More

    50 ಸಾವಿರ ರೂ. ದಾಟಿದ ಮೆಣಸಿನಕಾಯಿ ದರ, ಬ್ಯಾಡಗಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

    ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಗುಣಮಟ್ಟದ ಕಾಯಿಗಳ ಕ್ವಿಂಟಾಲ್ ದರ 50 ಸಾವಿರ ರೂಪಾಯಿ ದಾಟಿದೆ.

    ಮಾರುಕಟ್ಟೆ ನವೆಂಬರ್ ಮೊದಲ ವಾರದಿಂದ ಏರಿಕೆಯಾಗುವ ಲಕ್ಷಣವಿದೆ. ಈಗ ದೊಡ್ಡ ಪ್ರಮಾಣದಲ್ಲಿ ಆವಕ ಇಲ್ಲವಾದರೂ ವಾರದ ಸೋಮವಾರ ಹಾಗೂ ಗುರುವಾರ 5ರಿಂದ 10 ಸಾವಿರ ಚೀಲಗಳು ಟೆಂಡರ್​ನಲ್ಲಿ ಕಾಯಂ ವ್ಯಾಪಾರ ನಡೆದಿದೆ. ಕಳೆದ ಎರಡು ವರ್ಷದಿಂದ ಬ್ಯಾಡಗಿ ಡಬ್ಬಿ ಹಾಗೂ ಕಡ್ಡಿ ತಳಿಯ ಮೆಣಸಿನಕಾಯಿಗೆ ಭಾರಿ ಬೇಡಿಕೆ ಲಭಿಸಿದೆ.

    ಬಂಪರ್ ಬೆಳೆಯಿಂದ ರೈತರು ಸಾಕಷ್ಟು ಖುಷಿಯಲ್ಲಿದ್ದು, ಈಗ ಅರ್ಧ ಲಕ್ಷ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ಈ ವರ್ಷವೂ ದರ ಇನ್ನಷ್ಟು ಏರಬಹುದು ಎಂಬ ಲೆಕ್ಕಾಚಾರ ವರ್ತಕರಿಂದ ಕೇಳಿಬಂದಿದೆ.

    ಇಲ್ಲಿನ ಮೆಣಸಿನಕಾಯಿಗೆ ಬಾರಿ ಡಿಮಾಂಡ್ ಬಂದಿದೆ. ಬ್ಯಾಡಗಿಯ 25ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್​ಗಳಲ್ಲಿ ಮೆಣಸಿನಕಾಯಿ ಸಂಗ್ರಹವಿದ್ದು, ವರ್ಷದ 12 ತಿಂಗಳು ನಿರಂತರ ವ್ಯಾಪಾರಕ್ಕೆ ನಾಂದಿಯಾಗಿದೆ. 2022-23ರಲ್ಲಿ ಮಾರುಕಟ್ಟೆಯಲ್ಲಿ 2 ಸಾವಿರ ಕೋಟಿ ರೂ. ಹೆಚ್ಚು ವಹಿವಾಟು ನಡೆದಿದ್ದು, ದೇಶದಲ್ಲಿ ಆಂಧ್ರದ ಗುಂಟೂರು ಮೊದಲ ಸ್ಥಾನದಲ್ಲಿದ್ದರೆ, ಬ್ಯಾಡಗಿ ಮಾರುಕಟ್ಟೆ ಎರಡನೇ ಸ್ಥಾನ ಪಡೆದಿರುವುದು ರಾಜ್ಯಕ್ಕೆ ಹೆಮ್ಮೆಯಾಗಿದೆ.

    ಇಂದಿನ ದರ:

    ಕಡ್ಡಿ ಮೆಣಸಿನಕಾಯಿ 2241ರಿಂದ 51,700 ಮಾರಾಟವಾಗಿದ್ದು, ಸರಾಸರಿ 34,699 ದರವಿದೆ.

    ಡಬ್ಬಿ ತಳಿ 3359ರಿಂದ 57,000 ದರವಿದ್ದು, ಸರಾಸರಿ 42,500 ದರವಿದೆ.

    ಗುಂಟೂರು 1569ರಿಂದ 18,699 ಮಾರಿದ್ದು, ಸರಾಸರಿ ದರ 16,599 ಎಂದು ತಿಳಿದುಬಂದಿದೆ. ಗುರುವಾರದ ಮಾರುಕಟ್ಟೆಯಲ್ಲಿ ಒಟ್ಟು 7245 ಚೀಲಗಳು ಆವಕವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts