More

    ಪಲ್ಸ್​ ಮೀಟರ್​ ಪೂರೈಕೆ ನೆಪದಲ್ಲಿ 7 ಲಕ್ಷ ವಂಚನೆ; ಸ್ಟೇಷನರಿ ಅಂಗಡಿ ಮಾಲೀಕನಿಂದ ದೂರು

    ಬೆಂಗಳೂರು: ಪಲ್ಸ್​ ಮೀಟರ್​ ಪೂರೈಕೆ ಮಾಡುವುದಾಗಿ ನಂಬಿಸಿ ಸ್ಟೇಷನರಿ ಅಂಗಡಿ ಮಾಲೀಕನಿಂದ 7.50 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನ್ಯೂ ತಿಪ್ಪಸಂದ್ರದ ದಯಾ ಮಾರ್ಟ್​ ಸ್ಟೇಷನರಿ ಅಂಗಡಿ ಮಾಲೀಕ ಹುಕ್ಕಂ ಸಿಂಗ್​ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಆಂಕುರ್​ ಸಿಂಗ್​ ಮತ್ತು ಮಂಡಲ್​ ವಿರುದ್ಧ ಎಫ್​ಐಆರ್​ ದಾಖಲಿಸಿ ಜೀವನ್​ಬೀಮಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    10 ವರ್ಷಗಳಿಂದ ಸ್ಟೇಷನರಿ ಅಂಗಡಿ ನಡೆಯುತ್ತಿರುವ ಹುಕ್ಕಂ ಸಿಂಗ್​, ಕೋವಿಡ್​ 19ರ ವೇಳೆ ಪಲ್ಸ್​ ಮೀಟರ್​ಗೆ ಹೆಚ್ಚಿನ ಗ್ರಾಹಕರು ಇದ್ದುದ್ದನ್ನು ಗಮನಿಸಿದ್ದರು. ಅದಕ್ಕಾಗಿ ಏಪ್ರಿಲ್​ 28ರಂದು ತನ್ನ ಮೊಬೈಲ್​ಗೆ ಮಾಹಿತಿ ಬಂದಿದ್ದ ಪಲ್ಸ್​ ಮೀಟರ್​ ಪೂರೈಕೆದಾರರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ, ವಿಡಿಯೋ ಕಾಲ್​ ಮಾಡಿ ಪೂರೈಕೆ ಮಾಡುವುದಾಗಿ ವಿಳಾಸ ಪಡೆದು 20 ಸಾವಿರ ರೂ. ಮುಂಗಡ ಹಣವನ್ನು ಪೇಟಿಮ್​ಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಹುಕ್ಕಂ ಸಿಂಗ್​ ಸಹ 1 ಸಾವಿರ ಪಲ್ಸ್​ ಮೀಟರ್​ ಬೇಕೆಂದು ಹೇಳಿದ್ದರು. ಅದಕ್ಕೆ ಒಪ್ಪಿದ ಆರೋಪಿಗಳು ಸ್ವಲ್ಪ ದಿನ ಬಿಟ್ಟು ಮತ್ತೆ 30 ಸಾವಿರ ರೂ. ಪಡೆದಿದ್ದರು. ಆನಂತರ ಕರೊನಾ ಕರ್ಫ್ಯೂ ಜಾರಿಯಾದ ಕಾರಣ ವ್ಯವಹಾರ ನಡೆಸದೆ ಸುಮ್ಮನಾಗಿದ್ದರು. ಇತ್ತೀಚೆಗೆ ಮತ್ತೆ ಆರೋಪಿ, ಹುಕ್ಕಂ ಸಿಂಗ್​ಗೆ ಕರೆ ಮಾಡಿ ಇಂದೂರ್​ನಲ್ಲಿ ನಮ್ಮ ಸಂಬಂಧಿ ಇದ್ದಾನೆ. ಆತ ನಿನಗೆ 10 ರೂ. ನೋಟಿನ ಫೋಟೋ ಕಳುಹಿಸುತ್ತಾರೆ. ಆತನಿಗೆ 7 ಲಕ್ಷ ರೂ. ಆನ್​ಲೈನ್​ನಲ್ಲಿ ವರ್ಗಾವಣೆ ಮಾಡುವಂತೆ ಹೇಳಿದ್ದರು. ಸ್ವಲ್ಪ ಹೊತ್ತಿಗೆ ಹುಕ್ಕಂ ಸಿಂಗ್​ಗೆ ಕರೆ ಮಾಡಿದ ವ್ಯಕ್ತಿ, 10 ರೂ. ನೋಟಿನ ಫೋಟೋವನ್ನು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿ 7 ಲಕ್ಷ ರೂ. ಪಾವತಿ ಮಾಡಿದರೆ ಪಲ್ಸ್​ ಮೀಟರ್​ ಕಳುಹಿಸುವುದಾಗಿ ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ, ದಿನಗಳೇ ಕಳೆದರು ಪಾರ್ಸಲ್​ ಮಾತ್ರ ಕೈ ಸೇರಲಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಗೇ ಲವ್​ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts