More

    1983ರ ವಿಶ್ವಕಪ್ ತಾರೆಯರ ಪಾತ್ರದಲ್ಲಿ ಪುತ್ರರದ್ದೇ ನಟನೆ!

    ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಾಯಿಸಿದ 1983ರ ಏಕದಿನ ವಿಶ್ವಕಪ್ ಗೆಲುವಿನ ಯಶೋಗಾಥೆ ‘83’ ಹೆಸರಿನಲ್ಲಿ ಬೆಳ್ಳಿಪರದೆಯಲ್ಲಿ ಮೂಡಿಬರುತ್ತಿದ್ದು, ಕರೊನಾದಿಂದಾಗಿ ಲಾಕ್‌ಡೌನ್ ಜಾರಿಯಾಗದಿದ್ದರೆ ಈಗಾಗಲೆ ಈ ಸಿನಿಮಾ ಬಿಡುಗಡೆಯನ್ನೂ ಕಾಣಬೇಕಾಗಿತ್ತು. ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ತಾರೆ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿರುವುದು ಈಗಾಗಲೆ ಜಗಜ್ಜಾಹೀರಾಗಿದೆ. ಸಿನಿಮಾದಲ್ಲಿ ಮತ್ತಿಬ್ಬರು ಕ್ರಿಕೆಟಿಗರ ಪಾತ್ರದಲ್ಲಿ ಆ ಕ್ರಿಕೆಟಿಗರ ಪುತ್ರರೇ ಅಭಿನಯಿಸುತ್ತಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: VIDEO|ಶೇನ್ ವಾರ್ನ್ ಶತಮಾನದ ಎಸೆತಕ್ಕೆ 27 ವರ್ಷ

    ವಿಶ್ವ ವಿಜೇತ ಭಾರತ ತಂಡದಲ್ಲಿ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಸಂದೀಪ್ ಪಾಟೀಲ್ ಅವರದು ಪ್ರಮುಖ ಪಾತ್ರವಿದೆ. ಬೆಳ್ಳಿ ಪರದೆಯಲ್ಲಿ ಅವರ ಪಾತ್ರವನ್ನು ಪುತ್ರ ಚಿರಾಗ್ ಪಾಟೀಲ್ ಅವರೇ ನಿರ್ವಹಿಸುತ್ತಿದ್ದಾರೆ. 33 ವರ್ಷದ ಚಿರಾಗ್ ಈಗಾಗಲೆ ಮರಾಠಿ ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸಿದ ಅನುಭವ ಹೊಂದಿದ್ದಾರೆ. ಅಪ್ಪನಂತೆ ಕ್ರಿಕೆಟಿಗನಾಗದೆ ನಟನೆಯತ್ತ ಮುಖ ಮಾಡಿದ್ದರೂ ಚಿರಾಗ್ ಪಾಟೀಲ್‌ಗೆ ಈಗ ಅಪ್ಪನ ವೃತ್ತಿಜೀವನದ ವಿಶೇಷ ಅನುಭವವನ್ನು ಸವಿಯುವ ಅವಕಾಶ ಲಭಿಸಿದೆ.

    ಇದನ್ನೂ ಓದಿ: ಯುವರಾಜ್ ಸಿಂಗ್​ ವಿರುದ್ಧ ಪೊಲೀಸ್ ಕೇಸ್!

    ‘ನನ್ನ ತಮ್ಮ ಅಪ್ಪನಂತೆಯೇ ಕಾಣಿಸುತ್ತಾನೆ. ಆದರೆ ನಾನು ಅಪ್ಪನ ಹೋಲಿಕೆ ಹೊಂದಿಲ್ಲ. ಆದರೆ ನನ್ನ ಮ್ಯಾನರಿಸಂ ಅವರಂತೆಯೇ ಇದೆ. ಅವರಂತೆಯೇ ನಡೆಯುತ್ತೇನೆ ಮತ್ತು ಮಾನತಾಡುತ್ತೇನೆ. ಕಪಿಲ್ ದೇವ್ ಅವರ ಮ್ಯಾನರಿಸಂಗಳನ್ನು ಅರಿತುಗೊಳ್ಳಲು ಅವರ ಮನೆಯಲ್ಲಿ 10 ದಿನಗಳನ್ನು ರಣವೀರ್ ಸಿಂಗ್ ಕಳೆದಿದ್ದರು. ಆದರೆ ನನಗೆ ಸಂದೀಪ್ ಪಾಟೀಲ್ ಮ್ಯಾನರಿಸಂ ಸ್ವಾಭಾವಿಕವಾಗಿಯೇ ಬಂದಿದೆ. ಆದರೆ ಕ್ರಿಕೆಟ್ ಆಟವನ್ನು ಕಲಿತುಕೊಳ್ಳುವುದು ನನಗೆ ದೊಡ್ಡ ಸವಾಲಾಗಿತ್ತು’ ಎಂದು ಚಿರಾಗ್ ಪಾಟೀಲ್ ಹೇಳಿದ್ದಾರೆ.

    ಗ್ರೀನಿಜ್, ಮಾರ್ಷಲ್ ಪಾತ್ರದಲ್ಲೂ ಪುತ್ರರ ನಟನೆ

    1983ರ ವಿಶ್ವಕಪ್ ತಾರೆಯರ ಪಾತ್ರದಲ್ಲಿ ಪುತ್ರರದ್ದೇ ನಟನೆ!

    1983ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿದ್ದ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಗಾರ್ಡನ್ ಗ್ರೀನಿಜ್ ಅವರ ಪಾತ್ರದಲ್ಲೂ ಅವರ ಪುತ್ರ ಕಾರ್ಲ್ ಗ್ರೀನಿಜ್ ನಟಿಸಿದ್ದಾರೆ. ಇನ್ನು ವಿಂಡೀಸ್ ವೇಗದ ಬೌಲಿಂಗ್ ದಿಗ್ಗಜ ಮಾಲ್ಕಂ ಮಾರ್ಷಲ್ ಪಾತ್ರದಲ್ಲಿ ಅವರ ಪುತ್ರ ಮಲಿ ಮಾರ್ಷಲ್ ಅಭಿನಯಿಸಿದ್ದಾರೆ. 42 ವರ್ಷದ ಕಾರ್ಲ್ ಗ್ರೀನಿಜ್ ವೇಗದ ಬೌಲರ್ ಆಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದರೂ, ಸಿನಿಮಾದಲ್ಲಿ ತಂದೆಯ ಬ್ಯಾಟ್ಸ್‌ಮನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ವೇಗದ ಬೌಲರೇ ಆಗಿರುವ ಮಲಿ ಮಾರ್ಷಲ್, ತಂದೆಯಂತೆಯೇ ಬೌಲಿಂಗ್ ಶೈಲಿ ಹೊಂದಿರುವುದು ಪಾತ್ರಕ್ಕೆ ಪೂರಕವಾಗಿದೆ.

    ಇದನ್ನೂ ಓದಿ: ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅಭ್ಯಾಸಕ್ಕೆ ಅಪ್ಪನ ನೆರವು…!

    ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ ಅವರ ಪುತ್ರ ಜೇಸನ್ ಲಾಯ್ಡ ಕೂಡ ‘83’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಅದು ತಂದೆಯ ಪಾತ್ರದಲ್ಲಲ್ಲ. ಜೇಸನ್ ಲಾಯ್ಡ 6.8 ಅಡಿ ಎತ್ತರ ಇರುವುದರಿಂದಾಗಿ ತಂದೆಯ ಪಾತ್ರದ ಬದಲಾಗಿ ವೇಗಿ ಜೋಯೆಲ್ ಗಾರ್ನರ್ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಮಾಜಿ ಬ್ಯಾಟ್ಸ್‌ಮನ್ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಲಾರಿ ಗೋಮ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಕೌಶಲ ಮತ್ತು ಕ್ರಿಕೆಟಿಗರ ಜತೆಗಿನ ಹೋಲಿಕೆಗಳಿಂದಾಗಿ ಇವರನ್ನು ಸಿನಿಮಾಗೆ ಆರಿಸಲಾಗಿದೆ.

    ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts