾಗಿದೆ.

    ಈವರೆಗಿನ 500 ಸಿನಿಮಾಗಳ ಪಯಣ ಹೇಗಿತ್ತು?
    ಹಿಂದಿರುಗಿ ನೋಡಿದರೆ ಈ ಪಯಣ ಖುಷಿ ಅನಿಸುತ್ತದೆ. 500 ಚಿತ್ರಗಳನ್ನು ಮಾಡೋದು ಸುಲಭವಲ್ಲ. 1981ರಲ್ಲಿ ನಾನು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದೆ. ಈಗ ಅದೇ ಜಾಗದಲ್ಲಿ ನನ್ನದೊಂದು 40 ಅಡಿ ಎತ್ತರದ ಕಟೌಟ್ ನೋಡುವಾಗ ಖುಷಿ ಮತ್ತು ಕಣ್ತುಂಬಿ ಬರುತ್ತದೆ. ಇದಕ್ಕೆ ಸಿನಿಮಾ ರಂಗದವರು, ಪ್ರೇಕ್ಷಕರು ಪ್ರತಿಯೊಬ್ಬರ ಪ್ರೋತ್ಸಾಹವಿದೆ. ರಾಜಕುಮಾರ್, ಶಿವಣ್ಣ, ಪುನೀತ್ ಸೇರಿ ಅದೆಷ್ಟೋ ಕಲಾವಿದರ ಜತೆ ಕೆಲಸ ಮಾಡಿದ್ದೀನಿ. ಅವರೆಲ್ಲರಿಗೂ ಪ್ರೀತಿ ಪಾತ್ರನಾಗಿದ್ದೀನಿ.

    ಇದನ್ನೂ ಓದಿ:ಅತ್ತ “ಕೆಡಿ’, ಇತ್ತ “ಮಾರ್ಟಿನ್​’ – ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾದ ಧ್ರುವ ಸರ್ಜಾ

    ಮುಂದಿನ ಪ್ಲ್ಯಾನ್ ಏನು?
    ನನಗೆ ಬಣ್ಣವೇ ಬದುಕು. ರಂಗಭೂಮಿ, ಸಿನಿಮಾ ಬಿಟ್ಟು ಬೇರೆ ಕೆಲಸ ನನಗೆ ಗೊತ್ತಿಲ್ಲ. ಇದೇ ಕೆಲಸ ಮಾಡುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts