More

    ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅಭ್ಯಾಸಕ್ಕೆ ಅಪ್ಪನ ನೆರವು…!

    ಕೋಲ್ಕತ: ಮನೆಯಲ್ಲಿ ಅಪ್ಪ-ಅಮ್ಮಂದಿರಿಗೆ ಮಕ್ಕಳ ಜತೆ ಕಾಲಕಳೆಯಲು ಸಾಕಷ್ಟು ಸಮಯ ಮಾಡಿಕೊಟ್ಟಿತು ಈ ಲಾಕ್‌ಡೌನ್. ಮಕ್ಕಳೊಂದಿಗೆ ಆಟವಾಡುತ್ತಾ ಲಾಕ್‌ಡೌನ್ ಬೇಸರ ಕಳೆದವರಿಗೆ ಲೆಕ್ಕವಿಲ್ಲ. ಎರಡು ಮಕ್ಕಳ ತಂದೆ ಎನಿಸಿಕೊಂಡರೂ ಭಾರತ ಟೆಸ್ಟ್ ತಂಡದ ವಿಕೆಟ್-ಕೀಪರ್ ವೃದ್ಧಿಮಾನ್ ಸಾಹ ಕೂಡ ಈ ವೇಳೆ ತಮ್ಮ ತಂದೆಯೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ. ದಕ್ಷಿಣ ಕೋಲ್ಕತದಲ್ಲಿರುವ ಸಾಹ ಮನೆಯಲ್ಲೇ ತಂದೆ ಪ್ರಶಾಂತ್ ಸಾಹ ಜತೆಗೂಡಿ ಪ್ರತಿದಿನ ಕ್ಯಾಚ್ ಹಿಡಿಯುವ ಅಭ್ಯಾಸ ಮಾಡುತಿದ್ದಾರಂತೆ.

    ಇದನ್ನೂ ಓದಿ: ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

    ಇತ್ತೀಚೆಗಷ್ಟೇ ಎರಡನೇ ಮಗುವಿನ ತಂದೆಯಾದ ವೃದ್ಧಿಮಾನ್ ಸಾಹ, ಕೋಲ್ಕತದಲ್ಲಿ ತಮ್ಮ ಕುಟುಂಬದೊಂದಿಗೆ ಲಾಕ್ ಆಗಿದ್ದಾರೆ. ಇತರ ಆಟಗಾರರಂತೆ ಕೇವಲ ಫಿಟ್ನೆಸ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗದೆ, ಮನೆಯಲ್ಲೇ ತಂದೆಯೊಂದಿಗೆ ಕ್ರಿಕೆಟ್ ಆಡುವ ಮೂಲಕ ಫಿಟ್ ಆಗಿರಲು ಯತ್ನಿಸುತ್ತಿದ್ದಾರೆ. ಸ್‌ಟಾಬಾಲ್‌ನಲ್ಲಿ ಮನೆ ಗೋಡೆಗೆ ಹೊಡೆದು ಕ್ಯಾಚ್ ಹಿಡಿಯುವ ಅಭ್ಯಾಸ ಮಾಡಿದರೆ, ವಿಕೆಟ್ ಕೀಪಿಂಗ್ ಮಾಡುವಾಗ ತಂದೆ ಎಸೆಯುತ್ತಿದ್ದ ಕ್ಯಾಚ್ ಹಿಡಿಯುತ್ತಾರಂತೆ ಎಂದು ಸಾಹ ಹೇಳಿಕೊಂಡಿದ್ದಾರೆ.

    ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅಭ್ಯಾಸಕ್ಕೆ ಅಪ್ಪನ ನೆರವು...!

    2018ರಲ್ಲಿ ಭುಜದ ನೋವಿಗೆ ಶಸಚಿಕಿತ್ಸೆಗೆ ಒಳಗಾಗಿದ್ದ ಸಾಹ, ಕೆಲದಿನಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. 35 ವರ್ಷದ ಸಾಹ ರಾಷ್ಟ್ರೀಯ ತಂಡದ ಪರ 37 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಪೂರ್ವನಿಗದಿಯಂತೆ ನಡೆದರೆ ಮುಂದಿನ ಡಿಸೆಂಬರ್‌ನಲ್ಲಿ ಸಾಹ ಆಸ್ಟ್ರೇಲಿಯಾ ಪ್ರವಾಸ ಟೆಸ್ಟ್ ಸರಣಿಗೆ ಸಿದ್ಧವಾಗಲಿದ್ದಾರೆ.

     ಈ ದಿಗ್ಗಜರಿಗೆ ಒಲಿಯಲೇ ಇಲ್ಲ ಖೇಲ್‌ರತ್ನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts