More

    ಕರೊನಾ ವೈರಸ್​ಗೆ ಭಾರತದಲ್ಲಿ ನಾಲ್ಕನೇ ಸಾವು; ಪಂಜಾಬ್​ನಲ್ಲಿ ಮೃತನಾದ 72 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ

    ಚಂಡೀಗಢ: ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದೇಶ ಮತ್ತು ವಿದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಇಂದು ದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಪಂಜಾಬ್​ನಲ್ಲಿ ಬುಧವಾರದಂದು ಮರಣ ಹೊಂದಿದ 72 ವರ್ಷದ ವೃದ್ಧನಲ್ಲಿ ಕರೊನಾ ವೈರಸ್​ ಪತ್ತೆಯಾಗಿರುವುದಾಗಿ ವರದಿ ಬಂದಿದೆ.

    ಮೃತನಾಗಿರುವ ವೃದ್ಧ ಜರ್ಮನಿ ಪ್ರವಾಸ ಕೈಗೊಂಡಿದ್ದು, ಭಾರತಕ್ಕೆ ವಾಪಾಸು ಬರುವಾಗ ಇಟಲಿ ಮುಖಾಂತರ ಬಂದಿದ್ದ. ಮಾರ್ಚ್​ 7ರಂದು ಪಂಜಾಬ್​ಗೆ ಬಂದಿಳಿದ ವೃದ್ಧನಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಮಾರ್ಚ್​ 18ರಂದು ಆತನನ್ನು ನವಾಶಹಾರ್​ ಜಿಲ್ಲೆಯ ಬಂಗಾ ಹೆಲ್ತ್​ ಕಮ್ಯುನಿಟಿ ಸೆಂಟರ್​ನಲ್ಲಿ ದಾಖಲಿಸಿಕೊಳ್ಳಲಾಗಿದೆ. ವೃದ್ಧನಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗಳಿದ್ದು ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

    ವೃದ್ಧನ ಕರೊನಾ ತಪಾಸಣೆಯ ವರದಿ ನಿನ್ನೆ ರಾತ್ರಿ ಬಂದಿದ್ದು ಅದರಲ್ಲಿ ಆತನಿಗೆ ಕರೊನಾ ಇರುವುದು ಖಾತ್ರಿಯಾಗಿದೆ ಎಂದು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ(PGIMER)ಯ ನಿರ್ದೇಶಕರಾಗಿರುವ ಜಗತ್​ ರಾಮ್​ ತಿಳಿಸಿದ್ದಾರೆ. ವೃದ್ಧನ ಸಾವಿನೊಂದಿಗೆ ದೇಶದಲ್ಲಿ ಕರೊನಾದಿಂದಾಗಿ ಸತ್ತವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್​)

    VIDEO| ಆಸ್ಪತ್ರೆಯಿಂದ ಬಂದ ಪತಿಯನ್ನು ಡ್ಯಾನ್ಸ್​ ಮಾಡಿ ಸ್ವಾಗತಿಸಿದ ಪತ್ನಿ; ವೃದ್ಧ ದಂಪತಿಯ ಪ್ರೀತಿಗೆ ನೆಟ್ಟಿಗರು ಫಿದಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts