More

    ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರ ಕೊಲೆ!; ಇದು ಸಮಾಧಾನದ ಸಂಗತಿ, ಏಕೆಂದರೆ..

    ನವದೆಹಲಿ: ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಕೊಲೆಯಾಗಿದೆ. ಇಂಟರ್​ನ್ಯಾಷನಲ್​ ಫೆಡರೇಷನ್​ ಆಫ್​ ಜರ್ನಲಿಸ್ಟ್ಸ್​ (ಐಎಫ್​ಜೆ) ಈ ಕುರಿತ ಅಂಕಿ-ಅಂಶವನ್ನು ಬಹಿರಂಗಪಡಿಸಿದೆ. 45 ಪತ್ರಕರ್ತರ ಕೊಲೆಯಾಗಿದ್ದರೂ ಇದೊಂದು ಸಮಾಧಾನದ ಸಂಗತಿ ಎಂದೇ ಹೇಳಲಾಗಿದೆ.

    ಐಎಫ್​ಜೆ ಮಾಹಿತಿ ಪ್ರಕಾರ 2021ರಲ್ಲಿ ಜಗತ್ತಿನ 20 ದೇಶಗಳಲ್ಲಿ ಒಟ್ಟು 45 ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಕೊಲೆಯಾಗಿದೆ. ಇದಕ್ಕೂ ಹಿಂದಿನ ವರ್ಷ ಅಂದರೆ 2020ರಲ್ಲಿ ವಿಶ್ವದಲ್ಲಿ 65 ಪತ್ರಕರ್ತರ ಕೊಲೆಯಾಗಿತ್ತು. ಇನ್ನು ಕಳೆದ 30 ವರ್ಷಗಳಲ್ಲಿ ಅಂದರೆ 1991ರಿಂದ 2021ರ ವರೆಗೆ ಪ್ರಪಂಚದಲ್ಲಿ 2,721 ಪತ್ರಕರ್ತರ ಕೊಲೆಯಾಗಿದೆ ಎಂದು ಐಎಫ್​ಜೆ ಹೇಳಿದೆ.

    ಇದನ್ನೂ ಓದಿ: ಬಾಲಕನ ಮೇಲೆಯೇ ಅತ್ಯಾಚಾರವೆಸಗಿದ ಯುವಕ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

    ಐಎಫ್​ಜೆ ಸ್ಥಾಪನೆ ಆದಾಗಿನಿಂದ ಇಂಥದ್ದೊಂದು ಮಾಹಿತಿಯನ್ನು ಪ್ರಕಟಿಸುತ್ತಲೇ ಬಂದಿದೆ. ಅಂದರೆ ಜಗತ್ತಿನಲ್ಲಿ ವೃತ್ತಿ ಸಂಬಂಧಿತ ವಿಚಾರಕ್ಕೆ ಕೊಲೆಯಾದ-ಸಾವಿಗೀಡಾದ, ಬಾಂಬ್ ದಾಳಿಗೆ ಒಳಗಾದ ಪತ್ರಕರ್ತರು-ಮಾಧ್ಯಮ ಪ್ರತಿನಿಧಿಗಳ ಸಂಖ್ಯೆಯನ್ನು ಇದು ಪ್ರಕಟಿಸುತ್ತಿದೆ. ಅಂದಹಾಗೆ ಈ ಸಲದ ಸಂಖ್ಯೆ ಇದುವರೆಗಿನ ಎಲ್ಲ ವರ್ಷಗಳಿಂತಲೂ ಅತಿ ಕಡಿಮೆಯದ್ದಾಗಿದೆ ಎಂದು ಅದು ಸಮಾಧಾನ ವ್ಯಕ್ತಪಡಿಸಿದೆ.

    ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

    ನಿರ್ಮಾಣ ಹಂತದ ಮನೆ-ಕಟ್ಟಡಗಳೇ ಇವರ ಟಾರ್ಗೆಟ್; ಇವರು ಕದಿಯುತ್ತಿದ್ದುದೇ ಬೇರೆ..

    ಚಿನ್ನದಂಗಡಿಯ ಹುಡುಗಿಯ ಹೃದಯಕ್ಕೆ ಕನ್ನ ಹಾಕುವ ಯತ್ನ; ಕೊನೆಗೂ ಸೋತು ಆಕೆಗೆ ಚೂರಿ ಇರಿದವ ಹೆಣವಾಗಿ ಸಿಕ್ಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts