More

    ಮೊದಲನೇ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ 420 ವೈದ್ಯರು ಕರೊನಾಗೆ ಬಲಿ!

    ನವದೆಹಲಿ: ಕರೊನಾ ಸೋಂಕು ಮೊದಲನೇ ಅಲೆ ಮುಗಿಸಿ ಎರಡನೇ ಅಲೆ ಮೂಲಕ ದೇಶಾದ್ಯಂತ ಹರಡುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನೂರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯೂ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದ್ದಾರೆ.

    ಕರೊನಾದಿಂದಾಗಿ ಸಾವನ್ನಪ್ಪುತ್ತಿರುವ ವೈದ್ಯರ ಕುರಿತಾಗಿ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್ ವರದಿಯೊಂದನ್ನು ಸಿದ್ಧಪಡಿಸಿದೆ. ಆ ವರದಿಯ ಪ್ರಕಾರ ಕರೊನಾ ಎರಡನೇ ಅಲೆಯಲ್ಲಿ 420 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ 100 ವೈದ್ಯರು ರಾಷ್ಟ್ರ ರಾಜಧಾನಿ ನವದೆಹಲಿಯರೇ ಆಗಿದ್ದಾರೆ. ಉಳಿದಂತೆ ಬಿಹಾರದಲ್ಲಿ 96, ಉತ್ತರ ಪ್ರದೇಶದಲ್ಲಿ 41 ವೈದ್ಯರನ್ನು ಸೋಂಕು ಬಲಿ ತೆಗೆದುಕೊಂಡಿದೆ. ಈ 420ವೈದ್ಯರಲ್ಲಿ ಐಎಂಎ ಮಾಜಿ ಅಧ್ಯಕ್ಷರಾದ ಡಾ.ಕೆಕೆ ಅಗರ್ವಾಲ್​ ಕೂಡ ಒಬ್ಬರಾಗಿದ್ದಾರೆ.

    ಕರೊನಾ ಮೊದಲನೇ ಅಲೆಯಲ್ಲಿ 748 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. “ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಎಲ್ಲರಿಗೂ, ಅದರಲ್ಲೂ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿದೆ” ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ವಾರದ ಆರಂಭದಲ್ಲಿ ಹೇಳಿದ್ದರು. (ಏಜೆನ್ಸೀಸ್​)

    ವರದಕ್ಷಿಣೆಯಾಗಿ ಬುಲೆಟ್​ ಕೊಡದ ಮಾವನಿಗೆ ಬೈದ ಅಳಿಯ! ಜೀವನದಲ್ಲಿ ಬುಲೆಟ್ ಬೇಡವೆಂದು ಕೈ ಮುಗಿಯುವಂತೆ ಮಾಡಿದ ಗ್ರಾಮಸ್ಥರು

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts